mla munirathna | benagluru | Audio viral: MLA Muniratna in police custody! ಆಡಿಯೋ ವೈರಲ್ : ಶಾಸಕ ಮುನಿರತ್ನ ಪೊಲೀಸ್ ವಶಕ್ಕೆ!

mla munirathna | benagluru | ಆಡಿಯೋ ವೈರಲ್ : ಶಾಸಕ ಮುನಿರತ್ನ ಪೊಲೀಸ್ ವಶಕ್ಕೆ!

ಬೆಂಗಳೂರು (bengaluru), ಸೆ. 14: ಜಾತಿ ನಿಂದನೆ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (bjp mla munirathna) ಅವರನ್ನು, ಸೆ. 14 ರ ಶನಿವಾರ ಸಂಜೆ ಕೋಲಾರ ಜಿಲ್ಲೆಯಲ್ಲಿ ಬೆಂಗಳೂರು ಪೊಲೀಸರು (bengaluru police) ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಗುತ್ತಿಗೆದಾರ ಚಲುವರಾಜು (bbmp contractor chaluvaraju) ಅವರಿಗೆ ಮುನಿರತ್ನ ಅವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋ ವೈರಲ್ (viral audio) ಆಗಿತ್ತು. ಇದರ ಬೆನ್ನಲ್ಲೇ, ವೈಯಾಲಿಕಾವಲ್ ಪೊಲೀಸ್ ಠಾಣೆ (vyalikaval police station) ಯಲ್ಲಿ ಮುನಿರತ್ನ ವಿರುದ್ದ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಎರಡು ಪ್ರತ್ಯೇಕ ಎಫ್.ಐ.ಆರ್ (fir) ಗಳು ದಾಖಲಾಗಿದ್ದವು.

ಬಿಬಿಎಂಪಿ ಗುತ್ತಿಗೆದಾರ ಚಲುವರಾಜ ಅವರು ಪೊಲೀಸರಿಗೆ ದಾಖಲಿಸಿದ ದೂರಿನಲ್ಲಿ, ಮುನಿರತ್ನ (munirathna) ಅವರು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಹಣ ಕೊಡದಿದ್ದರೆ ಗುತ್ತಿಗೆ ರದ್ದುಪಡಿಸುವ ಬೆದರಿಕೆ ಹಾಕಿದ್ದರು. ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಅವ್ಯಾಚ್ಯವಾಗಿ ನಿಂದಿಸಿ, ದೈಹಿಕ ಹಲ್ಲೆ ಕೂಡ ನಡೆಸಿದ್ದಾರೆ ಎಂಬಿತ್ಯಾದಿಯಾಗಿ ಆರೋಪಿಸಿದ್ದಾರೆ.

ಮತ್ತೊಂದೆಡೆ, ಬಿಬಿಎಂಪಿ ಕಾರ್ಪೋರೇಟರ್ ಓರ್ವರು ನೀಡಿದ ದೂರಿನ ಆಧಾರದ ಮೇಲೆ ಜಾತಿ ನಿಂದನೆಯ ಪ್ರಕರಣ ಕೂಡ ಮುನಿರತ್ನ ವಿರುದ್ದ ದಾಖಲಾಗಿತ್ತು. ಆಡಿಯೋ ವೈರಲ್ ಆದ ಬೆನ್ನಲ್ಲೇ ಮುನಿರತ್ನ ಅವರನ್ನು ಬಂಧಿಸಬೇಕೆಂಬ ಆಗ್ರಹವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು.

Shivamogga: Husband sentenced to 1 year in prison for threatening his wife's life! ಶಿವಮೊಗ್ಗ : ಪತ್ನಿಗೆ ಜೀವ ಬೆದರಿಕೆ ಹಾಕಿದ್ದ ಪತಿಗೆ 1 ವರ್ಷ ಜೈಲು ಶಿಕ್ಷೆ! Previous post shimoga | shikaripur | ಶಿಕಾರಿಪುರ : ಬೆನ್ನಿಗೆ ಚೂರಿ ಹಾಕಿದವನಿಗೆ ಜೈಲು ಶಿಕ್ಷೆ – ದಂಡ!
bhadravati | Sagara | route march of paramilitary force and police in different parts of bhadravati and sagara ಭದ್ರಾವತಿ - ಸಾಗರದ ವಿವಿಧೆಡೆ ಅರೆಸೇನಾ ಪಡೆ ಹಾಗೂ ಪೊಲೀಸರ ಪಥ ಸಂಚಲನ Next post bhadravati | sagara | ಭದ್ರಾವತಿ – ಸಾಗರದ ವಿವಿಧೆಡೆ ಅರೆಸೇನಾ ಪಡೆ ಹಾಗೂ ಪೊಲೀಸರ ಪಥ ಸಂಚಲನ