shimoga | ಶಿವಮೊಗ್ಗ : ಖಾಸಗಿ ಸಿಟಿ ಬಸ್ ಪಲ್ಟಿ – ಪ್ರಯಾಣಿಕರಿಗೆ ಗಾಯ!

Shimoga: Private city bus overturned – passenger injured! ಶಿವಮೊಗ್ಗ : ಖಾಸಗಿ ಸಿಟಿ ಬಸ್ ಪಲ್ಟಿ – ಪ್ರಯಾಣಿಕರಿಗೆ

ಶಿವಮೊಗ್ಗ (shivamogga), ಅ. 16: ಶಿವಮೊಗ್ಗ ನಗರದ ಬೊಮ್ಮನಕಟ್ಟೆ ರೈಲ್ವೆ ಗೇಟ್ ಸಮೀಪದ ನಾಗೇಂದ್ರ ಕಾಲೋನಿ ಬಳಿ, ಖಾಸಗಿ ಸಿಟಿ ಬಸ್ ವೊಂದು ಪಲ್ಟಿಯಾಗಿ ಬಿದ್ದ ಘಟನೆ ಅ. 16 ರಂದು ಬೆಳಿಗ್ಗೆ ನಡೆದಿದೆ.

ವೀರಭದ್ರೇಶ್ವರ ಬಸ್ ಪಲ್ಟಿಯಾಗಿ ಬಿದ್ದ ಸಿಟಿ ಬಸ್ ಆಗಿದೆ. ಘಟನೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಸುಮಾರು 6 ಪ್ರಯಾಣಿಕರಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಬೊಮ್ಮನಕಟ್ಟೆಯಿಂದ ವಿನೋಬನಗರ ಪೊಲೀಸ್ ಚೌಕಿ ಕಡೆ ಆಗಮಿಸುವ ವೇಳೆ, ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಗುಂಡಿಗೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆಯ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.

A private city bus overturned near Nagendra Colony near Bommanakatte railway gate in Shimoga city. It happened on the morning of the october16th.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →