ಭದ್ರಾವತಿ (bhadravathi), ಡಿ. 29: ಸಾರ್ವಜನಿಕರ ಸಮ್ಮುಖದಲ್ಲಿಯೇ ಸಾವಿರಾರು ಹಾಫ್ ಹೆಲ್ಮೆಟ್, ದೋಷಪೂರಿತ ಬೈಕ್ ಸೈಲೆನ್ಸರ್ ಹಾಗೂ ಪ್ರಖರ ಬೆಳಕು ಹೊರಹೊಮ್ಮುವ ಎಲ್ಇಡಿ ಲೈಟ್ ಗಳ ಮೇಲೆ ಬುಲ್ಡೋಜರ್ ಹರಿಸಿ ಪೊಲೀಸರು ನಾಶಗೊಳಿಸಿದ ಘಟನೆ ಡಿ. 29 ರ ಭಾನುವಾರ ಬೆಳಿಗ್ಗೆ ಭದ್ರಾವತಿ ನಗರದ ರಂಗಪ್ಪ ಸರ್ಕಲ್ ನಲ್ಲಿ ನಡೆಯಿತು.
ಈ ಹಿಂದೆ ಭದ್ರಾವತಿ ನಗರದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ, ಪೊಲೀಸರು ಸದರಿ ದೋಷಪೂರಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.
ಸುಮಾರು 3000 ಸಾವಿರ ಹಾಫ್ ಹೆಲ್ಮೆಟ್, 20 ಸೈಲೆನ್ಸರ್, 50 ಪ್ರಕರ ಬೆಳಕಿನ ಎಲ್ಇಡಿ ಲೈಟ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆಯು ಭಾನುವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ,
ಸಂಚಾರಿ ನಿಯಮ ಪಾಲನೆ ಕುರಿತಂತೆ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯು, ಸಾರ್ವಜನಿಕರ ಸಮ್ಮುಖದಲ್ಲಿಯೇ ಬುಲ್ಡೋಜರ್ ಕಾರ್ಯಾಚರಣೆ ನಡೆಸಿತು. ಇದನ್ನು ವೀಕ್ಷಿಸಲು ಸ್ಥಳದಲ್ಲಿ ನೂರಾರು ನಾಗರೀಕರು ನೆರೆದಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಭದ್ರಾವತಿ ಡಿವೈಎಸ್ಪಿ ನಾಗರಾಜ್, ಇನ್ಸ್’ಪೆಕ್ಟರ್ ಜಗದೀಶ್ ಹಂಚಿನಾಳ್, ನಾಗಮ್ಮ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ – ಸಿಬ್ಬಂದಿಗಳು ಉಪಸ್ಥಿತರಿದ್ದರು.
Bhadravati, D. 29: The police destroyed thousands of half helmets, defective bike silencers and bright LED lights with bulldozers in the presence of the public on Sunday morning of December 29 at Rangappa Circle in Bhadravati city.
About 3000 thousand half helmets, 20 silencers, 50 types of LED lights were bulldozed and destroyed, the police department said in a press release issued on Sunday.
SP GK Mithun Kumar, Additional SP Anil Kumar Bhoomareddy, Bhadravati DYSP Nagaraj, Inspector Jagadish Hanchinal, Nagamma and other officers and staff of various police stations were present on this occasion.

