bhadravati minor girl missing case | The body of a young woman was found in Bhadra canal! ಭದ್ರಾವತಿ – ಯುವತಿ ನಾಪತ್ತೆ ಪ್ರಕರಣ : ಭದ್ರಾ ನಾಲೆಯಲ್ಲಿ ಪತ್ತೆಯಾದ ಯುವತಿಯ ಶವ!

bhadravati minor girl missing case | ಭದ್ರಾ ನಾಲೆಯಲ್ಲಿ ಪತ್ತೆಯಾದ ಯುವತಿಯ ಶವ!

ಭದ್ರಾವತಿ, ಸೆ. 22: ಇತ್ತೀಚೆಗೆ ನಾಪತ್ತೆಯಾಗಿದ್ದ ಭದ್ರಾವತಿಯ ಶಿವರಾಮನಗರದ (bhadravathi shiva ramanagara) ನಿವಾಸಿ ಅಪ್ರಾಪ್ತ ವಯಸ್ಸಿನ ಯುವತಿಯ ಶವ, ಬಿದರೆ ಸಮೀಪದ ಭದ್ರಾ ನಾಲೆ (bhadra canal) ಯಲ್ಲಿ ಸೆ. 21 ರಂದು ಪತ್ತೆಯಾಗಿದೆ.  

ಬೆಟ್ಟಸ್ವಾಮಿ ಎಂಬುವರ ಪುತ್ರಿ 17 ವರ್ಷದ ರಂಜಿತಾ (ranjitha) ಕಾಣೆಯಾಗಿದ್ದ ಯುವತಿ. ಸೆಪ್ಟೆಂಬರ್ 19 ರಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಫ್ಯಾಕ್ಟರಿ ಕೆಲಸಕ್ಕೆಂದು ರಂಜಿತಾ ತೆರಳಿದ್ದರು.

ಆದರೆ ಅವರು ಕೆಲಸಕ್ಕೆ ತೆರಳಿರಲಿಲ್ಲ. ಈ ನಡುವೆ ಲಕ್ಷ್ಮೀಪುರದ ರೈಲ್ವೆ ಬ್ರಿಡ್ಜ್ (railway bridge) ನ ಹಳಿ ಸಮೀಪ ರಂಜಿತಾರವರ ಚಪ್ಪಲಿ, ಬ್ಯಾಗ್, ಐಡಿ ಕಾರ್ಡ್ ಗಳು ಪತ್ತೆಯಾಗಿದ್ದವು. ಎಲ್ಲಿಯೂ ಅವರ ಸುಳಿವು ಲಭ್ಯವಾಗಿರಲಿಲ್ಲ.

ರೈಲ್ವೆ ಹಳಿಯ ಬಳಿ ಯುವತಿಯ ವಸ್ತುಗಳು ಸಿಕ್ಕ ಹಿನ್ನೆಲೆಯಲ್ಲಿ, ಈ ಕುರಿತಂತೆ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ (shimoga railway police station) ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.

ಯುವತಿಯ ಚಪ್ಪಲಿ, ಬ್ಯಾಗ್, ಐಡಿ ಕಾರ್ಡ್ ಪತ್ತೆಯಾದ ಸ್ಥಳದ ಬಳಿಯ ಭದ್ರಾ ನಾಲೆ (bhadra canal) ಯಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಸದರಿ ವಸ್ತುಗಳು ಸಿಕ್ಕ ಸ್ಥಳದಿಂದ ಸರಿಸುಮಾರು 15 ಕಿ.ಮೀ. ದೂರದ ಬಿದರೆ ಬಳಿಯ ನಾಲೆಯಲ್ಲಿ ಯುವತಿಯ ಶವ ಪತ್ತೆಯಾಗಿದೆ.

ರೈಲು ಡಿಕ್ಕಿ ಹೊಡೆದ ಪರಿಣಾಮ ಯುವತಿಯು ನಾಲೆ ನೀರಿಗೆ ಬಿದ್ದು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಶವದ ಮರಣೋತ್ತರ ಪರೀಕ್ಷೆ ವರದಿಯ ನಂತರ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.

chennai - shivamogga flight : schedule ticket price travel time? ಶಿವಮೊಗ್ಗ – ಚೆನ್ನೈ ನಡುವೆ ವಿಮಾನ ಸಂಚಾರ : ವೇಳಾಪಟ್ಟಿ ಟಿಕೆಟ್ ದರ ಪ್ರಯಾಣದ ಅವಧಿಯೆಷ್ಟು? Previous post shimoga airport | ಶಿವಮೊಗ್ಗ – ಚೆನ್ನೈ ನಡುವೆ ವಿಮಾನ ಸಂಚಾರ  : ವೇಳಾಪಟ್ಟಿ, ಟಿಕೆಟ್ ದರ, ಪ್ರಯಾಣದ ಅವಧಿಯೆಷ್ಟು?
shimoga | Shimoga: Eye check-up camp successfully held at Gadikoppa ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಯಶಸ್ವಿಯಾಗಿ ನಡೆದ ಕಣ್ಣಿನ ತಪಾಸಣೆ ಶಿಬಿರ Next post shimoga | ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಯಶಸ್ವಿಯಾಗಿ ನಡೆದ ಕಣ್ಣಿನ ತಪಾಸಣೆ ಶಿಬಿರ