ಶಿವಮೊಗ್ಗ (shivamogga), ಫೆ. 19: ಯುವಕ, ಯುವತಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪದ ಮೇರೆಗೆ, ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಓರ್ವ ಆಟೋ ಚಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಫೆ. 18 ರಂದು ನಡೆದಿದೆ.
ಶಿವಮೊಗ್ಗದ ಕ್ಲಾರ್ಕ್ ಪೇಟೆಯ ನಿವಾಸಿ ಆಟೋ ಚಾಲಕ ಇಲಿಯಾಸ್ ಯಾನೆ ಇಲ್ಲು (26), ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲೂಕು ಚೀಲೂರು ನಿವಾಸಿ, ಹೂವಿನ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಮೊಹಮದ್ ವಾಸೀಂ (28) ಹಾಗೂ ಶಿವಮೊಗ್ಗದ ಅಣ್ಣಾನಗರದ ನಿವಾಸಿ ಚಾಲಕ ವೃತ್ತಿಯ ಚಂದ್ರಶೇಖರ್ (30) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಘಟನೆ ಹಿನ್ನೆಲೆ : ಶಿವಮೊಗ್ಗ ತಾಲೂಕಿನ ಗಾಜನೂರಿನ ಹೋಟೆಲ್ ವೊಂದಕ್ಕೆ ಭದ್ರಾವತಿಯ ದಡಮಘಟ್ಟದ ಯುವಕನೋರ್ವ ಪರಿಚಯಸ್ಥ ಯುವತಿಯೊಂದಿಗೆ ಆಗಮಿಸಿದ್ದ. ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ವೇಳೆ, ಅದೇ ಹೋಟೆಲ್ ನಲ್ಲಿದ್ದ ಮೂವರು ಆರೋಪಿಗಳು ತಮ್ಮ ಮೊಬೈಲ್ ಪೋನ್ ನಲ್ಲಿ ವೀಡಿಯೋ ಮಾಡಿಕೊಂಡಿದ್ದರು.
ಸದರಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದರು. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ನಂತರ ಆಟೋದಲ್ಲಿ ಯುವಕ – ಯವತಿಯನ್ನು ಶಿವಮೊಗ್ಗ ನಗರದತ್ತ ಕರೆತಂದಿದ್ದರು. 1.50 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದರು.
ಈ ವೇಳೆ ಯುವತಿಯ ಪರ್ಸ್ ನಲ್ಲಿದ್ದ 24,500 ರೂ. ಹಾಗೂ ಯುವಕನ ಬಳಿಯಿದ್ದ1500 ರೂ. ಕಿತ್ತುಕೊಂಡಿದ್ದರು. 1.50 ಲಕ್ಷ ರೂ. ನೀಡುವಂತೆ ಹೇಳಿ ಬೆದರಿಸಿ ಕಳುಹಿಸಿದ್ದರು. ನಂತರ ಯುವಕನು 7 ಸಾವಿರ ರೂ. ಹಣದೊಂದಿಗೆ ಆರೋಪಿ ಇಲಿಯಾಸ್ ಭೇಟಿಯಾಗಿದ್ದ.
ಆರೋಪಿಯು ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಸಂಬಂಧ ಯುವಕನು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
Shimoga, February 19: On February 18, the Tunganagar police station of Shimoga arrested three accused, including an auto driver, on the charge of extorting money from a young man and a young woman.
A team led by Tunganagar police station inspector KT Gururaj succeeded in arresting the accused. The police have registered a case against the accused and have handed them over to judicial custody.

