‘ವಿರೋಧಿಗಳೇ ಕಣ್ತೆರೆದು ನೋಡಿ…!’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದೇಕೆ?

Why did CM Siddaramaiah say 'Opponents open your eyes...!' ‘ವಿರೋಧಿಗಳೇ ಕಣ್ತೆರೆದು ನೋಡಿ…!’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದೇಕೆ?

ಕೋಲಾರ, (ಬಂಗಾರಪೇಟೆ) ನವೆಂಬರ್ 11: ಬಾರಿಯ ಬಜೆಟ್ ನಲ್ಲಿ ಕೆಜಿಎಫ್ ನಲ್ಲಿರುವ 965  ಕೈಗಾರಿಕಾ  ಪ್ರದೇಶದವನ್ನು ಬಿ ಇ ಎಂ.ಎಲ್ ನಿಂದ ಹಿಂಪಡೆದು ಅಲ್ಲಿ ಹೊಸ  ಕೈಗಾರಿಕಾ ಟೌ ನ್ಸ್ ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ಅವರು ಇಂದು  ಕೋಲಾರ, ಬಂಗಾರಪೇಟೆ ತಾಲ್ಲೂಕು ಗಳಿಗೆ  ಕುಡಿಯುವ ನೀರನ್ನು ಒದಗಿಸುವ ಯರಗೋಳ್ ಯೋಜನೆ ಹಾಗೂ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ  ಉದ್ಘಾಟನೆ ನೆರವೇರಿಸಿ   ಮಾತನಾಡಿದರು.

ಹಿಂದೆ ಪ್ರತ್ಯೇಕವಾಗಿದ್ದ ಒಂದು ಮಾಡಲಾಗಿದ್ದ ಕೋಲಾರ- ಚಿಕ್ಕಬಳ್ಳಾಪುರ  ಹಾಲು ಒಕ್ಕೂಟ ವನ್ನು ಒಂದು ಮಾಡಲಾಗಿತ್ತು.  ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತ್ಯೇಕ ಡೈರಿ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ.   ಪ್ರತಿ ತಿಂಗಳು 2 ತಿಂಗಳು ವಿದ್ಯುತ್ ಬಿಲ್ಲು ಕಟ್ಟಲಾಗುತ್ತಿತ್ತು. ಅದನ್ನು ತಪ್ಪಿಸಲು 50 ಎಕರೆ ಜಾಗದಲ್ಲಿ ಸ್ವಂತ ವಿದ್ಯುತ್ ಉತ್ಪಾದಿಸಲು ಸೋಲಾರ್ ಘಟಕ ಸ್ಥಾಪನೆಗೆ ಪರವಾನಗಿ ನೀಡಲಾಗಿದೆ. ಕೋಲಾರ ಹಾಲು ಒಕ್ಕೂಟದಿಂದ  ರೈತರಿಗೆ  ಅನುಕೂಲವಾಗಲಿದೆ ಎಂದರು. 

ಬರಗಾಲವಿದ್ದರೂ 2263 ಕೋಟಿ ರೂ.ಗಳನ್ನು ಜಿಲ್ಲೆಯ ಅಭಿವೃದ್ಧಿಗಾಗಿ ನೀಡಿದ್ದೇವೆ. ಕೆ.ಹೆಚ್.ಮುನಿಯಪ್ಪ ಅವರು ಸಚಿವರಾಗಿದ್ದಾಗ 83 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿರುವುದಕ್ಕಾಗಿ ಹಾಗೂ ಯೋಜನೆಗೆ ಸಹಕರಿಸಿದ ಎಲ್ಲರಿಗೂ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ಅರ್ಪಿಸಿದರು. 

ಕೊಡುಗೆ ಸ್ಮರಿಸಬೇಕು : ಒಂದು ಕಾಲದಲ್ಲಿ ಕೋಲಾರ, ಬಂಗಾರಪೇಟೆಯಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀಡುವ ಪರಿಸ್ಥಿತಿ ಇತ್ತು. ಕುಡಿಯುವ ನೀರು ಸಿಗುತ್ತಿರಲಿಲ್ಲ. ಅದಕ್ಕೆ ಯೋಚಿಸಿ ಮಾರ್ಕಾಂಡೇಯ ನದಿಗೆ ಯರಗೊಳ್ ಗ್ರಾಮದ ಬಳಿ ಅಣೆಕಟ್ಟು ನಿರ್ಮಿಸಿ  ನೀರು ಶೇಖರಿಸಿ ಮೂರೂ ಪಟ್ಟಣಗಳಿಗೆ ಕುಡಿಯುವ  ನೀರು ಕೊಡುವ ಯೋಜನೆ ರೂಪಿಸಲಾಯಿತು.

ಇದು ಇಂದು ಕಾರ್ಯಗತವಾಗುತ್ತಿರುವ ಹಿಂದೆ ಮಾಜಿ ಸಚಿವ ಶ್ರೀನಿವಾಸಗೌಡ ಅವರ ಕೊಡುಗೆಯನ್ನು  ಸ್ಮರಿಸಬೇಕು ಎಂದರು. ಟೀಚರ್ ಚಂದ್ರಪ್ಪ, ನಾರಾಯಣಸ್ವಾಮಿ ಅವರನ್ನು ಸ್ಮರಿಸಬೇಕು. ಯರಗೋಳ್ ಯೋಜನೆ 2006 ರಲ್ಲಿ ಪ್ರಾರಂಭವಾದರೂ, ಕಾರ್ಯಗತವಾಗಲಿಲ್ಲ.  ಬಂಗಾರಪೇಟೆ  ಶಾಸಕ ನಾರಾಯಣಸ್ವಾಮಿಯವರು ಒತ್ತಾಯ ಮಾಡಿ ಚಾಲನೆ ನೀಡಿದರು.

ಹಾಗಾಗಿ ಇದಕ್ಕೆ ಚಾಲನೆ ದೊರಕುತ್ತಿದೆ. 38.1 ಗಜ ಆಳದಲ್ಲಿ ನೀರು ನಿಲ್ಲಲಿದೆ.ಈ ಮೂರು ಪಟ್ಟಣ ಗಳಿಗೆ ನೀರು ಸಾಕಾಗುತ್ತದೆ ಎನ್ನುವುದು ನನ್ನ ಭಾವನೆ. ಕೆಜಿಎಫ್ ಶಾಸಕಿ ರೂಪ ಅವರೂ ಕೂಡ ಕೆಜಿಎಫ್ ಗೆ ಯರಗೋಳ್ ಯೋಜನೆಯಿಂದ  ನೀರು ಒದಗಿಸಲು ಕೋರಿದ್ದು, ಈ ಬಗ್ಗೆ ಚರ್ಚೆ ಮಾಡಿ ನೀರು ಸಿಕ್ಕರೆ ಎಷ್ಟೇ ಖರ್ಚಾದರೂ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದರು. 

ಒಂದು ಕ್ಷೇತ್ರದಲ್ಲಿ 2223  ಕೋಟಿ ರೂ.ಗಳ ಬೃಹತ್  ಮೊತ್ತದ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿದೆ ಎಂದರು.

ಜನಪ್ರತಿನಿಧಿಗಳ ಒತ್ತಾಯ : ರಮೇಶ್ ಕುಮಾರ್, ನಂಜೇಗೌಡ, ನಾರಾಯಣಸ್ವಾಮಿ, ಕೆ.ಹೆಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಇವರೆಲ್ಲರೂ ಕೆ.ಸಿ.ವ್ಯಾಲಿಯಾಗಬೇಕು, ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸುತ್ತಿದ್ದರು ಎಂದು ತಿಳಿಸಿದರು.

ಕೋಲಾರ, ಚಿತ್ರದುರ್ಗ  ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಗಳು. ರಾಜಸ್ಥಾನ ಬಿಟ್ಟರೆ ಅತಿ ಹೆಚ್ಚು ಬರಗಾಲಕ್ಕೆ ತುತ್ತಾಗಿರುವ ರಾಜ್ಯ ಕರ್ನಾಟಕ. ಹೆಚ್.ಎನ್.ವ್ಯಾಲಿ, ಕೆ.ವ್ಯಾಲಿ, ಪುಷ್ಪಾವತಿ ವ್ಯಾಲಿ ಜಾರಿ ಮಾಡಿದ ನಾವು ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಲೇಬೇಕೆಂದು ಒತ್ತಾಯ ಮಾಡಿದ್ದು ಮಹಾಜನತೆ. ಯೋಜನೆ ಕಾರ್ಯಸಾಧುವಾಗಿದ್ದರೆ ಎಷ್ಟೇ ಖರ್ಚಾದರೂ  ಯೋಜನೆ

