ಶಿವಮೊಗ್ಗ (shivamogga), ಜುಲೈ 05: ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡ ವರ್ಗದ ಪಡಿತರ ಚೀಟಿ ಫಲಾನುಭವಿಗಳ ಕ್ಯಾಸ್ಟ್ ಮ್ಯಾಪಿಂಗ್ ಕಾರ್ಯವನ್ನು, ಅತೀ ತುರ್ತಾಗಿ ಪೂರ್ಣಗೊಳಿಸುವಂತೆ ಬೆಂಗಳೂರಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚಿಸಿದೆ.
ಜಿಲ್ಲೆಯ ಪಡಿತರ ಚೀಟಿಯಲ್ಲಿರುವ ಎಲ್ಲಾ ಕುಟುಂಬ ಸದಸ್ಯರು ತಮ್ಮ ಜಾತಿ ಪ್ರಮಾಣ ಪತ್ರದೊಂದಿಗೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಕ್ಯಾಸ್ಟ್ ಮ್ಯಾಪಿಂಗ್ನ್ನು ಮಾಡಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿಯವರೆಗೂ ಕ್ಯಾಸ್ಟ್ ಮ್ಯಾಪಿಂಗ್ ಮಾಡಿಸದಿರುವ ಎಸ್ ಸಿ /ಎಸ್ ಟಿ ಪಡಿತರ ಚೀಟಿದಾರರ ಕುಟುಂಬ ಸದಸ್ಯರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಕ್ಯಾಸ್ಟ್ ಮ್ಯಾಪಿಂಗ್ ಮಾಡಿಸುವಂತೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shivamogga, July 5: The Department of Food, Civil Supplies and Consumer Affairs in Bengaluru has directed that the caste mapping of ration card beneficiaries belonging to Scheduled Castes and Scheduled Tribes be completed on an urgent basis.

