
sagara accident | ಸಾಗರ : ರಸ್ತೆ ಅಪಘಾತದಲ್ಲಿ ಸಾಫ್ಟ್’ವೇರ್ ಎಂಜಿನಿಯರ್, ಆಟೋ ಚಾಲಕ ಸಾವು!
ಸಾಗರ (sagara), ಮಾ. 17: ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 16 ರ ರಾತ್ರಿ ಬೈಕ್, ಆಟೋ ಹಾಗೂ ಕಾರಿನ ನಡುವೆ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ.
ಬೈಕ್ ನಲ್ಲಿ ತೆರಳುತ್ತಿದ್ದ ಬೆಂಗಳೂರಿನ ನಿವಾಸಿ, ಸಾಫ್ಟ್’ವೇರ್ ಎಂಜಿನಿಯರ್ ಸುಧೀರ್ (42) ಹಾಗೂ ಆಟೋ ಚಾಲಕ, ಸಾಗರದ ಗಾಂಧಿನಗರ ನಿವಾಸಿ ರಾಘವೇಂದ್ರ (48) ಮೃತಪಟ್ಟವರೆಂದು ಗುರುತಿಸಲಾಗಿದೆ.
ಬೈಕ್ ನಲ್ಲಿ ತೆರಳುತ್ತಿದ್ದ ಓರ್ವರು ಮತ್ತು ಆಟೋದಲ್ಲಿದ್ದ ಇಬ್ಬರು ಮಕ್ಕಳು ಹಾಗೂ ಓರ್ವ ವಯಸ್ಕರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.
ಬೈಕ್, ಕಾರು ಹಾಗೂ ಆಟೋದ ನಡುವೆ ಈ ಅವಘಡ ಸಂಭವಿಸಿದೆ. ಸಾಫ್ಟ್’ವೇರ್ ಎಂಜಿನಿಯರ್ ಸುಧೀರ್ ಅವರು ಸಾಗರದೆಡೆಯಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿದ್ದರು ಎಂದು ಹೇಳಲಾಗಿದ್ದು, ಅವಘಡದ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sagara, Mar 17: Two people were killed and four others were injured in a series of road accidents involving a bike, an auto and a car on the night of March 16 in the Anandpur police station limits of Sagara taluk. The police visited the accidnet spot and conducted an investigation. A case has been registered at Anandpura police station in this regard.