Shimoga: Road widening work - electricity supply cut off in various places on January 4! shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ - ಜ. 4 ರಂದು ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ!

ಶಿವಮೊಗ್ಗ ನಗರ ಹಾಗೂ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ : ಯಾವಾಗ? ಎಲ್ಲೆಲ್ಲಿ?

ಶಿವಮೊಗ್ಗ (shivamogga), ಡಿ. 13 : ಶಿವಮೊಗ್ಗ ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಡಿಸೆಂಬರ್ 16 ರಂದು ಬೆಳಿಗ್ಗೆ 9. 30 ರಿಂದ ಸಂಜೆ 6 ಗಂಟೆವರೆಗೆ, ಶಿವಮೊಗ್ಗ ನಗರದ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.

ವಿವರ : ಪಿಯರ್‌ಲೈಟ್, ಶಂಕರ್ ಕಣ್ಣಿನ ಆಸ್ಪತ್ರೆ, ಗಾಜನೂರು ರೂರಲ್, ಕಲ್ಲೂರು ಮಂಡ್ಲಿ, ಊರುಕಡೂರು, ರಾಮಿನಕೊಪ್ಪ, ಗೋಪಿಶೆಟ್ಟಿಕೊಪ್ಪ, ಇಲಿಯಾಸನಗರ, ಕೆ.ಹೆಚ್.ಬಿ.ಕಾಲೋನಿ, ಸಿದ್ದೇಶ್ವರ ಸರ್ಕಲ್ 100 ಅಡಿರಸ್ತೆ, ಮಂಡ್ಲಿ,

ಎನ್.ಟಿ.ರಸ್ತೆ, ಮಾರ್ನಾಮಿಬೈಲು, ಬಿ.ಹೆಚ್.ರಸ್ತೆ, ಹಳೆಮಂಡ್ಲಿ, ಹರಕೆರೆ, ವಾದಿಹುದ, ಸೂಳೆಬೈಲು ಸುತ್ತಮುತ್ತ, ಕಲ್ಲೂರ ಮಂಡ್ಲಿ ಕೈಗಾರಿಕಾ ಪ್ರದೇಶ, ಕೃಷ್ಣರಾಜ ನೀರು ಶುದ್ಧೀಕರಣ ಘಟಕ, ಕುರುಬರಪಾಳ್ಯ, ಸವಾಯಿಪಾಳ್ಯ, ಮುರಾದ್‌ನಗರ,

ಓ.ಟಿ.ರಸ್ತೆ, ಬಿ.ಬಿ.ರಸ್ತೆ, ಕುಂಬಾರಕೇರಿ, ವಂದನ ಟಾಕೀಸ್ ಸುತ್ತಮುತ್ತ, ಆರ್.ಎಂ.ಎಲ್.ನಗರ 1 ಮತ್ತು 2ನೇ ಹಂತ, ಎಲ್.ಎಲ್.ಆರ್.ರಸ್ತೆ, ಜೆಸಿನಗರ, ಎಲ್.ಎಲ್.ಬಿ.ರಸ್ತೆ, ದುರ್ಗಿಗುಡಿ, ನೆಹರು ರಸ್ತೆ ಎಡಭಾಗ, ಗಾರ್ಡನ್ ಏರಿಯಾ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ,

ಆನಂದ್‌ರಾವ್ ಬಡಾವಣೆ, ಮಂಜುನಾಥ ಬಡಾವಣೆ, ಟಿಪ್ಪುನಗರ, ಮಿಳಘಟ್ಟ, ಅಣ್ಣಾನಗರ, ತಿಮ್ಮಪ್ಪನಕೊಪ್ಪಲು, ಕೆ.ಆರ್.ಪುರಂ, ಸಿದ್ದಯ್ಯರಸ್ತೆ, ಗಾಂಧಿಬಜಾರ್, ಕುಂಬಾರಗುಂಡಿ, ಉಪ್ಪಾರಕೇರಿ, ಓ.ಟಿ.ರಸ್ತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ  ತಿಳಿಸಿದೆ.