ಜಾರಿ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು.ಯರಗೋಳು ಯೋಜನೆಗೆ  23 ಸಾವಿರ ಕೋಟಿ ರೂ ವೆಚ್ಚವಾಗಿದೆ. ಕೆ.ಸಿ.ವ್ಯಾಲಿಗೆ 1800 ಕೋಟಿ ರೂ ಹಾಗೂ ಹೆಚ್.ಎನ್.ವ್ಯಾಲಿಗೆ 800 ಕೋಟಿ ರೂ.ವೆಚ್ಚವಾಗಿದ್ದು, ಇದು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು.

ಕೋಲಾರದಲ್ಲಿ ಹಣ್ಣು ತರಕಾರಿ, ರೇಷ್ಮೆ  ಬೆಳೆಯುತ್ತಿದ್ದರೆ ಕೆರೆಗಳು ತುಂಬಿರುವುದರಿಂದ . 1200 ಅಡಿಗಳವರೆಗೆ ಕೊರೆದರೂ ನೀರು ಸಿಗದ ಕಾಲವೊಂದಿತ್ತು. ಆದ್ದರಿಂದ ನೀರು ತುಂಬಿ ಅಂತರ್ಜಲ ಮಟ್ಟ ಹೆಚ್ಚಾಗಬೇಕು ಎಂದು ಒತ್ತಾಯಿಸಿದ್ದರು. ಇಲ್ಲಿ ಯಾವುದೇ ಪ್ರಮುಖ ನದಿ ಇಲ್ಲದಿರುವುದರಿಂದ ಕೆರೆಗಳು ತುಂಬುವುದು ಅವಶ್ಯ. ಕುಡಿಯುವ ನೀರು ನೀಡುವುದು ಅತ್ಯಂತ ಅಗತ್ಯ ಎಂದು ಮನಗಂಡು ಮಂಜೂರು ಮಾಡಲಾಯಿತು. ಯರಗೊಳ್ ಯೋಜನೆಗೆ ಅಂದು 13 ಕೋಟಿ, ಇಂದು 23 ಕೋಟಿ ರೂ.ಗಳ ವೆಚ್ಚವಾಗುತ್ತಿದೆ. ಎಲ್ಲಾ ಯೋಜನೆಗಳನ್ನು ಈ ಅವಧಿ ಮುಗಿಯುವುದರೊಳಗೆ  ಪೂರ್ಣಗೊಳಿಸಲಾಗುವುದು ಎಂದರು. 

ನೀರನ್ನು ಪರೀಕ್ಷೆ ಮಾಡಿಸಿದ್ದು ಹಾನಿಕಾರಕ ಪದಾರ್ಥ ಇಲ್ಲ ಎಂದು ವಿಶ್ವಸಂಸ್ಥೆಯವರು ಭೇಟಿ ನೀಡಿ ಮೆಚ್ಚುಗೆ ನೀಡಿದ್ದಾರೆ. ಕುಮಾರಸ್ವಾಮಿ ಯವರು ಇದನ್ನು ಅರ್ಥಮಾಡಿಕೊಳ್ಳಬೇಕು. ಕೇರಳದ ಸಮಾಲೋಚಕರೂ ಕೂಡ  ಇದನ್ನು ಇತರೆ ರಾಜ್ಯಗಳಲ್ಲಿ ಅನುಕರಿಸಬೇಕು ಎಂದಿದ್ದಾರೆ. ಕೇವಲ ರಾಜಕೀಯ ಕ್ಕಾಗಿ ಟೀಕೆ ಮಾಡಬಾರದು ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಜನರೇ ಮಾಲೀಕರು. ಜನರ ಸಮಸ್ಯೆಗಳಿಗೆ,  ಜನರ ವಿರುದ್ಧವಾಗಿ, ದಾರಿತಪ್ಪಿಸುವ ಕೆಲಸವನ್ನು ಮಾಡಬಾರದು. ಕೋಲಾರ ಮಲೆನಾಡು ಆಗುವ ದಿನಗಳು ದೂರವಿಲ್ಲ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಕಾರಣ

