ಶಿವಮೊಗ್ಗ (shivamogga), ಮಾ. 4: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಚಂದ್ರಗುತ್ತಿ ಗ್ರಾಮದ ರೇಣುಕಮ್ಮ ದೇವಿ ಜಾತ್ರೆಯು ಮಾರ್ಚ್ 05 ರಿಂದ 10 ರವರೆಗೆ ನಡೆಯಲಿದೆ.
ಈ ವೇಳೆ ವರದಾ ನದಿಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ದೇವರಿಗೆ ಮುಡಿಕೊಡುವುದು, ಪಡ್ಲಿಗಿ ತುಂಬಿಸುವುದು ಮತ್ತು ಬೆತ್ತಲೆ ಸೇವೆಯನ್ನು ನಿಷೇಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ಇಂದು ಪತ್ರಿಕಾ ಪ್ರಕಟಣೆಯನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ್ದಾರೆ. ಈ ನಿಷೇಧಾಜ್ಞೆಯು ರೇಣುಕಮ್ಮ ದೇವಿಯ ರಥೋತ್ಸವ ಹಾಗೂ ಇತರೆ ಪೂಜಾ ಕಾರ್ಯಗಳು ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
Shimoga, March 4: The Renukamma Devi Jatre of Chandragutti village, Soraba Taluk, Shimoga District will be held from March 05 to 10.
At this time, Shivamogga DC Gurudatta Hegade has issued an order that religious bathing, filling padligi and naked service in Varada river is prohibited.
The DC has issued a press release in this regard today. The DC in his order said that this prohibition order does not apply to conduct of Renukamma Devi Rathotsava and other worship functions and religious rites.
#soraba, #sorab, #soraba #Renukamma Devi Jatre of Chandragutti #RenukammaDevi, #Chandragutti, #chandragutti, #shimoga, #shivamogga, #shimoganewsupdate,

