ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜೂನ್ 01: ಶಿವಮೊಗ್ಗ-ಶೃಂಗೇರಿ-ಮಂಗಳೂರು ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ (ಎಫ್.ಎಲ್.ಎಸ್) ಗೆ ರೈಲ್ವೆ ಇಲಾಖೆಯು ಅನುಮೋದನೆ ನೀಡಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ಟೆಂಡರ್ ಆಹ್ವಾನಿಸಲು ಸಿದ್ದತೆ ನಡೆಸಿದೆ.
ಮಧ್ಯ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದ ನಡುವೆ ನೇರ ಸಂಪರ್ಕ ಕಲ್ಪಿಸುವ ಸದರಿ ಯೋಜನೆಯು ಅತ್ಯಂತ ಮಹತ್ವದ್ದಾಗಿದೆ. 332 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ 3,300 ಕೋಟಿ ರೂ. ಯೋಜನಾ ವೆಚ್ಚ ಅಂದಾಜಿಸಲಾಗಿದೆ.
2018 ರಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಮಾಜಿ ಸಿಎಂ ಡಿ ವಿ ಸದಾನಂದಗೌಡರವರು ಶಿವಮೊಗ್ಗ-ಮಂಗಳೂರು ರೈಲ್ವೆ ಮಾರ್ಗ ಯೋಜನೆ ಘೋಷಿಸಿದ್ದರು. ಮಾರ್ಗ ಸಮೀಕ್ಷೆಗೆ ಅನುಮತಿ ನೀಡಿದ್ದರು. ತದನಂತರದ ವರ್ಷಗಳಲ್ಲಿ ಯೋಜನೆಯ ಸಮೀಕ್ಷೆ, ಪ್ರಾಥಮಿಕ ಅಧ್ಯಯನ ನಡೆಸಲಾಗಿತ್ತು. ಇದೀಗ ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ ನೀಡಲಾಗಿದೆ. ಮಾರ್ಗ ಹಾದು ಹೋಗುವ ಸ್ಥಳ ಗುರುತಿಸಿದ ನಂತರ ಭೂ ಸ್ವಾದೀನ ಪ್ರಕ್ರಿಯೆ ನಡೆದು ರೈಲ್ವೆ ಮಾರ್ಗ ನಿರ್ಮಾಣ ಪ್ರಕ್ರಿಯೆ ಆರಂಭವಾಗಬೇಕಾಗಿದೆ.
ನೂತನ ಮಾರ್ಗ ಎಲ್ಲೆಲ್ಲಿ ಹಾದು ಹೋಗಲಿದೆ ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ. ಡಿಪಿಆರ್ ಆದ ಬಳಿಕವಷ್ಟೆ ಮಾರ್ಗ ಹಾದು ಹೋಗುವ ಪ್ರದೇಶಗಳು, ನಿಲ್ದಾಣಗಳು, ಭೂಸ್ವಾದೀನದ ಪ್ರಮಾಣ ಮತ್ತೀತರ ವಿವರಗಳು ಲಭ್ಯವಾಗಬೇಕಾಗಿದೆ.
ಲಭ್ಯ ಮಾಹಿತಿ ಅನುಸಾರ ಶಿವಮೊಗ್ಗ – ಸಾಗರ ರೈಲು ಮಾರ್ಗದಲ್ಲಿ ಬರುವ ಹೊಸನಗರ ತಾಲೂಕಿನ ಅರಸಾಳು ರೈಲು ನಿಲ್ದಾಣದಿಂದ ರಿಪ್ಪನ್’ಪೇಟೆ, ತೀರ್ಥಹಳ್ಳಿ ತಾಲೂಕಿನ ಕೋಣಂದೂರು, ತೀರ್ಥಹಳ್ಳಿ ಟೌನ್ ಮೂಲಕ ಶೃಂಗೇರಿ, ಕಾರ್ಕಳ ಮಾರ್ಗವಾಗಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಉದ್ದೇಶವಿದೆ.
ಹಾಗೆಯೇ ಈ ಹಿಂದೆ ಭದ್ರಾವತಿ ವಿಐಎಸ್’ಎಲ್ ಕಾರ್ಖಾನೆಗೆ ಕುದುರೆಮುಖದಿಂದ ಕಬ್ಬಿಣದ ಅದಿರು ಸಾಗಾಣೆಗೆ ಭದ್ರಾವತಿ, ನರಸಿಂಹರಾಜಪುರ, ಕೊಪ್ಪ ಮಾರ್ಗವಾಗಿ ನ್ಯಾರೋ ಗೇಜ್ ರೈಲು ಮಾರ್ಗವಿತ್ತು. ಈ ಮಾರ್ಗದಲ್ಲಿಯೇ ನೂತನ ಮಾರ್ಗ ನಿರ್ಮಾಣ ಮಾಡಬೇಕೆಂಬ ಚರ್ಚೆಗಳಿವೆ.
