A terrible accident between a car and a bus near Sagar Anandpur: two people from Doddaballapur died on the spot! ಸಾಗರ ಆನಂದಪುರ ಬಳಿ ಕಾರು - ಬಸ್ಸಿನ ನಡುವೆ ಭೀಕರ ಅಪಘಾತ : ದೊಡ್ಡಬಳ್ಳಾಪುರದ ಇಬ್ಬರು ಸ್ಥಳದಲ್ಲೇ ಸಾವು!

ಸಾಗರದ ಆನಂದಪುರ ಬಳಿ ಕಾರು – ಬಸ್ ನಡುವೆ ಭೀಕರ ಅಪಘಾತ : ದೊಡ್ಡಬಳ್ಳಾಪುರದ ಇಬ್ಬರು ಯುವಕರು ಸ್ಥಳದಲ್ಲೇ ಸಾವು!

ಸಾಗರ (sagara), ಡಿ. 29: ತಾಲೂಕಿನ ಆನಂದಪುರ ಮುರುಘಾಮಠದ ಸಮೀಪ ಕಾರು ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ನಡೆದಿದೆ.

ದೊಡ್ಡಬಳ್ಳಾಪುರ ಮೂಲದ ಶರಣ್ (23) ಹಾಗೂ ಅಕ್ಷಯ್ (24) ಮೃತಪಟ್ಟವರೆಂದು ಗುರುತಿಸಲಾಗಿದೆ. ದುರಸ್ತಿಗೀಡಾಗಿದ್ದ ವಾಹನ ತರಲು, ಸ್ನೇಹಿತರೋರ್ವರಿಗೆ ಸೇರಿದ ಎರ್ಟಿಗಾ ಕಾರಿನಲ್ಲಿ ದೊಡ್ಡಬಳ್ಳಾಪುರದಿಂದ ಹೊನ್ನಾವರಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಗೆ ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎರಡು ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದೆ.

ಅಪಘಾತದಲ್ಲಿ ಬಸ್ ಚಾಲಕನಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣವೇನು ಎಂಬುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್, ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್, ಇನ್ಸ್’ಪೆಕ್ಟರ್ ಸಂತೋಷ್ ಶೆಟ್ಟಿ, ಸಬ್ ಇನ್ಸ್’ಪೆಕ್ಟರ್ ಯುವರಾಜ್ ಮತ್ತವರ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

A head-on collision between a car and a private bus took place near Anandpur Murugamath in the sagar taluk, and two youths in the car died on the spot in the early morning of Sunday, December 29.

Sharan (23) and Akshay (24) natives of Doddaballapur have been identified as deceased. It is learned that he was traveling from Doddaballapur to Honnavar in an Ertiga belonging to a friend to fetch the repaired vehicle.

SP GK Mithun Kumar, Sagar DySP Gopalakrishna T Naik, Inspector Santosh Shetty, Sub Inspector Yuvaraj and others have visited the incident site and conducted an inspection.

House burglary in Shikaripura – Soraba: Thieves carrying coins worth lakhs of rupees! ಶಿಕಾರಿಪುರ – ಸೊರಬದಲ್ಲಿ ಮನೆಗಳ್ಳತನ : ಲಕ್ಷಾಂತರ ರೂಪಾಯಿ ಮೌಲ್ಯದ ನಗನಾಣ್ಯ ಹೊತ್ತೊಯ್ದ ಕಳ್ಳರು! Previous post ಶಿಕಾರಿಪುರ – ಸೊರಬದಲ್ಲಿ ಮನೆಗಳ್ಳತನ : ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಹೊತ್ತೊಯ್ದ ಕಳ್ಳರು!
bhadravati | Bhadravati : Bulldozer on defective helmet silencer LED lights! bhadravati | ಭದ್ರಾವತಿ : ದೋಷಪೂರಿತ ಹೆಲ್ಮೆಟ್, ಸೈಲೆನ್ಸರ್, ಎಲ್ಇಡಿ ಲೈಟ್ ಗಳ ಮೇಲೆ ಬುಲ್ಡೋಜರ್! Next post bhadravati | ಭದ್ರಾವತಿ : ಹಾಫ್ ಹೆಲ್ಮೆಟ್, ಸೈಲೆನ್ಸರ್, ಎಲ್ಇಡಿ ಲೈಟ್ ಗಳ ಮೇಲೆ ಬುಲ್ಡೋಜರ್!