ಶಿವಮೊಗ್ಗ (shivamogga), ಆಗಸ್ಟ್ 04: ಶಿವಮೊಗ್ಗ ನಗರದ ಪಾರ್ಕ್ ಬಡಾವಣೆ ಏರಿಯಾದಲ್ಲಿ ಟ್ರಾಫಿಕ್ ಪೊಲೀಸರು ಆಗಸ್ಟ್ 04 ರ ಬೆಳಿಗ್ಗೆ ಮಹಾನಗರ ಪಾಲಿಕೆ ಸಹಕಾರದೊಂದಿಗೆ ಫುಟ್’ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಇನ್ಸ್’ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಸದರಿ ಕಾರ್ಯಾಚರಣೆ ನಡೆದಿದೆ. ಈ ವೇಳೆ ಪೂರ್ವ ಟ್ರಾಫಿಕ್ ಠಾಣೆ ಸಬ್ ಇನ್ಸ್’ಪೆಕ್ಟರ್ ಗಳಾದ ಅಕ್ಬರ್ ಮುಲ್ಲಾ, ಭಾರತಿ, ಎಎಸ್ಐ ಮಂಜು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಅವ್ಯವಸ್ಥೆ : ಪಾರ್ಕ್ ಬಡಾವಣೆ ಏರಿಯಾದಲ್ಲಿ ಹಲವು ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಕೆಲ ಆಸ್ಪತ್ರೆಗಳು ಪ್ರಭಾವಿ ವ್ಯಕ್ತಿಗಳಿಗೆ ಸೇರಿದ್ದಾಗಿವೆ. ಫುಟ್’ಪಾತ್ ಒತ್ತುವರಿ ಸೇರಿದಂತೆ ಸೆಟ್’ಬ್ಯಾಕ್ ನಿಯಮ ಉಲ್ಲಂಘಿಸಿದ ಹಲವು ಆರೋಪಗಳಿದ್ದವು.
ಜೊತೆಗೆ ಆಸ್ಪತ್ರೆ ಸಮೀಪದ ರಸ್ತೆಗಳಲ್ಲಿ, ಸುಗಮ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸುತ್ತಿತ್ತು. ಪ್ರಭಾವಿಗಳ ಭಯ – ಒತ್ತಡದ ಕಾರಣದಿಂದಲೇ, ಆಡಳಿತ ವ್ಯವಸ್ಥೆ ಯಾವುದೇ ಕ್ರಮಕೈಗೊಳ್ಳಲು ಹಿಂಜರಿಯುತ್ತಿತ್ತು. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲವಾಗಿದೆ ಎಂಬ ಆರೋಪಗಳು ನಾಗರಿಕ ವಲಯದಲ್ಲಿದ್ದವು.
ಖಡಕ್ ಕ್ರಮ : ಇತ್ತೀಚೆಗೆ ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್ ನೇತೃತ್ವದ ಟ್ರಾಫಿಕ್ ಪೊಲೀಸ್ ತಂಡವು ಶಿವಮೊಗ್ಗ ನಗರದ ಮುಖ್ಯ ರಸ್ತೆ ಸೇರಿದಂತೆ ಗಲ್ಲಿ ಗಲ್ಲಿಯಲ್ಲಿ ಫುಟ್’ಪಾತ್ ಒತ್ತುವರಿ ತೆರವು ಹಾಗೂ ಸುಗಮ ಜನ – ವಾಹನ ಸಂಚಾರಕ್ಕೆ ಖಡಕ್ ಕ್ರಮಕೈಗೊಂಡಿದೆ. ಒಂದೆಡೆ ಇದು ಪ್ರಭಾವಿಗಳ ನಿದ್ದೆಗೆಡಿಸಿದ್ದರೆ, ಮತ್ತೊಂದೆಡೆ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ರಾಜಕೀಯ ಯಾವುದೇ ಒತ್ತಡಕ್ಕೆ ಮಣಿಯದೆ ಪಾರ್ಕ್ ಬಡಾವಣೆಯಲ್ಲಿಯೂ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಮುಂದೆನಾಗಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.
Shimoga: Shock Treatment by Traffic Police in Park Extension! Shimoga, August 04: In the Park Extension area of Shimoga city, traffic police, with the cooperation of the municipal corporation, carried out a footpath encroachment clearance drive on the morning of August 04.The operation was led by Inspector Devaraj. During the drive, East Traffic Station Sub-Inspectors Akbar Mulla, Bharathi, and ASI Manju, among others, were present.

