bhadravati news | ಭದ್ರಾವತಿ : ವೃದ್ದ ದಂಪತಿ ಸಾವಿನ ಸುತ್ತ ಅನುಮಾನದ ಹುತ್ತ! | ಚಿನ್ನಾಭರಣ ಕಳ್ಳತನ – ನಿಗೂಢವಾದ ಪ್ರಕರಣ!!

Bhadravati Elderly Couple Murder Case: Ayurvedic Doctor Arrested! ಭದ್ರಾವತಿ ವೃದ್ದ ದಂಪತಿ ಕೊಲೆ ಪ್ರಕರಣ : ಆಯುರ್ವೇದಿಕ್ ವೈದ್ಯನ ಬಂಧನ!

ಭದ್ರಾವತಿ (bhadravathi), ಜನವರಿ 20: ವೃದ್ದ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಭದ್ರಾವತಿ ನಗರದ ಭೂತನಗುಡಿ ಬಡಾವಣೆಯಲ್ಲಿ ನಡೆದಿದೆ.

ಚಂದ್ರಪ್ಪ (80) ಹಾಗೂ ಅವರ ಪತ್ನಿ ಜಯಮ್ಮ (70) ಅನುಮಾನಾಸ್ಪದವಾಗಿ ಮೃತಪಟ್ಟ ವೃದ್ದ ದಂಪತಿ ಎಂದು ಗುರುತಿಸಲಾಗಿದೆ.

ಚಂದ್ರಪ್ಪ ಅವರು ಮನೆಯ ಬೆಡ್ ರೂಂ ಮಂಚದ ಮೇಲೆ ಹಾಗೂ ಜಯಮ್ಮರವರು ಹಾಲ್ ನ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ.

ದಂಪತಿಗೆ ಮೂವರು ಪುತ್ರರಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಭೂತನಗುಡಿ ಮನೆಯಲ್ಲಿ ದಂಪತಿ ನೆಲೆಸಿದ್ದಾರೆ. ಜನವರಿ 20 ರಂದು ಬೆಳಿಗ್ಗೆ ಎಂದಿನಂತೆ ಪುತ್ರರು ಅವರ ಮೊಬೈಲ್ ಫೋನ್ ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಿಲ್ಲ. ಮಧ್ಯಾಹ್ನ ಸ್ಥಳೀಯರು ಮನೆಗೆ ತೆರಳಿದಾಗ ದಂಪತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ದಂಪತಿ ಮೈಮೇಲಿದ್ದ ಹಾಗೂ ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳುವಾಗಿದೆ. ಈ ಕಾರಣದಿಂದ ದಂಪತಿ ಸಾವಿನ ಸುತ್ತ ನಿಗೂಢತೆ ಆವರಿಸಿದೆ. ಸಾಕಷ್ಟು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.

ಮರಣೋತ್ತರ ಪರೀಕ್ಷೆಗಾಗಿ, ಶವಗಳನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸರ ತನಿಖೆಯ ನಂತರವಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.

Bhadravati: Mystery Surrounds Elderly Couple’s Death – Jewellery Theft Adds to Suspicion

Bhadravati, January 20: An incident involving the suspicious death of an elderly couple has taken place in the Bhuthanagudi locality of Bhadravati city. The deceased have been identified as Chandrappa (80) and his wife Jayamma (70). Chandrappa was found dead on the bed in the bedroom, while Jayamma was discovered lifeless on the cot in the hall. The couple had three sons, all living separately, while the elderly couple resided in their Bhuthanagudi home. On the morning of January 20, as usual, the sons tried calling their parents on the mobile phone, but the calls went unanswered. By afternoon, when local residents visited the house, the couple was found dead. Gold ornaments worth several lakhs of rupees, which were on the couple and in the house, were missing. This has deepened the mystery surrounding their deaths and raised serious suspicions. The bodies have been sent to the government McGann Hospital in Shivamogga for post-mortem examination. A case of suspicious death has been registered at the Hale Nagar Police Station. Further details are expected only after the autopsy and police investigation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →