ಶಿವಮೊಗ್ಗ (shivamogga), ಜುಲೈ 20: ವಿದ್ಯಾರ್ಥಿನಿಯೋರ್ವಳನ್ನು ಶಾಲೆಗೆ ಸೇರ್ಪಡೆ ಮಾಡಿಕೊಳ್ಳಲು ಪೋಷಕರಿಂದ 10,000 ರೂ. ಲಂಚ ಪಡೆಯುತ್ತಿದ್ದ ಸರ್ಕಾರಿ ವಸತಿ ಶಾಲೆ ಪ್ರಾಂಶುಪಾಲರೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ 20/೦7/2026 ರಂದು ಭದ್ರಾವತಿ ತಾಲೂಕಿನಲ್ಲಿ ನಡೆದಿದೆ.
ಭದ್ರಾವತಿ ತಾಲೂಕಿನ ಹುಣಸೆಕಟ್ಟ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ನಾಮದೇವ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಪ್ರಾಂಶುಪಾಲರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಭದ್ರಾವತಿ ತಾಲೂಕಿನ ವ್ಯಕ್ತಿಯೋರ್ವರು ತಮ್ಮ ಪುತ್ರಿಯನ್ನು 7ನೇ ತರಗತಿ ಸೇರ್ಪಡೆ ಮಾಡಲು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಆಗಮಿಸಿದ್ದರು. ಈ ವೇಳೆ ಪ್ರಾಂಶುಪಾಲ ನಾಮದೇವ ಅವರು, ಡ್ರಮ್ ಸೆಟ್ ಖರೀದಿಸಲು 20,000 ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಈ ಸಂಬಂಧ ಸದರಿ ವ್ಯಕ್ತಿಯು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸರ ಸೂಚನೆಯಂತೆ 20.07.2026 ರಂದು ಸದರಿ ವ್ಯಕ್ತಿಯು ವಸತಿ ಶಾಲೆಯಲ್ಲಿ 10,000 ರೂ.ಗಳನ್ನು ನೀಡುವ ವೇಳೆ, ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ ಎಸ್ ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ ಪಿ ಚಂದ್ರಶೇಖರ್, ಇನ್ ಸ್ಪೆಕರ್ ರುದ್ರೇಶ್, ವೀರಬಸಪ್ಪ ಎಲ್ ಕುಸಲಾಪುರ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
Bhadravathi: Government Residential School Principal Caught in Lokayukta Trap! Shivamogga, July 20: Lokayukta police arrested the principal of a government residential school on July 20, 2026, while he was accepting a bribe of ₹10,000 from parents to admit a female student to the school. The arrested accused has been identified as Namadev, the principal of Kittur Rani Chennamma Residential School located in Hunasekatta village, Bhadravathi taluk.

