ಶಿವಮೊಗ್ಗದ ಪ್ರೆಸ್ ಕಾಲೋನಿ ಸುತ್ತಮುತ್ತ ಹೆಚ್ಚಾದ ಕಳ್ಳಕಾಕರು : ಗಮನಹರಿಸುವರೆ ಪೊಲೀಸರು?!

ಶಿವಮೊಗ್ಗದ ಪ್ರೆಸ್ ಕಾಲೋನಿ ಸುತ್ತಮುತ್ತ ಹೆಚ್ಚಾದ ಕಳ್ಳಕಾಕರು : ಗಮನಹರಿಸುವರೆ ಪೊಲೀಸರು?! ಶಿವಮೊಗ್ಗ, ಜ. 15: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮಿನಕೊಪ್ಪದ ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಇತ್ತೀಚೆಗೆ ಕಳ್ಳಕಾಕರ ಹಾವಳಿ ವಿಪರೀತವಾಗಿದೆ. ಸ್ಥಳೀಯ ನಾಗರೀಕರ ನಿದ್ದೆಗೆಡುವಂತೆ ಮಾಡಿದೆ. ಭಾನುವಾರ ರಾತ್ರಿ ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಯ, ಮೂರ್ನಾಲ್ಕು ಕಡೆ ಕಳವು ಕೃತ್ಯಗಳು ನಡೆದಿವೆ. ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ವಾಹನದಿಂದ ಪೆಟ್ರೋಲ್ ತೆಗೆಯುವುದರ ಜೊತೆಗೆ, ಕೆಲ ವಸ್ತುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಉಳಿದಂತೆ ಕೆಲವೆಡೆ ನಿರ್ಮಾಣ ಹಂತದ ಕಟ್ಟಡಗಳ ಸ್ಥಳದ ಶೆಡ್ ಗಳ ಶೀಟ್ ಗಳನ್ನು ಕಿತ್ತು ಹಾಕಿ ಕಳವಿಗೆ ಯತ್ನಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗಣಪತಿ ದೇವಾಲಯದ ಹುಂಡಿ ಒಡೆದು ಅದರೊಳಗಿದ್ದ ಸಾವಿರಾರು ರೂ. ಗಳನ್ನು ಕಳ್ಳರು ಅಪಹರಿಸಿದ್ದರು. ಮನೆಯೊಂದರ ಮುಂಭಾಗವಿದ್ದ ಕಬ್ಬಿಣದ ನೆಲಹಾಸನ್ನು ಕಳವು ಮಾಡಲಾಗಿತ್ತು ಎಂದು ನಿವಾಸಿಗಳು ತಿಳಿಸಿದ್ದಾರೆ. ‘ಬಡಾವಣೆಯ ಸುತ್ತಮುತ್ತ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಇದರ ಜೊತೆಗೆ ಗಾಂಜಾ, ಮದ್ಯ ವ್ಯಸನಿಗಳ ಹಾವಳಿಯಿದೆ. ಕ್ರಿಮಿನಲ್ಸ್ ಗಳಿಗೆ ಯಾವುದೇ ಭಯವಿಲ್ಲವಾಗಿದೆ. ಇದು ಸಹಜವಾಗಿಯೇ ಆತಂಕ ಉಂಟು ಮಾಡಿದೆ. ಪೊಲೀಸರು ಕಳ್ಳಕಾಕರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಶಿವಮೊಗ್ಗ, ಜ. 15: ಶಿವಮೊಗ್ಗದ  ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮಿನಕೊಪ್ಪದ ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಇತ್ತೀಚೆಗೆ ಕಳ್ಳಕಾಕರ ಹಾವಳಿ ವಿಪರೀತವಾಗಿದೆ. ಇದು ಸ್ಥಳೀಯ ನಾಗರೀಕರ ನಿದ್ದೆಗೆಡುವಂತೆ ಮಾಡಿದೆ.

ಭಾನುವಾರ ರಾತ್ರಿ ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಯ, ಮೂರ್ನಾಲ್ಕು ಕಡೆ ಕಳವು ಕೃತ್ಯಗಳು ನಡೆದಿವೆ. ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ವಾಹನದಿಂದ ಪೆಟ್ರೋಲ್ ತೆಗೆಯುವುದರ ಜೊತೆಗೆ, ಕೆಲ ವಸ್ತುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಉಳಿದಂತೆ ಕೆಲವೆಡೆ ನಿರ್ಮಾಣ ಹಂತದ ಕಟ್ಟಡಗಳ ಸ್ಥಳದ ಶೆಡ್ ಗಳ ಶೀಟ್ ಗಳನ್ನು ಕಿತ್ತು ಹಾಕಿ ಕಳವಿಗೆ ಯತ್ನಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಗಣಪತಿ ದೇವಾಲಯದ ಹುಂಡಿ ಒಡೆದು ಅದರೊಳಗಿದ್ದ ಸಾವಿರಾರು ರೂ. ಗಳನ್ನು ಕಳ್ಳರು ಅಪಹರಿಸಿದ್ದರು. ಮನೆಯೊಂದರ ಮುಂಭಾಗವಿದ್ದ ಕಬ್ಬಿಣದ ನೆಲಹಾಸನ್ನು ಕಳವು ಮಾಡಲಾಗಿತ್ತು ಎಂದು ನಿವಾಸಿಗಳು ತಿಳಿಸಿದ್ದಾರೆ.

‘ಬಡಾವಣೆಯ ಸುತ್ತಮುತ್ತ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಇದರ ಜೊತೆಗೆ ಗಾಂಜಾ, ಮದ್ಯ ವ್ಯಸನಿಗಳ ಹಾವಳಿಯಿದೆ. ಕ್ರಿಮಿನಲ್ಸ್ ಗಳಿಗೆ ಯಾವುದೇ ಭಯವಿಲ್ಲವಾಗಿದೆ. ಇದು ಸಹಜವಾಗಿಯೇ ಆತಂಕ ಉಂಟು ಮಾಡಿದೆ. ಪೊಲೀಸರು ಕಳ್ಳಕಾಕರ ಹಾವಳಿ ಕಡಿವಾಣಕ್ಕೆ ಕ್ರಮಕೈಗೊಳ್ಳಬೇಕು’ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →