shimoga power cut news | ಶಿವಮೊಗ್ಗದ ವಿವಿಧೆಡೆ ಆಗಸ್ಟ್ 22 ರಂದು, ಹೊಳೆಹೊನ್ನೂರು ಸುತ್ತಮುತ್ತ ಆ. 23 ರಂದು ವಿದ್ಯುತ್ ವ್ಯತ್ಯಯ!

power cut
ಆಗಸ್ಟ್ 22 ರಂದು ಶಿವಮೊಗ್ಗದ ಜಡ್ಜ್ ಕ್ವಾಟರ್ಸ್ ಸುತ್ತಮುತ್ತ ಪವರ್ ಕಟ್

ಶಿವಮೊಗ್ಗ, ಆಗಸ್ಟ್ 21: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ಎ.ಎಫ್-3 ರಲ್ಲಿ ಮೆಸ್ಕಾಂ ತುರ್ತು ಕಾಮಗಾರಿಯನ್ನು ನಿರ್ವಹಿಸುವುದರಿಂದ ಆಗಸ್ಟ್ 22 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.

ವಿವರ: ಜಡ್ಜ್ ಕ್ವಾಟರ್ಸ್, ಎಸ್.ವಿ. ಬಡಾವಣೆ ಸಿ ಬ್ಲಾಕ್, ವೃದ್ಧಾಶ್ರಮ ಸುತ್ತಮುತ್ತ, ಡಾಕ್ಟ್ರರ್ಸ್ ಲೇಔಟ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಆಗಸ್ಟ್ 22 ರಂದು ಬಾಪೂಜಿ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಆಗಸ್ಟ್ 21 : ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2 ರಲ್ಲಿ ಮೆಸ್ಕಾಂ ಕಂಬ ತೆರವು ಕಾಮಗಾರಿ ಇರುವುದರಿಂದ ಆಗಸ್ಟ್ 22 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿವರ : ಬಾಪೂಜಿನಗರ, ಟ್ಯಾಂಕ್ ಬಂಡ್ ರಸ್ತೆ, ಜೋಸೆಫ್ ನಗರ, ಟಿಜಿಎನ್ ಲೇಔಟ್, ಟ್ಯಾಂಕ್ ಮೊಹಲ್ಲಾ, ಸೋಮಯ್ಯ ಲೇಔಟ್, ಬಿ.ಹೆಚ್.ರಸ್ತೆ, ಮೀನಾಕ್ಷಿ ಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಮ ಪ್ರಕಟಣೆ ತಿಳಿಸಿದೆ.

ಹೊಳೆಹೊನ್ನೂರು ಸುತ್ತಮುತ್ತ ಆಗಸ್ಟ್ 23 ರಂದು ವಿದ್ಯುತ್ ವ್ಯತ್ಯಯ

ಹೊಳೆಹೊನ್ನೂರು, ಆಗಸ್ಟ್ 21 : ಹೊಳೆಹೊನ್ನೂರು ಉಪವಿಭಾಗದ ಘಟಕ-1 ಹೊಳೆಹೊನ್ನೂರು ಶಾಖಾ ವ್ಯಾಪ್ತಿಗೆ ಬರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಹೊಳೆಹೊನ್ನೂರಿನಿಂದ ಹೊರಡುವ 11 ಕೆ.ವಿ ಮಾರ್ಗಗಳಾದ ಎಫ್-16 ಹೊಳೆಹೊನ್ನೂರು, ಎಫ್-2 ವೆಂಕಟಾಪುರ, ಎಫ್-6 ಹೊಸಕೊಪ್ಪ, ಎಫ್-4 ಮಂಗೋಟೆ, ಎಫ್-9 ಅರದೊಟ್ಲು ಮತ್ತು ಎಫ್-10 ಸಿದ್ಲಿಪುರ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಆಗಸ್ಟ್ 23 ರಂದು ಬೆಳಗ್ಗೆ 09 ರಿಂದ ಸಂಜೆ 06 ರವರೆಗೆ ಈ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.

ವಿವರ : ಹೊಳೆಹೊನ್ನೂರು, ನಾಗತಿಬೆಳಗಲು ತಾಂಡ, ಹೊಸಕೊಪ್ಪ 12 ತಲ್ಲಿಕಟ್ಟೆ, ಜಂಬರಘಟ್ಟ, ಕಾಗೆಕೊಡಮಗ್ಗೆ, ಮೂಡಲವಿಠಲಾಪುರ, ಕನಸಿನಕಟ್ಟೆ, ಹೊಳೆಬೈರನಹಳ್ಳಿ, ಸುರೇಂದ್ರಗೌಡ ಕ್ಯಾಂಪ್,

ಎಮ್ಮೆಹಟ್ಟಿ, ಹುಲಿಮಟ್ಟಿ ಕ್ಯಾಂಪ್, ಆಗಸನಹಳ್ಳಿ, ಸಿದ್ಲಿಪುರ, ದಾಸರಕಲ್ಲಹಳ್ಳಿ, ಸನ್ಯಾಸಿಕೊಡಮಗ್ಗೆ, ಅರದೋಟ್ಲು, ಡಣಾಯಕಪುರ, ನಾಗತಿಬೆಳಗಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಹೊಳೆಹೊನ್ನೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *