ತೀರ್ಥಹಳ್ಳಿ (Thirthahalli ), ಆಗಸ್ಟ್ 20: ತೀರ್ಥಹಳ್ಳಿಯ ಲಾಡ್ಜ್ ವೊಂದರಲ್ಲಿ ತಂಗಿದ್ದ ಬೆಂಗಳೂರಿನ ಸಿವಿಲ್ ಕಂಟ್ರಾಕ್ಟರ್ ಓರ್ವರು, ನಿಗೂಢವಾಗಿ ಕಣ್ಮರೆಯಾದ ಘಟನೆ ನಡೆದಿದೆ.
ಬೆಂಗಳೂರಿನ ಕೊಡಿಗೆಹಳ್ಳಿ ವೆಲ್’ಪುಲಾ ಆಸ್ ಡೆಲ್ ಅಪಾರ್ಟ್’ಮೆಂಟ್ ನ ನಿವಾಸಿ, ಸಿವಿಲ್ ಕಂಟ್ರಾಕ್ಟರ್ ಅನಿಲ್ ಬಿ ರಾಮ್’ದಾಸ್ (55) ನಾಪತ್ತೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಆಗಸ್ಟ್ 14 ರಂದು ಅವರು ತೀರ್ಥಹಳ್ಳಿಗೆ ಆಗಮಿಸಿ ಲಾಡ್ಜ್ ವೊಂದರಲ್ಲಿ ತಂಗಿದ್ದರು. ಆಗಸ್ಟ್ 15 ರ ಬೆಳಿಗ್ಗೆ 5.30 ರ ಸುಮಾರಿಗೆ ಲಾಡ್ಜ್ ಕೊಠಡಿಯಿಂದ ಹೊರಹೋದವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಆಗಸ್ಟ್ 20 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಚಹರೆ : ಕಾಣೆಯಾದ ವ್ಯಕ್ತಿಯು 5.4 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಬ್ಲೂ ಜೀನ್ಸ್ ಪ್ಯಾಂಟ್, ಬ್ಲೂ ಶರ್ಟ್ ಧರಿಸಿರುತ್ತಾರೆ.
ಇವರ ಸುಳಿವು ಪತ್ತೆಯಾದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“Civil contractor from Bengaluru mysteriously missing from a lodge in Tirthahalli!”

