shimoga | Shimoga: On 23rd of by-elections will be held holiday announcement for schools! ಶಿವಮೊಗ್ಗ : ನ. 23 ರಂದು ಉಪ ಚುನಾವಣೆ ನಡೆಯಲಿರುವ ಶಾಲೆಗಳಿಗೆ ರಜೆ ಘೋಷಣೆ

shimoga | ಶಿವಮೊಗ್ಗ : ನ. 23 ರಂದು ಉಪ ಚುನಾವಣೆ ನಡೆಯಲಿರುವ ಶಾಲೆಗಳಿಗೆ ರಜೆ ಘೋಷಣೆ!

ಶಿವಮೊಗ್ಗ (shivamogga), ನ. 20: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ, ನವೆಂಬರ್ 23 ರಂದು ಉಪ ಚುನಾವಣೆ ನಿಗದಿಯಾಗಿದೆ.

ಚುನಾವಣಾ ಕ್ಷೇತ್ರಗಳಲ್ಲಿನ ಮತದಾನ ಕೇಂದ್ರಗಳು ಬಹುತೇಕ ಶಾಲೆಗಳಾಗಿವೆ. ಮತದಾನದ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸುವುದರಿಂದ, ಜನದಟ್ಟಣೆಯಾಗಿ ಮತದಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮತದಾನ ಕೇಂದ್ರವಿರುವ ಶಾಲೆಗಳಿಗೆ ನ. 23 ರ ಶನಿವಾರದಂದು ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಶಿವಮೊಗ್ಗ ತಾಲೂಕಿನ ದೇವಕಾತಿಕೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆ ಮತ್ತು ಹೊಳಲೂರು ಅಂಗನವಾಡಿ ಕೇಂದ್ರ ಜನತಾ ಕಾಲೋನಿ, ಭದ್ರಾವತಿ ತಾಲೂಕಿನ ಬಾರಂದೂರು ಸ. ಹಿ.ಪ್ರಾ. ಶಾಲೆ (ಉತ್ತರಭಾಗ), ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿ ಸ.ಹಿ.ಪ್ರಾ. ಶಾಲೆ.

ಶಿಕಾರಿಪುರ ತಾಲೂಕಿನ ತರಲಘಟ್ಟ ಸ.ಹಿ.ಪ್ರಾ. ಶಾಲೆ, ಶಿಕಾರಿಪುರದ ಸರ್ಕಾರಿ ಉರ್ದು ಹಿ.ಪ್ರಾ. ಶಾಲೆ ಖಾಜಿ ಮೊಹಲ್ಲ ಹಾಗೂ ಶಿರಾಳಕೊಪ್ಪದ ಸ.ಉರ್ದು ಹಿ.ಪ್ರಾ.ಶಾಲೆ ಆಜಾದ್ ವೃತ್ತ, ಸಾಗರ ತಾಲೂಕಿನ ಕುದರೂರು ಸ.ಹಿ.ಪ್ರಾ. ಶಾಲೆ ಕೊ.ಸಂ.1 ರ ಶಾಲೆಗಳಲ್ಲಿ ನ.23 ರಂದು ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದ್ದಾರೆ.

Naxal leader Vikrangowda killed in encounter: What did the CM say? ನಕ್ಸಲ್ ನಾಯಕ ವಿಕ್ರಂಗೌಡ ಎನ್ ಕೌಂಟರ್’ಗೆ ಬಲಿ : ಸಿಎಂ ಹೇಳಿದ್ದೇನು? Previous post naxal encounter | ನಕ್ಸಲ್ ನಾಯಕ ವಿಕ್ರಂಗೌಡ ಎನ್ ಕೌಂಟರ್’ಗೆ ಬಲಿ : ಸಿಎಂ ಹೇಳಿದ್ದೇನು?
Shimoga: Road widening work - electricity supply cut off in various places on January 4! shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ - ಜ. 4 ರಂದು ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ! Next post shimoga power cut news | ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 22 ರಂದು ವಿದ್ಯುತ್ ವ್ಯತ್ಯಯ!