ಭದ್ರಾವತಿ (bhadravati), ಫೆ. 21: ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ರೌಡಿ ಶೀಟರ್ ಓರ್ವನ ಕಾಲಿಗೆ, ಭದ್ರಾವತಿ ಹೊಸಮನೆ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ, ಭದ್ರಾವತಿ ನಗರದಲ್ಲಿ ಫೆ. 21 ರಂದು ನಡೆದಿದೆ.
ಗುಂಡಾ ಅಲಿಯಾಸ್ ರವಿ ಬಂಧಿತ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಗುಂಡೇಟಿಗೆ ತುತ್ತಾದ ಆರೋಪಿಯನ್ನು ಹಾಗೂ ಈತನ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಪೇದೆ ಆದರ್ಶ ಅವರನ್ನು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.
ಪ್ರಕರಣವೊಂದರಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ತೆರಳಿದ ವೇಳೆ, ಪೊಲೀಸರ ಮೇಲೆಯೇ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಸ್ಥಳದಲ್ಲಿದ್ದ ಸಬ್ ಇನ್ಸ್’ಪೆಕ್ಟರ್ ಕೃಷ್ಣ ಅವರು ಆರೋಪಿಯ ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
ಅಲರ್ಟ್ : ಇತ್ತೀಚೆಗೆ ಮಹಿಳಾ ಅಧಿಕಾರಿಗೆ ಅಕ್ರಮ ಮರಳು ದಂಧೆಕೋರರಿಂದ ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದ ನಂತರ, ಭದ್ರಾವತಿ ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಗೂಂಡಾಗಿರಿ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗಿರುವ ಟೀಕೆಗಳು ವ್ಯಕ್ತವಾಗಿದ್ದವು.
ಈ ನಡುವೆಯೇ ಹಾಡಹಗಲೇ, ಜನನಿಬಿಡ ರಸ್ತೆಯಲ್ಲಿ ಎರಡು ಗುಂಪುಗಳು ಮಾರಕಾಸ್ತ್ರ ಹಾಗೂ ದೊಣ್ಣೆಯಿಂದ ಹೊಡೆದಾಡಿಕೊಂಡ ವೀಡಿಯೋವೊಂದು ವೈರಲ್ ಆಗಿತ್ತು. ಇದು ಪೊಲೀಸ್ ಇಲಾಖೆಯನ್ನು ಮತ್ತಷ್ಟು ಮುಜುಗರಕ್ಕೀಡಾಗುವಂತೆ ಮಾಡಿತ್ತು.
ಈ ಎಲ್ಲ ಘಟನೆಗಳಿಂದ ಎಚ್ಚೆತ್ತುಕೊಂಡಂತಿರುವ ಭದ್ರಾವತಿ ಪೊಲೀಸರು, ಇದೀಗ ಅಕ್ರಮ ಚಟುವಟಿಕೆ ಮಟ್ಟ ಹಾಕಲು ಮುಂದಾಗಿರುವ ಮಾಹಿತಿಗಳು ಕೇಳಿಬಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಆರೋಪಿಯೋರ್ವನ ಕಾಲಿಗೆ ಗುಂಡಿಕ್ಕಿ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಸಂದೇಶ ರವಾನಿಸುವ ಕಾರ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
Bhadravati, Feb 20: The incident took place in Bhadravati city on February 21 when the Bhadravati Hosmane police shot a rowdy sheeter in the leg and arrested him after attacking the policemen who had gone to arrest him.
Gunda alias Ravi was identified as an arrested rowdy sheeter. SP G K Mithun Kumar said that the accused who was shot and police constable Adarsh who was injured in his attack have been admitted to the hospital.
Alert : Recently, after the case of threatening a woman officer by illegal sand traders came to light, there were widespread complaints about law and order in Bhadravati city and taluk. There was criticism that the police had failed to curb hooliganism and illegal activities.
Meanwhile, a video of two groups fighting with lethal weapon and sticks on a busy road in broad daylight went viral. This further embarrassed the police department.

