shimoga | ಶಿವಮೊಗ್ಗ ನಗರದಲ್ಲಿ ಫೆ. 24 ರಂದು ಉದ್ಯೋಗ ಮೇಳ : ಪ್ರತಿಷ್ಠಿತ ಕಂಪನಿಗಳು ಭಾಗಿ

A district-level job fair will be held on February 27 in Shivamogga. ಫೆಬ್ರವರಿ 27 ರಂದು ಶಿವಮೊಗ್ಗ ಜಿಲ್ಲಾ ಮಟ್ಟದ ಉದ್ಯೋಗ ಮೇಳ

ಶಿವಮೊಗ್ಗ (shivamogga), ಫೆ. 22: ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಪಡೆಯಲು, ನಿರುದ್ಯೋಗಿ ಯುವಕ-ಯುವತಿಯರು ಮತ್ತು ಯುವನಿಧಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳು, ಶಿವಮೊಗ್ಗ ನಗರದ ಎ.ಟಿ.ಎನ್.ಸಿ. ಕಾಲೇಜ್ ಆವರಣದಲ್ಲಿ ಫೆ. 24 ರಂದು ಆಯೋಜಿಸಿರುವ ‘ಉದ್ಯೋಗ ಮೇಳ’ದಲ್ಲಿ ಭಾಗವಹಿಸುವಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ಕರೆ ನೀಡಿದ್ದಾರೆ.

ಈ ಕುರಿತಂತೆ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಸರ್ವರಿಗೂ ಉದ್ಯೋಗ ಯೋಜನೆಯಡಿ ಕೌಶಲ್ಯಾಭಿವೃದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಗ್ಯಾರಂಟಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಂಜಿನಿಯರಿಂಗ್ ಪದವಿ, ಸ್ನಾತಕೋತ್ತರ ಪದವಿ, ಎಲ್ಲಾ ಪದವಿ / ಡಿಪ್ಲೋಮ / ಐ.ಟಿ.ಐ ಸೇರಿದಂತೆ ಪಿ.ಯು.ಸಿ., ಎಸ್.ಎಸ್.ಎಲ್.ಸಿ. ಹಾಗು 7 ನೇ ತರಗತಿ ಉತ್ತೀರ್ಣ ಹೊಂದಿರುವ ನಿರುದ್ಯೋಗಿ ಯುವಕರು ಮತ್ತು ಯುವತಿಯರು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರಿಗೂ ಪ್ರವೇಶ ಉಚಿತವಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿನ ಪ್ರತಿಷ್ಠಿತ ಕಂಪನಿಗಳು, ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ನೊಂದಾಯಿತ ನಿರುದ್ಯೋಗಸ್ಥರ ಜೊತೆಗೆ ನೇರ ಸಂದರ್ಶನ ನಡೆಸಲಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಗುವುದು. 18 ರಿಂದ 35 ವರ್ಷ ವಯೋಮಿತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮಗೆ ಸೂಕ್ತವಾದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸಂದರ್ಶನ ನಡೆಸಲು ಪ್ರತಿಯೊಂದು ಕಂಪನಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಉದ್ಯೋಗ ಮೇಳಕ್ಕೆ ಆಗಮಿಸುವ ಯುವಕ, ಯುವತಿಯರು ಕಡ್ಡಾಯವಾಗಿ ಬೆಳಿಗ್ಗೆ 9 ಗಂಟೆಗೆ ಹಾಜರಿರಬೇಕು. ಜೊತೆಯಲ್ಲಿ ಅಗತ್ಯ ದಾಖಲಾತಿಗಳಾದ ತಮ್ಮ ವಿಧ್ಯಾಭ್ಯಾಸದ ಅಂಕಪಟ್ಟಿಯ ಪ್ರತಿ, ಆಧಾರ ಕಾರ್ಡ್, ಅನುಭವ ಪ್ರಮಾಣ ಪತ್ರ (ಇದ್ದರೆ), ಸಂಕ್ಷಿಪ್ತ ವ್ಯಕ್ತಿ ಪರಿಚಯ ಪತ್ರ (ರೆಸ್ಯುಮ್) ತರಬೇಕು.

ನೋಂದಾಯಿತ ನಿರುದ್ಯೋಗಿಗಗಳು ಎಷ್ಟು ಸಂದರ್ಶನಕ್ಕೆ ಹಾಜರಾಗುತ್ತಾರೋ ಉದಾಹರಣೆಗೆ 1 ರಿಂದ 10 ಕಂಪನಿಗಳಿಗೆ ಸಂದರ್ಶನ ನೀಡಿದಲ್ಲಿ 10 ಸೆಟ್ ಗಳಲ್ಲಿ ದಾಖಲಾತಿಯ ಜೆರಾಕ್ಸ್ ಪ್ರತಿಗಳನ್ನು ತರತಕ್ಕದ್ದು. ಉದ್ಯೋಗದಾತ ಸಂಸ್ಥೆಗಳ ಆಯ್ಕೆಯೆ ಅಂತಿಮವಾಗಿರುತ್ತದೆ.

ಆಸಕ್ತ ಅಭ್ಯರ್ಥಿಗಳು ಮುಂಚಿತವಾಗಿ ಅಥವಾ ಸ್ಥಳದಲ್ಲಿ ಆನ್‌ಲೈನ್ ಲಿಂಕ್‌ನಲ್ಲಿ ನೋಂದಾಯಿಸಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸಿ ನಿರೋದ್ಯೋಗಿ ಯುವಕ ಯುವತಿಯರು ಉದ್ಯೋಗಸ್ಥರಾಗಿ ಹೊರಹೊಮ್ಮಲು ಈ ಸುವರ್ಣ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

CS Chandrabhupala, District President, District Guarantee Schemes Implementation Authority, has called upon the unemployed youth and the beneficiaries of the yuva nidhi Guarantee Scheme to participate in the ‘Udyoga Mela’ organized on February 24 at the ATNCC College premises in Shimoga city.

Young men and women arriving at the job fair must be present at 9 am. Along with necessary documents such as copy of their academic transcript, Aadhaar card, experience certificate (if any), brief personal introduction letter (resume).

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →