Heavy rain in the hills - 5 feet of water stored in Bhadra reservoir in a single day! ಮಲೆನಾಡಲ್ಲಿ ಭಾರೀ ಮಳೆ - ಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ 5 ಅಡಿ ನೀರು ಸಂಗ್ರಹ!

ಮಲೆನಾಡಲ್ಲಿ ಭಾರೀ ಮಳೆ – ಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ 5 ಅಡಿ ನೀರು ಸಂಗ್ರಹ!

ಶಿವಮೊಗ್ಗ (shivamogga), ಜು. 20: ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ (shivamogga – davanagere) ರೈತರ ಜೀವನಾಡಿ ಎಂದೇ ಕರೆಯಲಾಗುವ, ಮಧ್ಯ ಕರ್ನಾಟಕದ (central karnataka) ಪ್ರಮುಖ ಜಲಾಶಯವಾದ ಭದ್ರಾ ಒಳಹರಿವಿನಲ್ಲಿ ಶನಿವಾರ ತುಸು ಇಳಿಕೆ ಕಂಡುಬಂದಿದೆ.

ಉಳಿದಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂಗೆ ಸುಮಾರು 5 ಅಡಿಯಷ್ಟು (feet) ನೀರು ಸಂಗ್ರಹವಾಗಿದೆ. ಇದು ಪ್ರಸ್ತುತ ಮುಂಗಾರು ಮಳೆ (monsoon rain) ಅವಧಿ ವೇಳೆ ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದ ನೀರು ಸಂಗ್ರಹವಾಗಿರುವುದು ಇದೇ ಮೊದಲಾಗಿದೆ.

ಶನಿವಾರ (ಜು. 20) ರ ಬೆಳಿಗ್ಗೆ 6 ಗಂಟೆಯ ಮಾಹಿತಿಯಂತೆ, ಭದ್ರಾ ಡ್ಯಾಂನ (bhadra dam) ಒಳಹರಿವು 46,876 ಕ್ಯೂಸೆಕ್ ಇದೆ. ಜು. 19 ರಂದು ಒಳಹರಿವಿನ (inflow) ಪ್ರಮಾಣ 49,555 ಕ್ಯೂಸೆಕ್ ಇತ್ತು. ಪ್ರಸ್ತುತ ಡ್ಯಾಂನ ಹೊರಹರಿವು (out flow) 186 ಕ್ಯೂಸೆಕ್ ಇದೆ. ಸದ್ಯ ಭದ್ರಾ ಡ್ಯಾಂ ನೀರಿನ ಮಟ್ಟ 162 ಅಡಿ 3 ಇಂಚು ಇದೆ (ಗರಿಷ್ಠ ಮಟ್ಟ : 186 ಅಡಿ) ಇದೆ.

ಕಳೆದ ವರ್ಷ (last year) ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 142. 1 ಅಡಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ಮುಂಗಾರು ಮಳೆ (mungaru male) ಅವಧಿ ವೇಳೆ ಜಲಾನಯನ ಪ್ರದೇಶ (catchment areas) ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ (heavy rainfall), ಡ್ಯಾಂ ನೀರಿನ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ 21. 2 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.

ಭದ್ರಾ ಜಲಾಶಯವು (bhadra dam) ಒಟ್ಟಾರೆ 45. 040 ಟಿಎಂಸಿಯಷ್ಟು (tmc) ನೀರು ಸಂಗ್ರಹಣಾ ಸಾರ್ಮರ್ಥ್ಯ ಹೊಂದಿದೆ. ಪ್ರಸ್ತುತ 28. 336 ಟಿಎಂಸಿ ನೀರು ಸಂಗ್ರಹವಾಗಿದೆ. ಪ್ರಸ್ತುತ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆ (heavy to heavy rainfall) ಮುಂದುವರಿದಿದೆ. ಈ ಕಾರಣದಿಂದ ಪ್ರಸ್ತುತ ವರ್ಷ ಡ್ಯಾಂ ಗರಿಷ್ಠ ಮಟ್ಟ (maximum level) ತಲುಪುವ ಸಾಧ್ಯತೆಗಳು ಗೋಚರವಾಗುತ್ತಿವೆ.

Heavy rain: schools and colleges in Shimoga Taluk. 20 Saturday holiday announcement! ಭಾರೀ ಮಳೆ : ಶಿವಮೊಗ್ಗತಾಲೂಕಿನ ಶಾಲಾ - ಕಾಲೇಜುಗಳಿಗೆ ಜು. 20 ರ ಶನಿವಾರ ರಜೆ ಘೋಷಣೆ! Previous post ಭಾರೀ ಮಳೆ : ಶಿವಮೊಗ್ಗ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 20 ರ ಶನಿವಾರ ರಜೆ ಘೋಷಣೆ!
6 days a week supplementary nutritious food distribution program for government school children ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಉದಯ Next post ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