ವಿರೋಧಿಗಳೇ ಕಣ್ತೆರೆದು ನೋಡಿ : ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ  ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳ ನಂತರ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ ಎಂದು ಟೀಕಿಸುವ ವಿರೋಧಿಗಳಿಗೆ ಕಣ್ತೆರೆದು ನೋಡುವಂತೆ ತಿಳಿಸಿದ ಮುಖ್ಯಮಂತ್ರಿಗಳು,  ಕಣ್ಣು ಮುಚ್ಚಿಕೊಂಡು, ರಾಜಕೀಯ ಕಾರಣಗಳಿಗಾಗಿ ಮಾತನಾಡಬೇಡಿ ಎಂದರು.

ಇದು ಸಣ್ಣ ಅನುದಾನವಲ್ಲ. ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ, ತುಮಕೂರು,ಬೆಂಗಳೂರು ಗ್ರಾಮಾಂತರ,  ಹಾಸನ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯನ್ನು ಯಾರು ಜಾರಿಗೆ ಮಾಡಿದ್ದು? ವಿರೋಧಿಸುವವರು ಮಾಡಿಕೊಟ್ಟರೆ ಎಂದು ಪ್ರಶ್ನಿಸಿದರು. ಎತ್ತಿನಹೊಳೆ ಯೋಜನೆ ಜಾರಿಯಾಗುವುದಿಲ್ಲ ಎನ್ನುವವರಿಗೆ ಇಂದು ಉತ್ತರ ಸಿಕ್ಕಿದೆ ಎಂದು ತಿಳಿಸಿದರು. 

ಕಳೆದ ವರ್ಷವೇ ಈ ಯೋಜನೆ ಜಾರಿಯಾಗಿದ್ದರೆ ಎಲ್ಲರಿಗೂ ನೀರು ದೊರಕುತ್ತಿತ್ತು. ನಮ್ಮ ಅವಧಿಯಲ್ಲಿ ಎತ್ತಿನಹೊಳೆ ಸಂಪೂರ್ಣ ಯೋಜನೆ ಮುಗಿಸಿ ಈ ಭಾಗದ ಜನರಿಗೆ ಕುಡಿಯುವ ನೀರನ್ನು ಕೊಟ್ಟೇಕೊಡುತ್ತೇವೆ. ನಮ್ಮನ್ನು ಟೀಕಿಸುವವರಿಗೆ ಹೊಟ್ಟೆಉರಿಯುವಂತೆ  ಕೆಲಸವನ್ನು ಮಾಡುತ್ತೇವೆ ಎಂದರು.

ಕೋಲಾರ ಜಿಲ್ಲೆ ಹಸಿರಾಗಿದ್ದರೆ ಕೆರೆಗಳು ತುಂಬಿರುವುದರಿಂದ ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ, ಪುಷ್ಪಾವತಿ  ಕೆರೆಗಳನ್ನು ತುಂಬಿಸುವ ಕಾರ್ಯವನ್ನು ನಮ್ಮ ಕಾಲದಲ್ಲಿ ಮಂಜೂರು ಮಾಡಿದ್ದು  ಎಂದು ಹೇಳಿದರು.

*** ಕೆ.ಸಿ.ವ್ಯಾಲಿ ಯೋಜನೆ ಜಾರಿ ಮಾಡಬಾರದು. ಅದರ ಮೂಲಕ ಜನರಿಗೆ ವಿಷ ನೀಡಲಾಗುತ್ತಿದೆ  ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಯೋಜನೆಯಿಂದ ಕೆರೆಗಳು ತುಂಬಿವೆ. ದನಕರುಗಳಿಗೆ ಮೇವಾಗಿದೆ. ಈವರೆಗೆ  ಜನ, ದನಕರುಗಳು ಸತ್ತ ಉದಾಹರಣೆ ಇದೆಯೇ?  ಎಂದು ಮುಖ್ಯಮಂತ್ರಿ ಗಳು ಜನರನ್ನು ಕೇಳಿದಾಗ ಇಲ್ಲ ಎಂದು ಜೋರಾಗಿ ಕೂಗಿದರು. ಇದನ್ನು ಕುಮಾರಸ್ವಾಮಿಗೆ ಹೇಳಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *