bhadravati news | ಭದ್ರಾವತಿ ನಗರದಲ್ಲಿ ಯುವತಿಯ ನಿಗೂಢ ಕಣ್ಮರೆ!
ಶಿವಮೊಗ್ಗ (shivamogga), ಜನವರಿ 09: ಮನೆಯಿಂದ ಹೊರ ತೆರಳಿದ ಯುವತಿಯೋರ್ವಳು ಮನೆಗೆ ಹಿಂದಿರುಗದೆ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ.
ಈ ಕುರಿತಂತೆ ಜನವರಿ 9 ರಂದು ಹಳೇನಗರ ಪೊಲೀಸ್ ಠಾಣೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಮಾಸ್ ಪರ್ವೀನ್ ಎನ್ ಆರ್ (25) ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ. ಇವರು ಭದ್ರಾವತಿಯ ಸಿಗೇಬಾಗಿಯಲ್ಲಿರುವ ಬಿಎಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಜನವರಿ 06 ರಂದು ಸ್ನೇಹಿತೆಯನ್ನು ಭೇಟಿ ಮಾಡಿ ಬರುವುದಾಗಿ ಮನೆಯಿಂದ ಯುವತಿ ಹೊರ ಹೋಗಿದ್ದು, ನಂತರ ಮನೆಗೆ ಹಿಂದುರುಗದೆ ಕಣ್ಮರೆಯಾಗಿದ್ದಾರೆ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ.
ಚಹರೆ : ಕಾಣೆಯಾದ ಅಲ್ಮಾಸ್ ಪರ್ವೀನ್ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಉರ್ದು, ಹಿಂದಿ, ಕನ್ನಡ, ಇಂಗ್ಲೀಷ್ ಭಾಷೆ ಮಾತಾನಾಡುತ್ತಾರೆ.
ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟಾಪ್, ಪಿಂಕ್ ಬಣ್ಣದ ಲೆಗಿನ್ಸ್ ಪ್ಯಾಂಟು, ಬಿಳಿ ಗೆರೆಗಳಿರುವ ಕಪ್ಪು ಬಣ್ಣದ ಬುರ್ಖಾ, ಕಾಫಿ ಬಣ್ಣದ ವೇಲ್ ಧರಿಸಿರುತ್ತಾಳೆ. ಇವರ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಹಳೇನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shivamogga, Jan. 09: An incident has taken place in Bhadravati city where a young woman who left home and did not return home mysteriously disappeared. This was stated in a statement issued by Halenagar Police Station on January 9.
More Stories
bhadravati news | ಶಿವಮೊಗ್ಗದ ಐವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಭದ್ರಾವತಿ ಕೋರ್ಟ್ : ಕಾರಣವೇನು?
Bhadravati court sentences five people from Shivamogga to 10 years in rigorous imprisonment: What is the reason?
ಶಿವಮೊಗ್ಗದ ಐವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಭದ್ರಾವತಿ ಕೋರ್ಟ್ : ಕಾರಣವೇನು?
bhadravati news | ಭದ್ರಾವತಿಯಲ್ಲಿ ಅಸ್ಸಾಂ ರಾಜ್ಯದ ಮಹಿಳೆಯ ನಿಗೂಢ ಕಣ್ಮರೆ!
The mysterious disappearance of a woman from Bhadravati!
ಭದ್ರಾವತಿಯ ಆಲೆಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ನಿಗೂಢ ಕಣ್ಮರೆ!
bhadravati news | ಭದ್ರಾವತಿ : ವಿಕೋಪಕ್ಕೆ ತಿರುಗಿದ ಪ್ರೀತಿಯ ವಿವಾದ – ಇಬ್ಬರ ಕೊಲೆಯಲ್ಲಿ ಅಂತ್ಯ!
Bhadravati: A love dispute that turned into a disaster – ended in the murder of two people!
ಭದ್ರಾವತಿ : ವಿಕೋಪಕ್ಕೆ ತಿರುಗಿದ ಪ್ರೀತಿಯ ವಿವಾದ – ಇಬ್ಬರ ಕೊಲೆಯಲ್ಲಿ ಅಂತ್ಯ!
bhadravati news | ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!
Woman’s body found in Bhadra River in Bhadravati city!
ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!
bhadravati news | ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!
Caste abuse, assault case : Bhadravati man sentenced to 4 years rigorous imprisonment!
ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!
bhadravati | ಭದ್ರಾವತಿಯಲ್ಲಿ ‘ಚಡ್ಡಿ ಗ್ಯಾಂಗ್’ : ನಾಗರೀಕರ ಆತಂಕ!
‘Chaddi gang’ roaming in Bhadravati: Citizens worried!
ಭದ್ರಾವತಿಯಲ್ಲಿ ‘ಚಡ್ಡಿ ಗ್ಯಾಂಗ್’ ಓಡಾಟ : ನಾಗರೀಕರ ಆತಂಕ!
