
ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರವಾಸಿಗಳ ಜೊತೆ ಸಿಬ್ಬಂದಿಯ ಅನುಚಿತ ವರ್ತನೆ! : ಗಮನಹರಿಸುವುದೆ ಅರಣ್ಯ ಇಲಾಖೆ?
ಶಿವಮೊಗ್ಗ, ಜೂ. 22: ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿನ ಸಿಬ್ಬಂದಿಯೋರ್ವರು, ಪ್ರವಾಸಿಗರ ಜೊತೆ ಅನುಚಿತವಾಗಿ ವರ್ತಿಸಿದ ಘಟನೆಯೊಂದು ಗುರುವಾರ ನಡೆದಿದೆ.
ಹುಬ್ಬಳ್ಳಿಯಿಂದ ಆಗಮಿಸಿದ್ದ ಪ್ರವಾಸಿಗರ ಜೊತೆ, ಬಿಡಾರದ ಸಿಬ್ಬಂದಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ಕೂಗಾಡಿದ್ದಾನೆ. ಮಹಿಳೆಯರ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ.
ಈ ಕುರಿತಂತೆ ಪ್ರವಾಸಿಗರು ಬಿಡಾರದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಅವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಅಧಿಕಾರಿಯು ಸದರಿ ಸಿಬ್ಬಂದಿಗೆ, ಪ್ರವಾಸಿಗಳ ಜೊತೆ ಸೌಜನ್ಯದಿಂದ ನಡೆದುಕೊಳ್ಳುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
‘ಶೃಂಗೇರಿಗೆ ತೆರಳುವ ಮಾರ್ಗಮಧ್ಯೆ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಲಾಗಿತ್ತು. ಈ ವೇಳೆ ಯಾವುದೇ ಕಾರಣವಿಲ್ಲದೆ ಸಿಬ್ಬಂದಿಯು ನಮ್ಮ ಕುಟುಂಬದ ಮಹಿಳೆಯರೊಂದಿಗೆ ಜಗಳ ಮಾಡಿದರು. ಸಿಬ್ಬಂದಿಯ ವರ್ತನೆ ಬೇಸರ ಉಂಟು ಮಾಡಿತು. ಪ್ರವಾಸಿ ತಾಣಗಳಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದವಾಗದಂತೆ ಸಂಬಂಧಿಸಿದವರು ಎಚ್ಚರವಹಿಸಬೇಕು. ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಿಬ್ಬಂದಿಗಳಿಗೆ ಸಲಹೆ ನೀಡಬೇಕು’ ಎಂದು ಪ್ರವಾಸಿಗರು ತಿಳಿಸಿದ್ದಾರೆ.
More Stories
shimoga | ಶಿವಮೊಗ್ಗ : ನವರಾತ್ರಿ ವೇಳೆ ದುರ್ಘಟನೆ – ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಸಾ**ವು!
Shivamogga: Tragic incident during Navratri – Student dies due to electric shock!
ಶಿವಮೊಗ್ಗ : ನವರಾತ್ರಿ ವೇಳೆ ದುರ್ಘಟನೆ – ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಸಾವು!
shimoga crime news | ಶಿವಮೊಗ್ಗ ಜಯನಗರ ಠಾಣೆ ಪೊಲೀಸರ ಕಾರ್ಯಾಚರಣೆ : 3 ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ತೀರ್ಥಹಳ್ಳಿ ಕಾಲೇಜ್ ನೌಕರ ಅರೆಸ್ಟ್!
Shivamogga Jayanagar police operation : Thirthahalli College employee involved in 3 chain robberies arrested!
ಶಿವಮೊಗ್ಗ ಜಯನಗರ ಠಾಣೆ ಪೊಲೀಸರ ಕಾರ್ಯಾಚರಣೆ : 3 ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ತೀರ್ಥಹಳ್ಳಿ ಕಾಲೇಜ್ ನೌಕರ ಅರೆಸ್ಟ್!
shimoga news | ಬೆಂಬಲ ಬೆಲೆಯಡಿ ಭತ್ತ ಖರೀದಿ : ಶಿವಮೊಗ್ಗ ಡಿಸಿ ಪ್ರಕಟಣೆಯೇನು?
Purchase of paddy under support price: What is the announcement from Shivamogga DC?
ಬೆಂಬಲ ಬೆಲೆಯಡಿ ಭತ್ತ ಖರೀದಿ : ಶಿವಮೊಗ್ಗ ಡಿಸಿ ಪ್ರಕಟಣೆಯೇನು?
shimoga | ಶಿವಮೊಗ್ಗ : ಅರ್ಧಕ್ಕೆ ಸ್ಥಗಿತಗೊಂಡ ಜಿಪಂ ಕಟ್ಟಡ ಕಾಮಗಾರಿ – ಗಮನಿಸುವರೆ ಸಿಎಂ, ಸಚಿವರು?
Shivamogga: Zilla Parishad building work halted halfway – will the CM and ministers take notice?
ಶಿವಮೊಗ್ಗ : ಅರ್ಧಕ್ಕೆ ಸ್ಥಗಿತಗೊಂಡ ಜಿಪಂ ಕಟ್ಟಡ ಕಾಮಗಾರಿ – ಗಮನಿಸುವರೆ ಸಿಎಂ, ಸಚಿವರು?
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for September 26 in Shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26 ರ ತರಕಾರಿ ಬೆಲೆಗಳ ವಿವರ
shimoga | power cut news | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ಸೆಪ್ಟೆಂಬರ್ 27 ರಂದು ವಿದ್ಯುತ್ ವ್ಯತ್ಯಯ
Power outage in various parts of Shivamogga city – taluk on September 27
ಶಿವಮೊಗ್ಗ ನಗರ – ತಾಲೂಕಿನ ವಿವಿಧೆಡೆ ಸೆಪ್ಟೆಂಬರ್ 27 ರಂದು ವಿದ್ಯುತ್ ವ್ಯತ್ಯಯ