ಸುಲಭವಲ್ಲ: ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಮಾರ್ಗ ಹಾದು ಹೋಗುವ ಪ್ರದೇಶವು ಪಶ್ಚಿಮಘಟ್ಟ ಅರಣ್ಯ ಪ್ರದೇಶ, ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತದೆ. ಇದರಿಂದ ಸದರಿ ಯೋಜನೆ ಅನುಷ್ಠಾನ ಸುಲಭಸಾಧ್ಯವಿಲ್ಲವಾಗಿದೆ. ಅರಣ್ಯ, ಪರಿಸರ ಇಲಾಖೆಗಳ ಅನುಮತಿ ಅಗತ್ಯವಿದೆ. ನಾನಾ ಎಡರು-ತೊಡರುಗಳು ಎದುರಾಗುವ ಸಾಧ್ಯತೆಗಳಿವೆ. ಈಗಾಗಲೇ ಅರಣ್ಯ, ಪರಿಸರದ ಕಾರಣದಿಂದ ಹಲವು ದಶಕಗಳಿಂದ ತಾಳಗುಪ್ಪ – ಹೊನ್ನಾವರ ರೈಲ್ವೆ ಮಾರ್ಗ ನಿರ್ಮಾಣ ಸಾಧ್ಯವಾಗಿಲ್ಲವಾಗಿದೆ.
ಒಟ್ಟಾರೆ ನೂತನ ರೈಲ್ವೆ ಮಾರ್ಗವು ಕರ್ನಾಟಕದ ರೈಲ್ವೆ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗೆ ನಾಂದಿಯಾಗಲಿದೆ. ಕೇವಲ ಪ್ರಯಾಣಿಕರ ದೃಷ್ಟಿಯಿಂದ ಮಾತ್ರವಲ್ಲದೆ ವಾಣಿಜ್ಯ, ಕೈಗಾರಿಕೆ, ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗೂ ಉಪಯುಕ್ತವಾಗಿದೆ. ಆದರೆ ಭಾರೀ ವೆಚ್ಚದ ಸದರಿ ಯೋಜನೆ ಕಾರ್ಯಗತಗೊಳ್ಳುವುದು ಯಾವಾಗ? ಎಂಬುವುದು ಮಾತ್ರ ಕಾಲವೇ ಉತ್ತರಿಸಬೇಕಾಗಿದೆ.
ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲು ಮಾರ್ಗ ವಿಳಂಬ
*** ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ನಡುವಿನ 96 ಕಿ.ಮೀ. ಉದ್ದದ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ಪ್ರಥಮ ಹಂತದ ಶಿವಮೊಗ್ಗ– ಶಿಕಾರಿಪುರ ನಡುವಿನ ಸುಮಾರು 46 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಆದರೆ ನಿರೀಕ್ಷಿತ ವೇಗದಲ್ಲಿ ಕೆಲಸಗಳು ನಡೆಯುತ್ತಿಲ್ಲ. ಎರಡನೇ ಹಂತದಲ್ಲಿ ಶಿಕಾರಿಪುರ – ರಾಣೆಬೆನ್ನೂರು ಮಾರ್ಗ ನಿರ್ಮಾಣಕ್ಕೆ ಇನ್ನೂ ಚಾಲನೆ ದೊರಕಿಲ್ಲ. ಭೂ ಸ್ವಾದೀಣ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
Shimoga–Sringeri–Mangalore Railway Line: Is Implementation Easy? | Report: B. Renukesh | Shimoga, June 01: The Railway Department has approved the Final Location Survey (FLS) for the new railway line between Shimoga, Sringeri, and Mangalore, and preparations are underway to invite tenders for the Detailed Project Report (DPR).
This project is considered highly significant as it will directly connect Central Karnataka, Malnad, and the coastal region. The proposed railway line is 332 km long, with an estimated project cost of ₹3,300 crore.
In 2018, former Chief Minister and then Union Railway Minister D.V. Sadananda Gowda announced the Shimoga–Mangalore railway line project and granted permission for the survey. Preliminary studies were conducted in subsequent years, and now final location survey approval has been given. Once the route is identified, land acquisition will begin, followed by construction.
The exact alignment of the new line is yet to be finalized. Only after the DPR is prepared will details such as the route, stations, and extent of land acquisition be available.
As per available information, the plan is to connect Arasalu railway station in Hosanagar taluk (on the Shimoga–Sagar line) via Ripponpete, Konandur in Thirthahalli taluk, Thirthahalli town, Sringeri, and Karkala, eventually reaching Mangalore.
Earlier, a narrow-gauge railway line existed for transporting iron ore from Kudremukh to Bhadravati’s VISL plant, passing through Bhadravati, Narasimharajapura, and Koppa. There are discussions about whether the new line should follow this old alignment.
Challenges: The proposed Shimoga–Sringeri–Mangalore railway line passes through the Western Ghats forest region, which is an environmentally sensitive zone. This makes implementation difficult, requiring clearances from forest and environment departments. Several hurdles are expected. For instance, the Talaguppa–Honnavar railway line has been stalled for decades due to environmental concerns.
Overall, this new railway line could bring major changes to Karnataka’s railway connectivity. It would benefit not only passengers but also trade, industry, and economic activities. However, given the huge cost, the question remains: When will this project actually materialize?
Shimoga–Shikaripura–Ranebennur Railway Line Delayed
The 96 km Shimoga–Shikaripura–Ranebennur railway line is being implemented jointly by the central and state governments. Work has already begun on the first phase (Shimoga–Shikaripura, about 46 km), but progress is slower than expected. The second phase (Shikaripura–Ranebennur) has not yet started, as land acquisition is incomplete.

