ವರ್ಷಗಳೇ ಉರುಳಿದರೂ ಮುಗಿಯದ 24X7 ಕುಡಿಯುವ ನೀರು ಕಾಮಗಾರಿ : ತಪ್ಪದ ಕಿರಿಕಿರಿ – ಗಮನಹರಿಸುವುದೆ ಜಲ ಮಂಡಳಿ?

ವರ್ಷಗಳೇ ಉರುಳಿದರೂ ಮುಗಿಯದ 24X7 ಕುಡಿಯುವ ನೀರು ಕಾಮಗಾರಿ : ತಪ್ಪದ ಕಿರಿಕಿರಿ – ಗಮನಹರಿಸುವುದೆ ಜಲ ಮಂಡಳಿ?

ಶಿವಮೊಗ್ಗ, ಜೂ. 22: ವರ್ಷಗಳೇ ಉರುಳಿದರೂ ಶಿವಮೊಗ್ಗ ನಗರದಲ್ಲಿ 24X7 ಕುಡಿಯುವ ನೀರು ಪೂರೈಕೆ ಕಾಮಗಾರಿ ಸದ್ಯಕ್ಕೆ ಮುಕ್ತಾಯಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿಲ್ಲ..! ಹಲವೆಡೆ ಬೇಕಾಬಿಟ್ಟಿಯಾಗಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿರುವ ಆರೋಪಗಳು ನಾಗರೀಕ ವಲಯದಿಂದ ಕೇಳಿಬರಲಾರಂಭಿಸಿದೆ.

ವರ್ಷಗಳೇ ಉರುಳಿದರೂ ಮುಗಿಯದ 24X7 ಕುಡಿಯುವ ನೀರು ಕಾಮಗಾರಿ : ತಪ್ಪದ ಕಿರಿಕಿರಿ – ಗಮನಹರಿಸುವುದೆ ಜಲ ಮಂಡಳಿ?

ನಗರದ ಹೊರವಲಯದ ಪ್ರದೇಶಗಳಲ್ಲಿ ಕಳೆದ ಒಂದೂವರೆ ವರ್ಷಕ್ಕೂ ಅಧಿಕ ಸಮಯದಿಂದ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಆದರೆ ಕೆಲಸಕಾರ್ಯಗಳು ಆಮೆ ವೇಗದಲ್ಲಿದೆ. ಯಾವೊಂದು ಪ್ರದೇಶದಲ್ಲಿಯೂ ಪರಿಪೂರ್ಣವಾಗಿ ಕಾಮಗಾರಿ ನಡೆಯದೆ, ಅರ್ಧಂಬರ್ಧ ಕೆಲಸಕಾರ್ಯ ನಡೆಸಲಾಗುತ್ತಿದೆ ಎಂದು ಕೆಲ ನಾಗರೀಕರು ದೂರುತ್ತಾರೆ.

ಪುರಲೆ ಬಡಾವಣೆಯಲ್ಲಿ ಕಾಮಗಾರಿಗೆ ಗುಂಡಿ ತೆಗೆದು ಹಾಗೆಯೇ ಬಿಟ್ಟು ಹೋಗಿದ್ದ ವಿಷಯಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಪಾಲಿಕೆ ಮೇಯರ್ ಅವರನ್ನು ಸ್ಥಳೀಯ ನಾಗರೀಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಹರಿಹಾಯ್ದಿದ್ದ ಘಟನೆ ಕೂಡ ನಡೆದಿತ್ತು.

ವರ್ಷಗಳೇ ಉರುಳಿದರೂ ಮುಗಿಯದ 24X7 ಕುಡಿಯುವ ನೀರು ಕಾಮಗಾರಿ : ತಪ್ಪದ ಕಿರಿಕಿರಿ – ಗಮನಹರಿಸುವುದೆ ಜಲ ಮಂಡಳಿ?

ಸೋಮಿನಕೊಪ್ಪ ಬಡಾವಣೆ ಸೇರಿದಂತೆ ಇತರೆ ಇತರೆ ಬಡಾವಣೆಗಳಲ್ಲಿಯೂ ಕೂಡ ಕಾಮಗಾರಿಯೂ ಅವ್ಯವಸ್ಥೆಯ ಆಗರವಾಗಿದ್ದು, ಅಪೂರ್ಣವಾಗಿದೆ. ‘ಸ್ಥಳೀಯ ಜನಪ್ರತಿನಿಧಿಗಳಿಗೆ, ಜಲ ಮಂಡಳಿ ಅಧಿಕಾರಿಗಳಿಗೆ ನಾಗರೀಕರು ಅಹವಾಲು ತೋಡಿಕೊಳ್ಳುತ್ತಿದ್ದಾರೆ.

 ಮಳೆ ಆರಂಭವಾಗುವುದರೊಳಗೆ ಕಾಮಗಾರಿ ನಡೆಸಿ, ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಾಗರೀಕರು ದೂರುತ್ತಾರೆ.

ವರ್ಷಗಳೇ ಉರುಳಿದರೂ ಮುಗಿಯದ 24X7 ಕುಡಿಯುವ ನೀರು ಕಾಮಗಾರಿ : ತಪ್ಪದ ಕಿರಿಕಿರಿ – ಗಮನಹರಿಸುವುದೆ ಜಲ ಮಂಡಳಿ?

ಬಹುತೇಕ ಕಡೆ ಕಾಲಮಿತಿ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಅರ್ಧಂಬರ್ಧ ಕಾಮಗಾರಿಗಳಿಂದ ರಸ್ತೆಗಳು ಹಾಳಾಗುತ್ತಿವೆ. ನಾಗರೀಕರು ತೊಂದರೆ ಪಡುವಂತಾಗಿದೆ.

ಇನ್ನಾದರೂ ಜಲ ಮಂಡಳಿ ಆಡಳಿತ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಆದ್ಯ ಗಮನಹರಿಸಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *