chennai - shivamogga flight : schedule ticket price travel time? ಶಿವಮೊಗ್ಗ – ಚೆನ್ನೈ ನಡುವೆ ವಿಮಾನ ಸಂಚಾರ : ವೇಳಾಪಟ್ಟಿ ಟಿಕೆಟ್ ದರ ಪ್ರಯಾಣದ ಅವಧಿಯೆಷ್ಟು?

shimoga airport | ಶಿವಮೊಗ್ಗ – ಚೆನ್ನೈ ನಡುವೆ ವಿಮಾನ ಸಂಚಾರ  : ವೇಳಾಪಟ್ಟಿ, ಟಿಕೆಟ್ ದರ, ಪ್ರಯಾಣದ ಅವಧಿಯೆಷ್ಟು?

ಶಿವಮೊಗ್ಗ (shivamogga), ಸೆ. 21 : ಶಿವಮೊಗ್ಗ ನಗರದಿಂದ  ತಮಿಳುನಾಡು ರಾಜಧಾನಿ ಚೆನ್ನೈ (chennai – shivamogga flight) ಮಹಾನಗರಕ್ಕೆ ವಿಮಾನ ಸಂಚಾರ ಆರಂಭಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಸ್ಪೈಸ್ ಜೆಟ್ (spicejet) ವಿಮಾನಗಳು ಹಾರಾಟ ನಡೆಸಲಿವೆ. ಅಕ್ಟೋಬರ್ 10 ರಿಂದ ಎರಡೂ ನಗರಗಳ ನಡುವೆ ವಿಮಾನ ಸೇವೆ ಪ್ರಾರಂಭವಾಗಲಿದೆ,

ಈಗಾಗಲೇ ಸ್ಪೈಸ್ ಜೆಟ್ ಸಂಸ್ಥೆಯು ತನ್ನ ವೆಬ್ ಸೈಟ್ ನಲ್ಲಿ ವಿಮಾನ ಸಂಚಾರದ ವೇಳಾಪಟ್ಟಿ ಪ್ರಕಟಿಸಿ, ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ. ಸದರಿ ಸಂಸ್ಥೆಯು ಚೆನ್ನೈ (chennai) ಜೊತೆಗೆ, ಹೈದ್ರಾಬಾದ್ (hyderabad to shivamogga flight) ನಗರಕ್ಕೂ ಶಿವಮೊಗ್ಗದಿಂದ ವಿಮಾನ ಹಾರಾಟ ನಡೆಸಲಿದೆ.

ಈಗಾಗಲೇ ಶಿವಮೊಗ್ಗದಿಂದ ಬೆಂಗಳೂರು (shivamogga to bangalore flight), ಹೈದ್ರಾಬಾದ್, ತಿರುಪತಿ (shivamogga to tirupati flight), ಗೋವಾಕ್ಕೆ (shivamogga to goa flight) ವಿಮಾನಗಳು ಹಾರಾಟ ನಡೆಸುತ್ತಿವೆ. ಇಂಡಿಗೋ ಮತ್ತು ಸ್ಟಾರ್ ಏರ್ ಲೈನ್ಸ್ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಇದೀಗ ಸ್ಪೈಸ್ ಜೆಟ್ ವಿಮಾನಗಳ ಸಂಚಾರ ಕೂಡ ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಶಿವಮೊಗ್ಗ – ಚೆನ್ನೈ ವಿಮಾನದ ವೇಳಾಪಟ್ಟಿ – ಟಿಕೆಟ್ ದರದ ವಿವರ

ಸದ್ಯ ಲಭ್ಯವಾಗಿರುವ ಮಾಹಿತಿ ಅನುಸಾರ, ಚೆನ್ನೈನಿಂದ ಬೆಳಿಗ್ಗೆ 10. 40 ಕ್ಕೆ ಹೊರಡಲಿರುವ ವಿಮಾನವು ಮಧ್ಯಾಹ್ನ 12. 10 ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಅದೇ ರೀತಿಯಲ್ಲಿ ಶಿವಮೊಗ್ಗದಿಂದ 4. 25 ಕ್ಕೆ ಹೊರಟು ಸಂಜೆ 5. 55 ಕ್ಕೆ ಚೆನ್ನೈ ತಲುಪಲಿದೆ.

ಅಕ್ಟೋಬರ್ 10 ರಂದು ಶಿವಮೊಗ್ಗದಿಂದ ಚೆನ್ನೈಗೆ ಪ್ರಯಾಣಿಸಲಿರುವ  ವಿಮಾನದ ಟಿಕೆಟ್ ದರ ವಿವರ ಹೀಗಿದೆ : ಸ್ಪೈಸ್ ಸೇವರ್ ಟಿಕೆಟ್ ದರ 4123 ರೂ., ಸ್ಪೈಸ್ ಫ್ಲೆಕ್ಸ್ ನ ಟಿಕೆಟ್ ದರ 4763 ರೂ,, ಸ್ಪೈಸ್ ಮ್ಯಾಕ್ಸ್ ಟಿಕೆಟ್ ದರ 5867 ರೂ. ಇದೆ.

ಶಿವಮೊಗ್ಗ – ಚೆನ್ನೈ ನಡುವಿನ ಪ್ರಯಾಣದ ಅವಧಿಯು ಸರಾಸರಿ 1 ಗಂಟೆ 30 ನಿಮಿಷ ಆಗಿರಲಿದೆ ಎಂದು ಸ್ಪೈಸ್ ಜೆಟ್ ಸಂಸ್ಥೆ ತನ್ನ ವೆಬ್’ಸೈಟ್ ನಲ್ಲಿ ಹೇಳಿದೆ.

Shimoga: Road widening work - electricity supply cut off in various places on January 4! shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ - ಜ. 4 ರಂದು ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ! Previous post shimoga power cut news | ಶಿವಮೊಗ್ಗ : ಸೆ. 24 ರಂದು ಹೊಳಲೂರು, ಅಬ್ಬಲಗೆರೆ ಮೊದಲಾದೆಡೆ ವಿದ್ಯುತ್ ಕಡಿತ!
bhadravati minor girl missing case | The body of a young woman was found in Bhadra canal! ಭದ್ರಾವತಿ – ಯುವತಿ ನಾಪತ್ತೆ ಪ್ರಕರಣ : ಭದ್ರಾ ನಾಲೆಯಲ್ಲಿ ಪತ್ತೆಯಾದ ಯುವತಿಯ ಶವ! Next post bhadravati minor girl missing case | ಭದ್ರಾ ನಾಲೆಯಲ್ಲಿ ಪತ್ತೆಯಾದ ಯುವತಿಯ ಶವ!