ಶಿವಮೊಗ್ಗ (shivamogga), ಆಗಸ್ಟ್ 03: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಮುಂದುವರಿದಿದೆ. ಆದರೆ ಹಲವೆಡೆ ಮಳೆ ಆರ್ಭಟ ಕೊಂಚ ತಗ್ಗಿದೆ. ಒಂದೆಡೆ ತುಂಗಾ ಹಾಗೂ ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಯಥಾಸ್ಥಿತಿ ಮುಂದುವರೆದರೆ, ಲಿಂಗನಮಕ್ಕಿ ಡ್ಯಾಂ ಒಳಹರಿವಿನಲ್ಲಿ ಇಳಿಕೆ ಕಂಡುಬಂದಿದೆ.
ಆಗಸ್ಟ್ 03 ರ ಬೆಳಿಗ್ಗೆಯ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂನ ಒಳಹರಿವು 59,203 ಕ್ಯೂಸೆಕ್ ಇದೆ. ನಿನ್ನೆ ಈ ಪ್ರಮಾಣ 77,580 ಕ್ಯೂಸೆಕ್ ಇತ್ತು. ಡ್ಯಾಂನ ನೀರಿನ ಮಟ್ಟ 1784.70 (ಗರಿಷ್ಠ ಮಟ್ಟ : 1819) ಅಡಿಯಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 2.85 ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1811.50 ಅಡಿಯಿತ್ತು.
ಭದ್ರಾ ಡ್ಯಾಂನ ಒಳಹರಿವಿನಲ್ಲಿ ಕೊಂಚ ಏರಿಕೆಯಾಗಿದೆ. 36,103 ಕ್ಯೂಸೆಕ್ ಒಳಹರಿವಿದ್ದು, 189 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನಿನ್ನೆ 31,874 ಕ್ಯೂಸೆಕ್ ಒಳಹರಿವಿತ್ತು. ಡ್ಯಾಂನ ನೀರಿನ ಮಟ್ಟ 163 ಅಡಿ 6 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 180 ಅಡಿ 9 ಇಂಚು ಇತ್ತು.
ಉಳಿದಂತೆ ತುಂಗಾ ಜಲಾಶಯದ ಒಳಹರಿವಿನಲ್ಲಿ ಯಥಾಸ್ಥಿತಿ ಕಂಡುಬಂದಿದೆ. 86,123 ಕ್ಯೂಸೆಕ್ ಒಳಹರಿವಿದ್ದು, 89,503 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಮಳೆ ವಿವರ : 03/08/2026 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿ 168 ಮಿ.ಮೀ., ಯಡೂರು 133 ಮ.ಮೀ., ಹುಲಿಕಲ್ 154 ಮಿ.ಮೀ., ಮಾಸ್ತಿಕಟ್ಟೆ 139 ಮಿ.ಮೀ., ಚಕ್ರಾ 117 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 176 ಮಿ.ಮೀ. ಮಳೆಯಾಗಿದೆ.
Status of Inflows at Tunga, Bhadra Dams: Linganamakki Sees Decline
Shivamogga, August 03: Monsoon rains continue in Shivamogga district, though the intensity has slightly reduced in several areas. While inflows at the Tunga and Bhadra dams remain steady, the Linganamakki dam has recorded a decline.
As of the morning of August 03, the inflow at Linganamakki dam is 59,203 cusecs, compared to 77,580 cusecs yesterday. The water level stands at 1784.70 feet (maximum level: 1819 feet). In the past 24 hours, the reservoir has gained 2.85 feet of water. On the same day last year, the level was 1811.50 feet.
At the Bhadra dam, inflows have slightly increased to 36,103 cusecs, with 189 cusecs being released. Yesterday’s inflow was 31,874 cusecs. The water level is 163 feet 6 inches (maximum level: 186 feet). On the same day last year, the level was 180 feet 9 inches.
At the Tunga reservoir, inflows remain steady at 86,123 cusecs, while 89,503 cusecs are being released. Rainfall Details : In the 24 hours ending at 8 AM on August 03, heavy rainfall was recorded across the Western Ghats region of the district: Mani: 168 mm, Yaduru: 133 mm, Hulikal: 154 mm, Mastikatte: 139 mm, Chakra: 117 mm, Savehaklu: 176 mm

