
shimoga | ಶಿವಮೊಗ್ಗ : ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ ವಿಧಿವಶ!
ಶಿವಮೊಗ್ಗ (shivamogga), ಜ. 12: ಶಿವಮೊಗ್ಗ ನಗರದಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ, ಶಿವಮೊಗ್ಗ ನಂದನ್ (57) ಅವರು ತಡರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.
ರೈಲ್ವೆ ನಿಲ್ದಾಣ ಸಮೀಪದ ಎ ಎ ಕಾಲೋನಿಯಲ್ಲಿರುವ ನಿವಾಸದಲ್ಲಿ, ನಂದನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜ. 12 ರ ಸಂಜೆ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ತಡರಾತ್ರಿ 1. 30 ಸುಮಾರಿಗೆ ನಂದನ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಕುಟುಂಬ ಸದಸ್ಯರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಶಿವಮೊಗ್ಗ ನಂದನ್ ಅವರು ಕಳೆದ ಹಲವು ದಶಕಗಳಿಂದ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶಿವಮೊಗ್ಗದ ಪ್ರಸಿದ್ಧ ಪೋಟೋ ಛಾಯಾಗ್ರಾಹಕರಾಗಿದ್ದರು. ಅವರು ತೆಗೆದ ಛಾಯಾಚಿತ್ರಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೌರವಗಳಿಗೆ ಪಾತ್ರವಾಗಿದ್ದವು. ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳಿಗೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಣೆ ಮಾಡಿದ್ದರು.
ದಿಗ್ಭ್ರಮೆ : ಜ. 11 ರಂದು ಸಂಜೆ ಉದಯೋನ್ಮುಖ ಪತ್ರಕರ್ತ ಶಶಿಧರ್ ಅವರು ಅನಾರೋಗ್ಯದಿಂದ ಅಸುನೀಗಿದ್ದರು. ಕೆಲವೇ ಗಂಟೆಗಳಲ್ಲಿ ಮತ್ತೋರ್ವ ಪತ್ರಕರ್ತ ನಂದನ್ ಅವರ ಅಗಲಿಕೆಯು, ಶಿವಮೊಗ್ಗ ಪತ್ರಿಕಾ ರಂಗದಲ್ಲಿ ದಿಗ್ಭ್ರಮೆ ಜೊತೆಗೆ ಶೋಕದ ವಾತಾವರಣ ಮಡುಗಟ್ಟುವಂತೆ ಮಾಡಿದೆ.
ಸಂತಾಪ : ನಂದನ್ ಅವರ ಅಕಾಲಿಕ ನಿಧನಕ್ಕೆ ಪತ್ರಕರ್ತರು, ಸಂಘಸಂಸ್ಥೆಗಳ ಪ್ರಮುಖರು ಶೋಕ ವ್ಯಕ್ತಪಡಿಸಿದ್ದಾರೆ. ‘ಉದಯ ಸಾಕ್ಷಿ’ ಡಿಜಿಟಲ್ ನ್ಯೂಸ್ ಸಂಪಾದಕರಾದ ಬಿ. ರೇಣುಕೇಶ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಪ್ರತಿಭಾನ್ವಿತ ಛಾಯಾಗ್ರಾಹಕನೋರ್ವನನ್ನು ಪತ್ರಿಕಾ ರಂಗ ಕಳೆದುಕೊಂಡಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿ ಕರುಣಿಸಲಿ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
Shivamogga (shivamogga), january12: Shimoga Nandan (57), who was working as a press photographer in Shimoga city, died of a heart attack late at night. The deceased is survived by his wife, son and daughter. Late at night around 1.30 Nandan developed chest pain. Immediately the family members admitted him to a private hospital.
Condolences: Journalists and leaders of organizations have expressed grief over Nandan’s untimely demise. ‘Udaya Saakshi’ Digital News Editor B. Renukesh expressed deep condolences and expressed his grief that the press has lost a talented photographer. May God rest his soul in eternal peace. He prayed that the family will be given the strength to bear the pain.