bhadravati | ಭದ್ರಾವತಿ ತಾಲೂಕಿನ ಯಾವ್ಯಾವ ಮಾರ್ಗಗಳಲ್ಲಿ ಹಾದು ಹೋಗಲಿದೆ ಬೃಹತ್ ಮಾನವ ಸರಪಳಿ?

bhadravati | Which routes of Bhadravati taluk will the huge human chain pass through? ಭದ್ರಾವತಿ ತಾಲೂಕಿನ ಯಾವ್ಯಾವ ಮಾರ್ಗಗಳಲ್ಲಿ ಹಾದು ಹೋಗಲಿದೆ ಬೃಹತ್ ಮಾನವ ಸರಪಳಿ?

ಭದ್ರಾವತಿ (bhadravati), ಸೆ. 12: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ (international democracy day) ಯ ಪ್ರಯುಕ್ತ ಸೆ. 15 ರಂದು ಭದ್ರಾವತಿ ತಾಲೂಕಿನಲ್ಲಿ ಮಾನವ ಸರಪಳಿ (human chain) ಕಾರ್ಯಕ್ರಮ ಆಯೋಜಿಸಲಾಗಿದೆ.

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮ (karehalli village) ದಿಂದ ಮಾನವ ಸರಪಳಿ ಆರಂಭವಾಗಲಿದೆ. ಕೆಂಪೇಗೌಡನಗರ – ಬಾರಂದೂರು – ಮೊಸರಳ್ಳಿ – ಸುಣ್ಣದಹಳ್ಳಿ – ಮಾರುತಿನಗರ – ಭದ್ರಾವತಿ ಬಸ್ ನಿಲ್ದಾಣ – ಕಡದಕಟ್ಟೆ – ಜೇಡಿಕಟ್ಟೆ – ಮಾಚೇನಹಳ್ಳಿ ಕೆ.ಎಂ.ಎಫ್ ಡೈರಿ (kmf dairy) ಯ ಮೂಲಕ ಶಿವಮೊಗ್ಗ ತಾಲೂಕು (shimoga taluk) ಗಡಿ ತಲುಪಲಿದೆ.  

ತಾಲೂಕಿನ ಸಾರ್ವಜನಿಕರು ಸೆ. 15 ರಂದು ಬೆಳಗ್ಗೆ 9 ಗಂಟೆಗೆ ನಿಗದಿತ ಮಾರ್ಗದಲ್ಲಿ ಹಾಜರಿದ್ದು, ಮಾನವ ಸರಪಳಿ (human chain) ರಚನೆಗೆ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →