ಸಾಗರ (sagara), ಜುಲೈ 23: ಮನೆಯಿಂದ ಕಾಲೇಜ್ ಗೆ ತೆರಳಿದ ವಿದ್ಯಾರ್ಥಿಯೋರ್ವ, ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ.
ಹರುಡಿಕೆ ಭೀಮನಕೋಣೆ ಗ್ರಾಮದ ನಾಗೇಂದ್ರ ಎಂಬುವವರ ಮಗ ನಿರಂಜನ (16) ನಾಪತ್ತೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತನು ಜುಲೈ 12 ರಂದು ಮನೆಯಿಂದ ಕಾಲೇಜಿಗೆ ತೆರಳಿದ್ದು, ನಂತರ ನಾಪತ್ತೆಯಾಗಿದ್ದಾನೆ.
ಕಾಣೆಯಾದ ನಿರಂಜನ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಬಲಗಾಲಿನ ಮಣಿಕಟ್ಟಿನಲ್ಲಿ ಗಾಯದ ಗುರುತಿದೆ. ಮನೆಯಿಂದ ಹೋಗುವಾಗ ನೀಲಿ ಬಿಳಿ ಬಣ್ಣದ ಟೀ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದು ಸ್ಕೂಲ್ ಬ್ಯಾಗ್ ಇರುತ್ತದೆ.
ಸದರಿ ಬಾಲಕನ ಬಗ್ಗೆ ಸುಳಿವು ಲಭ್ಯವಾದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ 9480803361/, ಸಾಗರ ಉಪ ವಿಭಾಗ ಎಸ್‌ಐ -9480803322, ಶಿವಮೊಗ್ಗ ಎಸ್.ಪಿ ಕಚೇರಿ 08182-261400 / 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
Sagar – Boy who went from home to college goes missing : Police appeal for help in finding him | Sagara, July 23: An incident has taken place in Sagar taluk of Shivamogga district where a college student who had gone from home to college has gone missing.

