ಶಿವಮೊಗ್ಗ (shivamogga), ಡಿ. 12: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ, ಎರಡು ದಿನಗಳ ಕಾಲ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.
ಈ ಕುರಿತಂತೆ ಡಿ. 12 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಡಿ. 16 ಮತ್ತು ಡಿ. 17 ರಂದು ಕೃಷ್ಣರಾಜೇಂದ್ರ ಜಲ ಶುದ್ಧಿಕರಣ ಘಟಕಕ್ಕೆ ವಿದ್ಯುತ್ ಪೂರೈಕೆ ನಿಲುಗಡೆ ಮಾಡಲಾಗುತ್ತಿದೆ.
ವಿದ್ಯುತ್ ವ್ಯತ್ಯಯದ ಕಾರಣದಿಂದ, ಸದರಿ ಎರಡು ದಿನಗಳಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮಂಡಳಿ ತಿಳಿಸಿದೆ.
ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Karnataka City Water Supply and Sewerage Board said that there will be a disruption in drinking water supply for two days in Shimoga city limits. A press release was issued on December 12 in this regard. On December 16 and 17, power supply to Krishnarajendra Water Purification Plant is being shut down.
The Board said that due to the power failure, there will be a disruption in the daily drinking water supply of Shimoga city on these two days.

