ಶಿವಮೊಗ್ಗ (shimoga) ಜುಲೈ 05 : ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯ ಫಲಾನುಭವಿಗಳು, ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡುವುದು ಕಡ್ಡಾಯವಾಗಿದೆ ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯು 26-12-2023 ರಂದು ಆರಂಭವಾಗಿದೆ. ಜಿಲ್ಲೆಯ ಫಲಾನುಭವಿಗಳು ತ್ರೈಮಾಸಿಕಕ್ಕೆ ಬದಲಾಗಿ ಪ್ರತಿ ತಿಂಗಳು 25 ರೊಳಗೆ ಕಡ್ಡಾಯವಾಗಿ ನಿಗದಿತ ಆನ್ ಲೈನ್ ಪೋರ್ಟಲ್ನಲ್ಲಿ ಲಾಗಿನ್ ಆಗಿ, ಸ್ವಯಂ ಘೋಷಣೆ ನೀಡಬೇಕು. ನೀಡದಿದ್ದಲ್ಲಿ ಆ ತಿಂಗಳ ನೇರ ನಗದು ಖಾತೆಗೆ ಜಮೆಯಾಗುವುದಿಲ್ಲ.
2025 ರಲ್ಲಿ ಪದವಿ/ಡಿಪ್ಲೊಮಾ ಪದವಿ ಪಡೆದ ಪದವೀಧರರು, ಪದವಿ ಪಡೆದು 6 ತಿಂಗಳಾದರೂ ಉದ್ಯೋಗ ಪಡೆಯದ ನಿರುದ್ಯೋಗಿಗಳು, ಸೇವಾ ಸಿಂಧು ಪೋರ್ಟಲ್ಗೆ ಬೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಪದವೀಧರರಿಗೆ ರೂ.3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ.1,500 ನೀಡಲಾಗುವುದು ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shivamogga, July 5: Employment officials have announced that it is mandatory for beneficiaries of the ‘Yuva Nidhi’ scheme—the state government’s fifth guarantee scheme—to submit a self-declaration every month.

