
thirthahalli | ತೀರ್ಥಹಳ್ಳಿಯಲ್ಲಿ 2 ಮನೆಗಳ ಕಳ್ಳತನ ಪ್ರಕರಣ : ಶಿವಮೊಗ್ಗದ ಮೂವರು ಅರೆಸ್ಟ್!
ತೀರ್ಥಹಳ್ಳಿ (thirthahalli), ಮಾ. 16: ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮನೆಗಳ್ಳತನ ಕೃತ್ಯಗಳಿಗೆ ಸಂಬಂಧಿಸಿದಂತೆ, ಶಿವಮೊಗ್ಗ ನಗರದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆಯು ಮಾರ್ಚ್ 16 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಮಾ. 13 ರಂದು ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದೆ.
ಶಿವಮೊಗ್ಗದ ಗೋಪಾಳದ ಶ್ರೀರಾಮನಗರ ನಿವಾಸಿ ಅಬ್ದುಲ್ ಶಫೀಕ್ (23), ಸೂಳೇಬೈಲು ಬಡಾವಣೆಯ ಖಲೀಲ್ ಖಾನ್ (24) ಹಾಗೂ ಜೆ ಪಿ ನಗರದ ನಿವಾಸಿ ಸೈಯದ್ ಜಾವೀದ್ (23) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದೆ.
ಆರೋಪಿಗಳಿಂದ 80 ಸಾವಿರ ರೂ. ಮೌಲ್ಯದ ಸುಜುಕಿ ಆಕ್ಸೆಸ್ ಸ್ಕೂಟರ್, 5. 50 ಲಕ್ಷ ರೂ. ಮೌಲ್ಯದ 72 ಗ್ರಾಂ ತೂಕದ ಬಂಗಾರದ ಆಭರಣ, 22 ಸಾವಿರ ರೂ. ಮೌಲ್ಯದ 265 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಸೇರಿದಂತೆ ಒಟ್ಟಾರೆ 6.52 ಲಕ್ಷ ರೂ. ಮೌಲ್ಯದ ನಗನಾಣ್ಯ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಎಸ್ ಕಲಗುಚ್ಚಿ ಮಾರ್ಗದರ್ಶನದಲ್ಲಿ ಮಾಳೂರು ಸರ್ಕಲ್ ಇನ್ಸ್’ಪೆಕ್ಟರ್ ಶ್ರೀಧರ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ಕುಮಾರ್ ಕುರಗುಂದ, ಶಿವಾನಂದ ಧರೇನವರ್,
ಸಿಬ್ಬಂದಿಗಳಾದ ಸುರಕ್ಷಿತ್, ಮೋಹನ್, ಮೇಘರಾಜ್, ಮಂಜುನಾಥ್, ಲೋಕೇಶ್, ಸಂತೋಷ್ ಕುಮಾರ್, ರಮೇಶ್ ನಾಯ್ಕ್, ವಿವೇಕ, ಪುನೀತ್ ಕುಮಾರ್, ವಿನಯ್ ಕುಮಾರ್, ಅರವಿಂದ್, ಚೇತನ್ ಕುಮಾರ್, ಅಭಿಲಾಷ್, ಮಂಜಾನಾಯ್ಕ್, ಪ್ರವೀಣ್ ಕುಮಾರ್ ಮತ್ತು ಪ್ರಸನ್ನರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
Thirthahalli, Mar 16: Police have succeeded in arresting three accused from Shivamogga city in connection with two house burglaries that took place under the jurisdiction of Malur police station in Thirthahalli taluk.