ತೀರ್ಥಹಳ್ಳಿ (thirthahalli ), ಜುಲೈ 31: ಕಳೆದ 34 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು, ತೀರ್ಥಹಳ್ಳಿ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.
ಮೂಲತಃ ಶಿಕಾರಿಪುರ ತಾಲೂಕಿನ ನಿವಾಸಿಯಾದ, ಹಾಲಿ ಸಾಗರದಲ್ಲಿ ನೆಲೆಸಿರುವ ಶೇಖರ ಯಾನೆ ಮತ್ತಿಗೆ ಶೇಖರ (65) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯ ವಿರುದ್ದ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ 1990 ರಲ್ಲಿ ಗುನ್ನೆ ನಂಬರ್ : 174/1990 ಕಲಂ : 457, 380 ಐಪಿಸಿ ಅಡಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಆರೋಪಿಯು ಪ್ರಕರಣ ದಾಖಲಾದ ನಂತರ ಕಳೆದ 34 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಸದರಿ ಪ್ರಕರಣಗಳನ್ನು ನ್ಯಾಯಾಲಯವು *LPR NO 07/97, 08/97, 09/97 ರಲ್ಲಿ ವಿಚಾರಣೆ ಕೈಗೊಂಡಿತ್ತು. ಎಸ್ಪಿ ನಿಖಿಲ್ ಬಿ ಅವರು ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಚ್ಚಿ ಮಾರ್ಗದರ್ಶನದಲ್ಲಿ,
ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿಐ ಇಮ್ರಾನ್ ಬೇಗ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿ.ಹೆಚ್.ಸಿ. ಲಿಂಗೇಗೌಡ, ರಾಘವೇಂದ್ರ, ಶಿವಶಂಕರ ಕುಂಬಾರವರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
Thirthahalli, July 31: Police from the Thirthahalli station have arrested and produced before the court an accused person who had been absconding and failing to appear for court proceedings for the past 34 years.

