ದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಅಡೆತಡೆ – ಬೆಂಗಳೂರಿನಲ್ಲಿ ಅಮುಲ್ ವಿರುದ್ಧ ಪ್ರತಿಭಟನೆ!
ಬೆಂಗಳೂರು (bengaluru), ಡಿ. 5: ಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳನ್ನು ದೆಹಲಿಯಲ್ಲಿ ಮಾರಾಟ ಮಾಡಲು ಅಡೆತಡೆ ಸೃಷ್ಟಿಸುತ್ತಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ, ಇಂದು ಕನ್ನಡಪರ ಸಂಘಟನೆಗಳು ಹಾಗೂ ರೈತ ಪ್ರತಿನಿಧಿಗಳು ಕೋರಮಂಗಲದಲ್ಲಿರುವ ಅಮುಲ್ ಕಚೇರಿಗೆ ತೆರಳಿ ಪ್ರತಿಭಟಿಸಿದರು.
ಕನ್ನಡ ಚಳವಳಿಯ ಹಿರಿಯ ಮುಖಂಡರಾದ ಶೆ ಬೊ ರಾಧಾಕೃಷ್ಣ, ನಾವೇ ಕರ್ನಾಟಕ ಸಂಘಟನೆಯ ಮುಖಂಡ ಪಾರ್ವತೀಶ ಬಿಳಿದಾಳೆ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ನಂದಿನಿ ಉತ್ಪನ್ನಗಳಿಗೆ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಾಗಲಿ ಅಥವಾ ಉತ್ತರ ಭಾರತದ ಯಾವುದೇ ರಾಜ್ಯಗಳಲ್ಲಾಗಲಿ ವ್ಯಾಪಾರ ವಹಿವಾಟು ನಡೆಸಲು ಅಡೆತಡೆ ಉಂಟು ಮಾಡಿದಲ್ಲಿ ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿ ಪ್ರಚಾರಾಂದೋಲನವನ್ನು ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಪರ ಸಂಘಟನೆಗಳ ನೀಡಿದ ಆಗ್ರಹ ಪತ್ರವನ್ನು ಸ್ವೀಕರಿಸಿದ ಅಮುಲ್ ಕಂಪನಿಯ ಬೆಂಗಳೂರು ಮಾರುಕಟ್ಟೆ ವಿಭಾಗ ಮುಖ್ಯಸ್ಥರಾದ ನಾಗೇಶ್ ರವರು, ಈ ವಿಚಾರದ ಕುರಿತಂತೆ ಗುಜರಾತ್ ನ ಕೇಂದ್ರ ಕಚೇರಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
In the wake of the news that Karnataka’s Nandini is creating a barrier to sell milk products in Delhi, pro-Kannada organizations and farmers’ representatives today protested at the Amul office in Koramangala. The protest was led by She Bo Radhakrishna, a senior leader of the Kannada movement, and Parvatish Bilidale, leader of Nawe Karnataka organization.
