shimoga | Shimoga - Journalist Shashidhar passed away! shimoga | ಶಿವಮೊಗ್ಗ– ಪತ್ರಕರ್ತ ಶಶಿಧರ್ ವಿಧಿವಶ!

shimoga | ಶಿವಮೊಗ್ಗ– ಪತ್ರಕರ್ತ ಶಶಿಧರ್ ವಿಧಿವಶ!

ಶಿವಮೊಗ್ಗ (shivamogga), ಜ. 11: ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ ವಿ ಶಶಿಧರ್ (39) ಅವರು, ಜ. 11 ರ ಶನಿವಾರ ಸಂಜೆ ವಿಧಿವಶರಾಗಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ.

ಕೃಷಿ ನಗರದ ನಿವಾಸದಲ್ಲಿ ಬೆಳಿಗ್ಗೆ ಶಶಿಧರ್ ಅವರ ಆರೋಗ್ಯದಲ್ಲಿ ಏರುಪೇರಾಗಿ, ಕುಸಿದು ಬಿದ್ದಿದ್ದರು. ಅವರ ತಲೆಗೆ ಪೆಟ್ಟು ಬಿದ್ದಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಶಶಿಧರ್ ಅವರು ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಶಶಿಧರ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಲ್ಲಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಕಳೆದ 6 ವರ್ಷಗಳಿಂದ ಪಬ್ಲಿಕ್ ಟಿವಿ ವರದಿಗಾರರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಜ. 12 ರಂದು ಶಶಿಧರ್ ಅವರ ಸ್ವಗ್ರಾಮದಲ್ಲಿ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಲಿದೆ.

ಸಂತಾಪ : ಶಶಿಧರ್ ಅವರ ಅಕಾಲಿಕ ನಿಧನಕ್ಕೆ ‘ಉದಯ ಸಾಕ್ಷಿ’ ಡಿಜಿಟಲ್ ನ್ಯೂಸ್ ಸಂಪಾದಕರಾದ ಬಿ. ರೇಣುಕೇಶ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿ ಕರುಣಿಸಲಿ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

KV Sashidhar (39), who was working as a journalist in Shimoga city, passed away on Saturday evening, January 11. The deceased is survived by his father, mother, wife and relatives.

Shashidhar is originally a resident of Kallalli village in Araseikere taluk of Chikmagalur district. He was working as a public TV reporter for the last 6 years in Shimoga city. Shashidhar’s body will be cremated on january 12th at his native village.

Condolences: Shashidhar’s untimely death, ‘Udaya Saakshi’ Digital News Editor B. Renukesh expressed his condolences. May God rest his soul in eternal peace. He prayed that the family will be given the strength to bear the pain.

shimoga | Thanda Thanda... extreme cold is shaking the shimoga district! shimoga | ಥಂಡಾ ಥಂಡಾ… ತೀವ್ರ ಚಳಿಗೆ ಮಲೆನಾಡು ಗಡಗಡ..! Previous post shimoga | ಥಂಡಾ ಥಂಡಾ… ತೀವ್ರ ಚಳಿಗೆ ಮಲೆನಾಡು ಗಡಗಡ..!
shimoga | Shimoga: press photographer Shimoga Nandan passed away! shimoga | ಶಿವಮೊಗ್ಗ : ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ ವಿಧಿವಶ! Next post shimoga | ಶಿವಮೊಗ್ಗ : ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ ವಿಧಿವಶ!