ಡಿ.14 ರಂದು ಸಂತೆಕಡೂರು ಸುತ್ತಮುತ್ತ ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಡಿ. 13: ಶಿವಮೊಗ್ಗ ತಾಲ್ಲೂಕು, ಸಂತೇಕಡೂರು ಗ್ರಾಮದಲ್ಲಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸುವ ಮತ್ತು ವಾಹಕ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಎಫ್-1 ಉಂಬ್ಳೇಬೈಲು, ಎಫ್-2 ಲಕ್ಕಿನಕೊಪ್ಪ, ಎಫ್-3 ಮತ್ತೂರು ಕುಡಿಯುವ ನೀರು, ಎಫ್-4 ಸಂತೇಕಡೂರು ಎಫ್-8 ಗಣಿದಾಳು ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಡಿ.14 ರಂದು ಬೆಳಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಸಂತೇಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಡಿ. 14 ರಂದು ಹೊಳಲೂರು ಸುತ್ತಮುತ್ತ ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಡಿ. 13: ಹೊಳಲೂರು 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಮಾರ್ಗಗಳಲ್ಲಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ  ಡಿ.14 ಮತ್ತು 15 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹೊಳಲೂರು, ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು ಮತ್ತು ಬಿ.ಕೆ.ತಾವರೆ ಗ್ರಾಮಗಳ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಡಿ.16 ರಂದು ಹೊಸಳ್ಳಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಡಿ. 13: ಶಿವಮೊಗ್ಗ ಎಂ.ಆರ್.ಎಸ್.220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 110/11ಕೆವಿ ಎಸ್.ಎಎಸ್-1 ಮಾರ್ಗಗಳಲ್ಲಿ ತ್ರೈಮಾಸಿಕ  ನಿರ್ವಹಣೆ ಕಾಮಗಾರಿ ಇರುವುದರಿಂದ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಆಗಸವಳ್ಳಿ, ಹೊಸೂರು, ಮತ್ತೂರು,ಲಕ್ಷ್ಮೀಪುರ, ಹೋನ್ನಾಪುರ, ಈಚಲವಾಡಿ, ಹಾಯ್‌ಹೊಳೆ, ಪುರದಾಳು, ಬೆಳ್ಳೂರು, ಬಸವಾಪುರ, ಭಾರತಿನಗರ, ಅನುಪಿನಕಟ್ಟೆ, ಗೋವಿಂದಾಪುರ, ಹನುಮಂತಾಪುರ, ಗಾಂಧಿನಗರ, ಖಾನೆಹಳ್ಳ, ಭೋವಿಕಾಲೋನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿ.16 ರಂದು ಬೆಳಗ್ಗೆ 9:30 ರಿಂದ ಮಾಧ್ಯಾಹ್ನ 3.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Power outage in different parts of Shimoga city and taluk : When? Where? #poweroutage, #powercut, #power, #mescom,

shimoga | ಶಿವಮೊಗ್ಗ : ಬಾಕಿ ಪಾವತಿಗೆ ಡೆಡ್‌ಲೈನ್ – ಇಲ್ಲದಿದ್ದರೆ ನೀರು ಪೂರೈಕೆ ಸ್ಥಗಿತ! shimoga | Shivamogga: Deadline for payment of dues – otherwise water supply will be cut off! Previous post ಶಿವಮೊಗ್ಗ ನಾಗರೀಕರ ಗಮನಕ್ಕೆ… ಎರಡು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ – ಯಾವಾಗ? ಕಾರಣವೇನು?
Citizens of Shimoga beware : Increased turbidity in Tunga river water - advice to boil and drink selected water! ಶಿವಮೊಗ್ಗ ನಾಗರಿಕರೇ ಎಚ್ಚರ : ತುಂಗಾ ನದಿ ನೀರಿನಲ್ಲಿ ಹೆಚ್ಚಿದ ಟರ್ಬಿಡಿಟಿ ಪ್ರಮಾಣ - ಕುದಿಸಿ ಆರಿಸಿದ ನೀರು ಕುಡಿಯಲು ಸಲಹೆ! Next post ಶಿವಮೊಗ್ಗದ ಗಾಜನೂರು ಸಮೀಪ ಹೊಸದಾಗಿ ನೀರು ಶುದ್ಧೀಕರಣ ಘಟಕ ಸ್ಥಾಪನೆ : ಸಚಿವರು ಹೇಳಿದ್ದೇನು?