SP visits Soraba, Shikaripura, Sagar flood affected areas ಸೊರಬ, ಶಿಕಾರಿಪುರ, ಸಾಗರದ ಪ್ರವಾಹ ಪೀಡಿತ ಸ್ಥಳಗಳಿಗೆ ಎಸ್ಪಿ ಭೇಟಿ

ಸೊರಬ, ಶಿಕಾರಿಪುರ, ಸಾಗರದ ಪ್ರವಾಹ ಪೀಡಿತ ಸ್ಥಳಗಳಿಗೆ ಎಸ್ಪಿ ಭೇಟಿ

ಶಿವಮೊಗ್ಗ (shivamogga), ಜು. 19: ಮಲೆನಾಡಿನಾದ್ಯಂತ (malnad) ಭಾರೀ ಮಳೆ (heavy rainfall) ಮುಂದುವರಿದಿದೆ. ನದಿ, ಕೆರೆಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಮತ್ತೋಂದೆಡೆ ಹವಾಮಾನ ಇಲಾಖೆಯು ಮಳೆ ಆರ್ಭಟ ಮುಂದುವರಿಯುವ ಸೂಚನೆ ನೀಡಿದ್ದು, ರೆಡ್ ಅಲರ್ಟ್ (red alert) ಘೋಷಿಸಿದೆ.

ಈ ನಡುವೆ ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ (shimoga sp g k mithunkumar) ಅವರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ (flood affected areas) ಜು. 19 ರ ಶುಕ್ರವಾರ ಖುದ್ದು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸ್ ಠಾಣೆಗಳಿಂದ (police stations) ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ವೀಕ್ಷಣೆ ಮಾಡಿದರು.

ಶಿಕಾರಿಪುರ ತಾಲೂಕಿನ (shikaripura taluk) ಅಂಜನಾಪುರ, ಕೊಟ್ಟ, ಕೊಡಸೂರು, ಸೊರಬ ತಾಲೂಕಿನ (sorab taluk) ಅಂದವಳ್ಳಿ, ತಟ್ಟಿಗೆರೆ, ಸಾಗರ ತಾಲೂಕಿನ (sagar taluk) ಸೈದೂರು, ಕೆಲವೆ ಮೊದಲಾದೆಡೆ ಭೇಟಿಯಿತ್ತು ಪ್ರವಾಹ ಸ್ಥಿತಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಪ್ರವಾಹ ಪೀಡಿತ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಸ್ಥಳೀಯ ಪೊಲೀಸರಿಗೆ ಸಲಹೆ ಸೂಚನೆ ನೀಡಿದ್ದಾರೆ.

ಸೂಚನೆ : ನೆರೆ ಪೀಡಿತ ಪ್ರದೇಶಗಳಲ್ಲಿ ನದಿ ನೀರಿಗೆ (river water) ಇಳಿಯುವುದು, ಈಜಾಡುವುದು (swimming), ಅಪಾಯಕಾರಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದು, ಪೋಟೋ (photo), ಸೆಲ್ಪಿ (selfi) ತೆಗೆದುಕೊಳ್ಳುವುದು ಸಾರ್ವಜನಿಕರಿಗೆ ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯು (police dept) ಪ್ರವಾಹ ಪೀಡಿತ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ, ಸೂಚನಾ ಫಲಕ ಅಳವಡಿಸಿದೆ. ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

Waterlogging problem during rainy season : Is Shimoga Municipal Corporation paying attention? ಮಳೆಗಾಲದ ವೇಳೆ ಜಲಾವೃತ ಸಮಸ್ಯೆ : ಗಮನಹರಿಸುವುದೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ? Previous post ಮಳೆಗಾಲದ ವೇಳೆ ಜಲಾವೃತ ಸಮಸ್ಯೆ : ಗಮನಹರಿಸುವುದೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ?
Heavy rain: schools and colleges in Shimoga Taluk. 20 Saturday holiday announcement! ಭಾರೀ ಮಳೆ : ಶಿವಮೊಗ್ಗತಾಲೂಕಿನ ಶಾಲಾ - ಕಾಲೇಜುಗಳಿಗೆ ಜು. 20 ರ ಶನಿವಾರ ರಜೆ ಘೋಷಣೆ! Next post ಭಾರೀ ಮಳೆ : ಶಿವಮೊಗ್ಗ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 20 ರ ಶನಿವಾರ ರಜೆ ಘೋಷಣೆ!