shimoga | shikaripur | ಶಿಕಾರಿಪುರ : ಬೆನ್ನಿಗೆ ಚೂರಿ ಹಾಕಿದವನಿಗೆ ಜೈಲು ಶಿಕ್ಷೆ – ದಂಡ!
ಶಿವಮೊಗ್ಗ (shimoga), ಸೆ. 14: ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಕೋಪಗೊಂಡು, ವ್ಯಕ್ತಿಯೋರ್ವರ ಬೆನ್ನಿಗೆ ಚೂರಿಯಿಂದ ಇರಿದು (stab with a knife) ಗಾಯಗೊಳಿಸಿದ್ದವನಿಗೆ, ಶಿವಮೊಗ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (shimoga court) ಶಿಕ್ಷೆ ವಿಧಿಸಿ 13-09-2024 ರಂದು ತೀರ್ಪು ನೀಡಿದೆ.
ಶಿಕಾರಿಪುರ ತಾಲೂಕು (shikaripur taluk) ಶಿರಾಳಕೊಪ್ಪ ಪಟ್ಟಣದ (shiralkoppa town) ನಿವಾಸಿ ಹಯಾತ್ ಸಾಬ್ (31) ಶಿಕ್ಷೆಗೊಳಗಾದ (convicted) ಯುವಕನಾಗಿದ್ದಾನೆ. 1 ವರ್ಷ 6 ತಿಂಗಳು ಸಾದಾ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ (fine) ವಿಧಿಸಲಾಗಿದೆ.
ದಂಡದ ಮೊತ್ತ ಪಾವತಿಸಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ 3 ತಿಂಗಳ ಜೈಲು ಶಿಕ್ಷೆ (Imprisonment) ಅನುಭವಿಸುವಂತೆ ಆದೇಶಿಸಲಾಗಿದೆ. ದಂಡದ ಮೊತ್ತದಲ್ಲಿ ಚೂರಿ (knife) ಇರಿತಕ್ಕೊಳಗಾದ ವ್ಯಕ್ತಿಗೆ 5 ಸಾವಿರ ರೂ.ಗಳನ್ನು ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ (judge) ಮಂಜುನಾಥ್ ನಾಯಕ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ ಎಂ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : ಶಿಕ್ಷೆಗೊಳಗಾದ ಹಯಾತ್ ಸಾಬ್ ಹಾಗೂ ಶಿರಾಳಕೊಪ್ಪದ (shiralkoppa) ಹಳ್ಳೂರು ಕೇರಿ ನಿವಾಸಿ ಜಿಯಾವುಲ್ಲಾ ಖಾನ್ (24) ರವರ ನಡುವೆ, ಮಾವಿನ ತೋಟದ ಗುತ್ತಿಗೆ ವಿಚಾರದಲ್ಲಿ ಹಣಕಾಸಿನ ವ್ಯವಹಾರವಿತ್ತು.
ಹಯಾತ್ ಸಾಬ್ 25 ಸಾವಿರ ರೂ. ಬಾಕಿ ಕೊಡಬೇಕಾಗಿತ್ತು. ಹಣ ಹಿಂದಿರುಗಿಸುವುದಾಗಿ ಹೇಳಿ, 15-05-2022 ರಂದು ಶಿರಾಳಕೊಪ್ಪ ಪಟ್ಟಣ (shiralkoppa twon) ಕ್ಕೆ ಜಿಯಾವುಲ್ಲಾ ಖಾನ್ ರನ್ನು ಹಯಾತ್ ಕರೆಯಿಸಿಕೊಂಡಿದ್ದ.
ಪದೆ ಪದೇ ಹಣ ಕೇಳುತ್ತಿಯಾ ಎಂದು ಆಕ್ರೋಶಗೊಂಡು ಚೂರಿಯಿಂದ ಜಿಯಾವುಲ್ಲಾ ಖಾನ್ ಬೆನ್ನಿಗೆ ಇರಿದು ರಕ್ತ ಗಾಯಗೊಳಿಸಿದ್ದ. ಈ ಸಂಬಂಧ ಹಯಾತ್ ಸಾಬ್ ವಿರುದ್ದ ಶಿರಾಳಕೊಪ್ಪ ಪೊಲೀಸ್ ಠಾಣೆ (shiralkoppa police station) ಯಲ್ಲಿ ದೂರು ದಾಖಲಾಗಿತ್ತು.
ಶಿರಾಳಕೊಪ್ಪ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿಯಾಗಿದ್ದ ರಮೇಶ್ ರವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ (chargesheet) ದಾಖಲಿಸಿದ್ದರು.
