ಲಾಡ್ಜ್ ನಲ್ಲಿ ಕೊಲೆಗೀಡಾದ ಮಹಿಳೆ ಶವ ಪತ್ತೆ : ವಾರಸುದಾರರ ಪತ್ತೆಗೆ ಸಹಕರಿಸಲು ಪೊಲೀಸರ ಮನವಿ

Body of murdered woman found in lodge: Police appeal to help find heirs ಲಾಡ್ಜ್ ನಲ್ಲಿ ಕೊಲೆಗೀಡಾದ ಮಹಿಳೆ ಶವ ಪತ್ತೆ : ವಾರಸುದಾರರ ಪತ್ತೆಗೆ ಸಹಕರಿಸಲು ಪೊಲೀಸರ ಮನವಿ

ಶಿವಮೊಗ್ಗ (shivamogga), ಏ. 6: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆ (Thirthahalli Taluk hanagerekatte) ಗ್ರಾಮದ ಲಾಡ್ಜ್ ವೊಂದರಲ್ಲಿ, ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಮಹಿಳೆಯ ವಾರಸುದಾರರ ಪತ್ತೆಗೆ ಸಹಕರಿಸುವಂತೆ ಮಾಳೂರು ಠಾಣೆ ಪೊಲೀಸರು (malur police station) ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಹಣಗೆರೆಕಟ್ಟೆಯ ಸೈಯದ್ ಸಾದತ್ ದರ್ಗಾ ಸಮೀಪದಲ್ಲಿರುವ ಹಬೀಬುಲ್ಲಾ ಎಂಬುವರಿಗೆ ಸೇರಿದ ಲಾಡ್ಜ್ ನ (lodge) ಕೊಣೆಯೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.

ಹರಿತವಾದ ಚೂರಿಯಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದು ಕಂಡುಬಂದಿತ್ತು. ಇಡೀ ಕೋಣೆ ರಕ್ತಮಯವಾಗಿದ್ದುದು ಹತ್ಯೆಯ ಭೀಕರತೆಗೆ ಸಾಕ್ಷಿಯಾಗಿತ್ತು. ಮಹಿಳೆಯ ವಿಳಾಸ, ಹೆಸರು ಸೇರಿದಂತೆ ಯಾವುದೇ ವಿವರಗಳು ಪತ್ತೆಯಾಗಿರಲಿಲ್ಲ.

ಚಹರೆ : ಮೃತ ಮಹಿಳೆಗೆ ಸುಮಾರು 30 ರಿಂದ 35 ವರ್ಷ ವಯೋಮಾನವಿದೆ. 5.3 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದಾರೆ. ಕಿವಿಯಲ್ಲಿ ಕೆಂಪು ಹರಳಿನ ಬೆಂಡೋಲೆ, ಎಡಭಾಗದ ಮೂಗಿನಲ್ಲಿ ರಿಂಗ್, ಕತ್ತಿನಲ್ಲಿ ಕರಿಮಣಿ ಸರ ಹಾಗೂ ಕಾಲು ಬೆರಳಿನಲ್ಲಿ ಕಾಲುಂಗರ ಇರುತ್ತದೆ. ಗಿಳಿ ಹಸಿರು ಬಣ್ಣದ ಚೂಡಿದಾರ್, ಕೆಂಪು ಬಣ್ಣದ ವೇಲ್ ಧರಿಸಿದ್ದಾರೆ.

ಮೃತ ಮಹಿಳೆಯ ವಿಳಾಸ ಮತ್ತು ವಾರಸುದಾರರು ಪತ್ತೆಯಾದಲ್ಲಿ ಮಾಳೂರು ಪೊಲೀಸ್ ಠಾಣೆ ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ (shimoga police control room), ದೂ.ಸಂ.: 08182-261413 / 9480803300/ 08181-235142/228310/ 9480803353/9480803333/ 9480803340 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *