What did MPs say about Bhadravati-Chikkajazur railway line, Sigandur Bridge, Shimoga-Hagaribommanahalli Hedhari? ಭದ್ರಾವತಿ–ಚಿಕ್ಕಜಾಜೂರು ರೈಲ್ವೆ ಮಾರ್ಗ, ಸಿಗಂದೂರು ಸೇತುವೆ, ಶಿವಮೊಗ್ಗ–ಹಗರಿಬೊಮ್ಮನಹಳ್ಳಿ ಹೆದ್ಧಾರಿ ಬಗ್ಗೆ ಸಂಸದರು ಹೇಳಿದ್ದೇನು?

ಭದ್ರಾವತಿ–ಚಿಕ್ಕಜಾಜೂರು ರೈಲ್ವೆ ಮಾರ್ಗ, ಸಿಗಂದೂರು ಸೇತುವೆ, ಶಿವಮೊಗ್ಗ–ಹಗರಿಬೊಮ್ಮನಹಳ್ಳಿ ಹೆದ್ಧಾರಿ ಬಗ್ಗೆ ಸಂಸದರು ಹೇಳಿದ್ದೇನು?

ಶಿವಮೊಗ್ಗ (shivamogga), ಜ. 14: ಭದ್ರಾವತಿ – ಚಿಕ್ಕಜಾಜೂರು ನಡುವೆ ನೂತನ ರೈಲ್ವೆ ಮಾರ್ಗ ನಿರ್ಮಾಣ ಕುರಿತಂತೆ, ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಮನವಿ ಮಾಡಿ ಚರ್ಚಿಸಲಾಗಿದೆ ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ ನಗರದ ಬಿಜೆಪಿ ಕಚೇರಿಯಲ್ಲಿ ಜ. 14 ರಂದು ಅವರು ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಎಲ್ಲ ಅಂದುಕೊಂಡಂತೆ ನಡೆದರೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ನೂತನ ಮಾರ್ಗ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭದ್ರಾವತಿ – ಚಿಕ್ಕಜಾಜೂರು ನಡುವೆ ಸುಮಾರು 80 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣವಾದರೆ, ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ. ಚಿತ್ರದುರ್ಗ, ಬಳ್ಳಾರಿ, ಗುಂತಕಲ್, ಹೈದ್ರಾಬಾದ್, ಮಂತ್ರಾಲಯ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ ಭದ್ರಾವತಿ ವಿಶ್ವೇಶ್ವರಯ್ಯ ಉಕ್ಕು ಕಬ್ಬಿಣ ಕಾರ್ಖಾನೆ (ವಿಐಎಸ್’ಎಲ್) ಪುನಾರಾರಂಭಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ. ನೂತನ ರೈಲ್ವೆ ಮಾರ್ಗದಿಂದ ಬಳ್ಳಾರಿಯಿಂದ ಕಾರ್ಖಾನೆಗೆ ಅದಿರು ಸಾಗಾಣೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಭದ್ರಾವತಿಯಿಂದ ಚನ್ನಗಿರಿ ಮೂಲಕ ನೂತನ ಮಾರ್ಗ ನಿರ್ಮಾಣದ ಚರ್ಚೆಗಳು ನಡೆಯುತ್ತಿವೆ. ಆದರೆ ಬಜೆಟ್ ನಲ್ಲಿ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ದೊರಕಿ, ಸರ್ವೇಯಾದ ನಂತರವಷ್ಟೆ ಯಾವ ಕಡೆಯಿಂದ ಮಾರ್ಗ ಹಾದು ಹೋಗಲಿದೆ ಎಂಬುವುದು ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ : ಶಿವಮೊಗ್ಗ, ಹೊಳಲೂರು, ಹೊನ್ನಾಳ್ಳಿ, ಹರಿಹರ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ನಡುವಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ಧಾರಿಯಾಗಿ ಘೋಷಣೆ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗಿದೆ ಎಂದು ಇದೇ ವೇಳೆ ಸಂಸದರು ತಿಳಿಸಿದ್ದಾರೆ.

ಸದರಿ ಹೆದ್ಧಾರಿಯು 180 ಕಿ. ಮೀ. ಉದ್ದವಿದೆ. ಪ್ರತಿನಿತ್ಯ 18 ಸಾವಿರಕ್ಕೂ ಅಧಿಕ ವಾಹನಗಳು ಸದರಿ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಆದರೆ ಹೆದ್ದಾರಿ ಕಿರಿದಾಗಿದೆ. ದುರಸ್ತಿಯಾಗಿದೆ. ಈ ಕಾರಣದಿಂದ ಹೆದ್ಧಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜಗೇರಿಸಿದರೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪ್ರಧಾನಿಯವರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದ ವೇಳೆ, ಪ್ರಧಾನಿಯವರನ್ನು ಭೇಟಿಯಾಗುವ ಅವಕಾಶ ತಮಗೆ ಲಭ್ಯವಾಗಿತ್ತು. ಈ ವೇಳೆ ರಾಷ್ಟ್ರೀಯ ಹೆದ್ಧಾರಿ ಘೋಷಣೆಯ ಮನವಿ ಮಾಡಿದ್ದೆನೆ. ಈ ಮೊದಲು ಕೇಂದ್ರ ಸಾರಿಗೆ ಸಚಿವರು ಹೊಸ ರಾಷ್ಟ್ರೀಯ ಹೆದ್ಧಾರಿ ಘೋಷಣೆ ಮಾಡುವ ಅವಕಾಶವಿತ್ತು. ಇದೀಗ ಪ್ರಧಾನಿಯವರಿಗೆ ಈ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಗಂದೂರು ಸೇತುವೆ : ಸಿಗಂದೂರು ಸೇತುವೆ ಉದ್ಘಾಟನೆ ಕುರಿತಂತೆ ಸಂಸದರು ಪ್ರತಿಕ್ರಿಯಿಸಿ, ‘ಮುಂದಿನ ತಿಂಗಳು ಸೇತುವೆಯಲ್ಲಿ ವಾಹನ ಸಂಚಾರದ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಏಪ್ರಿಲ್, ಮೇ ತಿಂಗಳ ವೇಳೆಗೆ ಅಧಿಕೃತವಾಗಿ ಸೇತುವೆ ಉದ್ಘಾಟನೆಗೋಂಡು ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಮೆಕ್ಕೆಜೋಳ ಕೇಂದ್ರ : ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರವನ್ನು ಶಿವಮೊಗ್ಗಕ್ಕೆ ಮಂಜೂರುಗೊಳಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ನ 45 ಎಕರೆ ಜಾಗದಲ್ಲಿ ಕಾರ್ಯಾರಂಭ ಮಾಡಲಿದೆ.

ಪಂಜಾಬ್ ನ ಲೂಧಿಯಾನದಲ್ಲಿ ಸದರಿ ಕೇಂದ್ರ ಕಾರ್ಯಾಚರಿಸುತ್ತಿತ್ತು. ಈ ಕೇಂದ್ರವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್  ಅವರು ಅದಿಕೃತವಾಗಿ ಪತ್ರ ಬರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಆಗ್ರಹ : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣ ಅಮಾನವೀಯವಾದುದು. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ದುಷ್ಕೃತ್ಯಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಂಸದರು ಆಗ್ರಹಿಸಿದ್ದಾರೆ.

Lok Sabha member B Y Raghavendra said that a request has been made to Minister of State for Railways V Somanna regarding the construction of a new railway line between Bhadravati – Chikkajajur.

MPs said that requested to pm modi to declare the state highway between Shimoga, Holalur, Honnalli, Harihar, Harapanahalli, Hagaribommanahalli as a National Highway.

Commenting on Sigandur Bridge, the MP said, ‘Next month there will be a trial test for vehicle traffic on the bridge. It is likely that it will be officially inaugurated by the month of April and May and will be open for vehicular traffic.

Application invitation for establishment of Village One Center in various places of Shimoga district ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ Previous post shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ
shimoga | Online Application Invitation for 6th Class Entrance Test in Residential Schools of Shimoga District shimoga | ಶಿವಮೊಗ್ಗ ಜಿಲ್ಲೆಯ ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನ Next post shimoga | ಶಿವಮೊಗ್ಗ ಜಿಲ್ಲೆಯ ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನ