
shimoga | ಶಿವಮೊಗ್ಗ : ಆಟೋ ಕಳವು ಮಾಡಿದ ಪ್ರಯಾಣಿಕ – ಬೆಸ್ತುಬಿದ್ದ ಚಾಲಕ!
ಶಿವಮೊಗ್ಗ (shivamogga), ಡಿ. 27: ಪ್ರಯಾಣಿಕ ಸೋಗಿನಲ್ಲಿ ಆಟೋದಲ್ಲಿ ಪ್ರಯಾಣಿಸಿದ ಅಪರಿಚಿತನೋರ್ವ, ಚಾಲಕನ ಗಮನ ಬೇರೆಡೆ ಸೆಳೆದು ಆಟೋವನ್ನೇ ಚಲಾಯಿಸಿಕೊಂಡು ಪರಾರಿಯಾದ ಕುತೂಹಲಕಾರಿ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಹೊರವಲಯ ಹೊಸಹಳ್ಳಿ ನಿವಾಸಿ, ಆಟೋ ಚಾಲಕ ಅಬ್ದುಲ್ ಬಶೀರ್ (65) ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ಕಳುವಾದ ಆಟೋದ ಮೌಲ್ಯ 2.50 ಲಕ್ಷ ರೂ. ಮೌಲ್ಯದ್ದಾಗಿದೆ. ಈ ಸಂಬಂಧ ಅಪರಿಚಿತ ವಂಚಕನ ವಿರುದ್ದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ಹಿನ್ನೆಲೆ : ಡಿಸೆಂಬರ್ 24 ರ ಮಧ್ಯಾಹ್ನದ ವೇಳೆ ಚಾಲಕ ಅಬ್ದುಲ್ ಬಶೀರ್ ಅವರು ಎಂದಿನಂತೆ ಬಾಡಿಗೆ ಮಾಡುತ್ತಿದ್ದರು. ಈ ವೇಳೆ ಪ್ರಯಾಣಿಕನ ಸೋಗಿಸನಲ್ಲಿ ಆಗಮಿಸಿದ ಅಪರಿಚಿತನೋರ್ವ, ಗೋಪಾಳದ ಹಣ್ಣಿನ ಅಂಗಡಿಗೆ ಬಿಡುವಂತೆ ಹೇಳಿದ್ದಾನೆ.
ಅವರು ತಮ್ಮ ಆಟೋದಲ್ಲಿ ಅಪರಿಚಿತನನ್ನು ಕುಳ್ಳರಿಸಿಕೊಂಡು, ಗೋಪಾಳಕ್ಕೆ ಆಗಮಿಸಿದ್ದಾರೆ. ಹಣ್ಣಿನ ಅಂಗಡಿಯ ಬಳಿ ಅಪರಿಚಿತನು ಹಣ್ಣು ಖರೀದಿಸುವ ನಾಟಕ ಮಾಡಿದ್ದಾನೆ. ಚಾಲಕನನ್ನೇ ಕೆಳಗಿಳಿಸಿ ಹಣ್ಣು ಖರೀದಿಸುವಂತೆ ಹೇಳಿದ್ದಾನೆ.
ಚಾಲಕನು ಆಟೋದಲ್ಲಿಯೇ ಕೀ ಬಿಟ್ಟು, ಅಂಗಡಿಯಲ್ಲಿ ಹಣ್ಣು ಖರೀದಿಗೆ ಹೋಗಿದ್ದಾರೆ. ಈ ವೇಳೆ ಅಪರಿಚಿತನು ಏಕಾಏಕಿ ಆಟೋ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ತಕ್ಷಣವೇ ಆಟೋ ಚಾಲಕನು ಪೊಲೀಸರ ಗಮನಕ್ಕೆ ವಿಷಯ ತಂದಿದ್ದಾರೆ.
ಬಂಧನ? : ತುಂಗಾನಗರ ಠಾಣೆ ಪೊಲೀಸ್ ತಂಡವು, ಆಟೋ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
Shimoga, D. 27: An interesting incident took place in Shimoga city where a stranger who was traveling in an auto in the guise of a passenger, diverted the attention of the driver and fled by driving the auto.
Auto driver Abdul Basheer (65), a resident of Hosahalli on the outskirts of Shimoga city, is the person who was cheated. The value of the stolen auto is Rs 2.50 lakh is worth. A complaint has been registered in Tunganagar police station against an unknown fraudster in this regard.