shimoga news | ‘ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು’ : ಕೊಲ್ಕತ್ತಾ ಆನಂದ ಮಾರ್ಗ ಆಶ್ರಮದ ಶುಭ ದೀಪಾನಂದ ಅವಧೂತ

"Uniform Civil Code Should Be Implemented": Shubha Dipananda Avadhuta of Kolkata Ananda Marga Ashram shimoga news | ‘ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು’ : ಕೊಲ್ಕತ್ತಾ ಆನಂದ ಮಾರ್ಗ ಆಶ್ರಮದ ಶುಭ ದೀಪಾನಂದ ಅವಧೂತ

ಶಿವಮೊಗ್ಗ (shivamogga), ಜೂನ್ 28: ಶಿವಮೊಗ್ಗದ ವಿದ್ಯಾನಗರದಲ್ಲಿರುವ ಆನಂದ ಮಾರ್ಗ ವಿದ್ಯಾಸಂಸ್ಥೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣವು ಜೂನ್ 28 ರಂದು ಅಂತ್ಯಗೊಂಡಿತು.

ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ಆನಂದ ಮಾರ್ಗ ಆಶ್ರಮದ ಶುಭ ದೀಪಾನಂದ ಅವಧೂತರವರು ಮುಖ್ಯ ಉಪನ್ಯಾಸಕರರಾಗಿ ಭಾಗಿಯಾಗಿದ್ದರು.

‘ಸಮಾಜದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಾಗಿದೆ. ಮೇಲು-ಕೀಳು, ಬಡವ-ಶ್ರೀಮಂತ ಬೇಧಭಾವಗಳು ಹೋಗಬೇಕಾಗಿದೆ. ನಾವೆಲ್ಲರೂ ಒಂದೇ ಎಂಬ ಕಲ್ಪನೆ ಒಡಮೂಡಬೇಕು’ ಎಂದರು.

ಹಾಗೆಯೇ ಎಲ್ಲರಿಗೂ ಸರ್ವಸಮಾನವಾದ ಕಾನೂನುಗಳಿರಬೇಕು. ಆಗ ಮಾತ್ರ ದೇಶ ಬಲಿಷ್ಠವಾಗಿ, ಪ್ರಗತಿಯಲ್ಲಿ ಮುನ್ನಡೆಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ತುರ್ತು ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ವಸುಧೈವ ಕುಟುಂಬಕಂ’ ಎಂಬ ಉದಾತ್ತ ಚಿಂತನೆಯ ಸದುದ್ದೇಶ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಮೊದಲು ನಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕು. ತದನಂತರವಷ್ಟೆ ಸಮಾಜದ ಬದಲಾವಣೆ ಸಾಧ್ಯವಾಗಲಿದೆ ಎಂದು ಶುಭ ದೀಪಾನಂದ ಅವಧೂತರು ತಿಳಿಸಿದರು.

ವಿಚಾರ ಸಂಕೀರಣದಲ್ಲಿ ಕೊಲ್ಕತ್ತಾ ಆಶ್ರಮದ ಕರ್ಮೇಶ್ವರಾನಂದ ಅವಧೂತ,  ಶಿವಮೊಗ್ಗ ಆನಂದ ಮಾರ್ಗ ಶಾಲೆಯ ಪ್ರಾಂಶುಪಾಲರಾದ ದೇವಪ್ರಿಯಾನಂದ ಅವಧೂತ, ಪ್ರಜ್ಞಾನಂದ ಅವಧೂತ, ಕೊಲ್ಕತ್ತಾ ಆಶ್ರಮದ ಅವಂತಿಕಾ ಆನಂದ ವಿಷ್ಣುಪ್ರಿಯಾ,

ಹುಬ್ಬಳ್ಳಿ ಆನಂದ ಮಾರ್ಗ ಶಾಲೆಯ ಪ್ರಾಂಶುಪಾಲರಾದ ಅವಂತಿಕಾ ವಿಜಯ ಸ್ಮಿತಾ, ವೆಲ್ಲೂರು ಆಶ್ರಮದ ತಪಸ್ನಿಗ್ದ, ಶಿವಮೊಗ್ಗದ ಆನಂದ ಮಾರ್ಗ ಪ್ರಚಾರಕ ಸಂಘದ ಭುಕ್ತಿ ಪ್ರಧಾನರಾದ ಜನಮೇಜಿರಾವ್ ರವರು ಉಪಸ್ಥಿತರಿದ್ದರು.

ಮೂರು ದಿನಗಳ ಕಾಲ ಆಧ್ಯಾತ್ಮ, ಸಾಮಾಜಿಕ, ರಾಜಕೀಯ ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ಉಪನ್ಯಾಸ ನಡೆಯಿತು. ಇದೆ ವೇಳೆ ಧ್ಯಾನ, ಕೀರ್ತನೆ, ಭಜನೆ ಕಾರ್ಯಕ್ರಮಗಳು ಆಯೋಜನೆಯಾಗಿದ್ದವು. ಜಿಲ್ಲೆಯ ವಿವಿಧೆಡೆಯಿಂದ ಆನಂದ ಮಾರ್ಗ ಸದಸ್ಯರು, ನಾಗರಿಕರು ಭಾಗಿಯಾಗಿದ್ದರು.

“Uniform Civil Code Should Be Implemented”: Shubha Dipananda Avadhuta of Kolkata Ananda Marga Ashram

Shivamogga, June 28: A three-day seminar organized at the Ananda Marga Educational Institution in Vidyanagar, Shivamogga, concluded on June 28.

Shubha Dipananda Avadhuta from the Ananda Marga Ashram in Kolkata, West Bengal, participated as the chief speaker.

Addressing the gathering, he said, “Society needs a fundamental transformation. Discrimination based on social status, wealth, and class should be eliminated. We must develop the understanding that we are all one.”

He further stated that “There should be equal laws applicable to everyone. Only then can the nation become stronger and progress further. In this regard, the implementation of a Uniform Civil Code is an urgent necessity.”

He also emphasized the importance of understanding the noble philosophy of “Vasudhaiva Kutumbakam” (“The world is one family”). He said that people must first change their own mindset, and only then can meaningful social change take place.

The seminar was attended by Karmeshwarananda Avadhuta from the Kolkata Ashram; Devapriyananda Avadhuta, Principal of the Ananda Marga School in Shivamogga; Prajnananda Avadhuta; Avantika Ananda Vishnupriya from the Kolkata Ashram; Avantika Vijaya Smita, Principal of the Ananda Marga School in Hubballi; Tapasnigda from the Vellore Ashram; and Janameji Rao, Bhukti Pradhan of the Ananda Marga Pracharaka Sangha in Shivamogga.

Over the three days, lectures were delivered on a variety of topics, including spirituality, social issues, and politics. Meditation, kirtan (devotional singing), and bhajan (devotional songs) programs were also organized. Members of Ananda Marga and citizens from different parts of the district participated in the event.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *