ಭದ್ರಾವತಿ (bhadravathi), ಆಗಸ್ಟ್ 16: ಮೆಟ್ಟಿಲು ಹತ್ತಿ ಮಹಡಿ ಮೇಲೇರಿದ್ದ ಹಾಗೂ ಅದೇ ಮನೆಯ ಪಕ್ಕದ ಒಣಿಯಲ್ಲಿ ಸಿಲುಕಿ ಬಿದ್ದಿದ್ದ ಗೂಳಿಗಳನ್ನು ಅಗ್ನಿಶಾಮಕ ದಳದ ಪೊಲೀಸರು ಭಾರೀ ಹರಸಾಹಸ ನಡೆಸಿ ರಕ್ಷಣೆ ಮಾಡಿದ ಘಟನೆ ಆಗಸ್ಟ್ 16 ರ ಬೆಳಿಗ್ಗೆ ನಡೆದಿದೆ.
ಅಪ್ಪರ ಹುತ್ತಾ ಬಡಾವಣೆ 1 ನೇ ತಿರುವಿನ ಶಿವ ದೇವಾಲಯ ಸಮೀಪದ ಚಂದ್ರಶೇಖರ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಆಗಸ್ಟ್ 15 ರ ರಾತ್ರಿ ದನಗಳ ಹಿಂಡು ಸದರಿ ರಸ್ತೆಯಲ್ಲಿಲ ಆಗಮಿಸಿವೆ. ಈ ವೇಳೆ ಕೆಲ ಆಕಳು ಹಾಗೂ ಎರಡು ಗೂಳಿಗಳು ಮನೆಯೊಂದರ ಮೆಟ್ಟಿಲು ಮೂಲಕ ಮಹಡಿ ಮೇಲೆ ಹತ್ತಿವೆ.
ಆಕಳುಗಳು ಮೆಟ್ಟಿಲುಗಳ ಮೂಲಕ ಕೆಳಗಿಳಿದಿವೆ. ಆದರೆ ಗೂಳಿಗಳಿಗೆ ಮೆಟ್ಟಿಲು ಇಳಿಯಲು ಆಗದೆ ಮಹಡಿ ಮೇಲೆಯೇ ಪರದಾಡಲಾರಂಭಿಸಿದ್ದವು. ಈ ವೇಳೆ ಗೂಳಿಯೊಂದು ಮೆಟ್ಟಿಲು ಇಳಿಯುವ ಯತ್ನದಲ್ಲಿ ಆಯತಪ್ಪಿ ಮನೆ ಪಕ್ಕದ ಓಣಿಯಲ್ಲಿ ಬಿದ್ದಿತ್ತು.
ಓಣಿಯಿಂದ ಹೊರಬರಲು ಆಗದೆ ಸಂಕಷ್ಟಕ್ಕೆ ಸಿಲುಕಿತ್ತು. ಭಾನುವಾರ ಬೆಳಿಗ್ಗೆ ಅಗ್ನಿಶಾಮಕ ದಳದ ತಂಡ ಸ್ಥಳಕ್ಕಾಗಮಿಸಿ, ಗೂಳಿಗಳ ರಕ್ಷಣಾ ಕಾರ್ಯಾಚರಣೆ ನಡೆಸಿತು. ಮಹಡಿ ಮೇಲಿದ್ದ ಗೂಳಿಯ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ನಾಗರಿಕರ ಸಹಕಾರದೊಂದಿಗೆ ಕೆಳಕ್ಕಿಳಿಸಿದ್ದಾರೆ.
ಅದೇ ರೀತಿ ಓಣಿಯಲ್ಲಿ ಸಿಲುಕಿ ಬಿದ್ದಿದ್ದ ಗೂಳಿಯ ಹೊಟ್ಟೆಗೆ ಹಗ್ಗ ಕಟ್ಟಿ, ಹೊರ ಕರೆತರುವಲ್ಲಿ ಸಫಲರಾಗಿದ್ದಾರೆ. ಸದರಿ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಆನಂದ, ಸುರೇಶ್, ಹರೀಶ್, ಸಂತೋಷ್ ಭಾಗಿಯಾಗಿದ್ದರು.
hadravati: Rescue of bulls trapped in the attic! | Bhadravati, August 16: Fire and rescue personnel carried out a strenuous operation to save bulls that had climbed up the stairs to the terrace and got trapped in the attic of a house on the morning of August 16. The incident occurred near the Shiva Temple at the 1st cross of Appara Hutta Layout, close to the residence of Chandrashekar.

