
shimoga | ಮದ್ಯದ ನಶೆಯಲ್ಲಿ ಸಹೋದರರ ನಡುವೆ ಜಗಳ : ತಮ್ಮನ ದುರಂತ ಅಂತ್ಯ!
ಶಿವಮೊಗ್ಗ (shivamogga), ಜ. 12: ಕೌಟಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮದ್ಯದ ನಶೆಯಲ್ಲಿ ಸಹೋದರರ ನಡುವೆ ಏರ್ಪಟ್ಟ ಕಲಹವು, ತಮ್ಮನ ಕೊಲೆಯಲ್ಲಿ ದುರಂತ ಅಂತ್ಯಗೊಂಡ ಘಟನೆ, ಶಿವಮೊಗ್ಗ ನಗರದ ಹೊರವಲಯ ಅನುಪಿನಕಟ್ಟೆ ತಾಂಡಾದಲ್ಲಿ ತಡರಾತ್ರಿ ನಡೆದಿದೆ.
ಗಿರೀಶ್ ನಾಯ್ಕ್ (28) ಕೊಲೆಗೀಡಾದ ತಮ್ಮ ಎಂದು ಗುರುತಿಸಲಾಗಿದೆ. ಲೋಕೇಶ್ ನಾಯ್ಕ್ (30) ಆರೋಪಿತ ಅಣ್ಣನಾಗಿದ್ದಾನೆ. ಆರೋಪಿಯನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್, ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಣವೇನು? : ಗಾರೆ ಕೆಲಸ ಮಾಡುತ್ತಿದ್ದ ಲೋಕೇಶ್ ನಾಯ್ಕ್ ನು ಬೊಮ್ಮನಕಟ್ಟೆ ಬಡಾವಣೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಅನುಪಿನಕಟ್ಟೆಯಲ್ಲಿದ್ದ ನಿವಾಸಕ್ಕೆ ಆಗಮಿಸಿ ನೆಲೆಸಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಕಲಹ ನಡೆಯುತ್ತಿತ್ತು.
ರಾತ್ರಿ ಮದ್ಯದ ನಶೆಯಲ್ಲಿದ್ದ ಇಬ್ಬರ ನಡುವೆ ಮತ್ತೆ ಇದೇ ವಿಚಾರವಾಗಿ ಕಲಹವಾಗಿದೆ. ಇದು ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ತದನಂತರ ತಡರಾತ್ರಿ ವೇಳೆ ತಮ್ಮ ಗಿರೀಶ್ ನಾಯ್ಕ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆರೋಪಿ ಹತ್ಯೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
Shivamogga, january12: An inebriated quarrel between brothers related to a family matter, which tragically ended in their murder, took place late at night at Anupinakatte Tanda, an outskirt of Shimoga city.
SP GK Mithun Kumar, Inspector KT Gururaj and other staff visited the incident site and conducted an inspection. A case has been registered in Tunganagar police station in this regard.