
shimoga | ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆ : ನಿವಾಸಿಗಳಿಂದ ಪ್ರತಿಭಟನೆ!
ಶಿವಮೊಗ್ಗ (shivamogga), ಡಿ. 16: ರಾಗಿಗುಡ್ಡ (ಶಾಂತಿನಗರ) ಬಡಾವಣೆಗೆ ಕಲುಷಿತ ಹಾಗೂ ದುರ್ವಾಸನೆಯುಕ್ತ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ಆರೋಪಿಸಿ, ಶಿವಮೊಗ್ಗದ ಶಾಂತಿನಗರ ನಾಗರೀಕ ಹಕ್ಕು ವೇದಿಕೆಯು ಡಿ. 16 ರಂದು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ರಾಗಿಗುಡ್ಡ ಬಡಾವಣೆಗೆ 5 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನಡುವೆ ಕಳೆದ ಕೆಲ ದಿನಗಳಿಂದ ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಬಡಾವಣೆಯ ಕೆಲವೆಡೆ ಯುಜಿಡಿ ಸಂಪರ್ಕ ದುರಸ್ತಿಯಾಗಿದೆ. ಯುಜಿಡಿ ಕೊಳಚೆ ನೀರು, ಕುಡಿಯುವ ನೀರಿನ ಪೈಪ್ ಗೆ ಮಿಶ್ರಣಗೊಳ್ಳುತ್ತಿದೆ.
ಇದರಿಂದ ಕಲುಷಿತಗೊಂಡ ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಅವ್ಯವಸ್ಥೆ ಸರಿಪಡಿಸಲು ಇಲ್ಲಿಯವರೆಗೂ ಸಂಬಂಧಿಸಿದವರು ಕ್ರಮಕೈಗೊಂಡಿಲ್ಲ. ಇದರಿಂದ ನಾಗರೀಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ತಕ್ಷಣವೇ ಬಡಾವಣೆಯ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಆಡಳಿತ ಕ್ರಮಕೈಗೊಳ್ಳಬೇಕು. ಒಡೆದು ಹೋಗಿರುವ ಯುಜಿಡಿ ಹಾಗೂ ಕುಡಿಯುವ ನೀರಿನ ಪೈಪ್ ಗಳನ್ನು ತತ್’ಕ್ಷಣವೇ ದುರಸ್ತಿಗೊಳಿಸಬೇಕು. ಹೊಸ ಪೈಪ್ ಗಳ ಅಳವಡಿಕೆ ಮಾಡಬೇಕು. ಚರಂಡಿಗಳ ಸ್ವಚ್ಛಗೊಳಿಸಬೇಕು. ನಾಗರೀಕರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷರಾದ ಸಯ್ಯದ್ ಮುಜೀಬುಲ್ಲಾ, ಉಪಾಧ್ಯಕ್ಷರಾದ ರಾಮು, ಕಾರ್ಯದರ್ಶಿ ಸೈಮನ್ ರಾಜ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Alleging that the Ragigudda (Shantinagar) extension is being supplied with polluted and foul-smelling drinking water, the Shantinagar Civil Rights Forum of Shimoga staged a protest in front of the Municipal Corporation office on December 16.