shimoga | Shivamogga: Married woman commits suicide due to harassment by private financial institutions and lenders! shimoga | ಶಿವಮೊಗ್ಗ : ಖಾಸಗಿ ಹಣಕಾಸು ಸಂಸ್ಥೆಗಳು, ಸಾಲಗಾರರ ಕಿರುಕುಳಕ್ಕೆ ವಿವಾಹಿತ ಆತ್ಮಹತ್ಯೆಗೆ ಶರಣು!

shimoga | ಶಿವಮೊಗ್ಗ : ಖಾಸಗಿ ಹಣಕಾಸು ಸಂಸ್ಥೆಗಳು, ಸಾಲಗಾರರ ಕಿರುಕುಳಕ್ಕೆ ಮತ್ತೋರ್ವ ಬಲಿ!

ಶಿವಮೊಗ್ಗ (shivamogga), ಏ. 18: ಶಿವಮೊಗ್ಗ ಜಿಲ್ಲೆಯಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಸಾಲಗಾರರ ಕಿರುಕುಳಕ್ಕೆ ಮತ್ತೋರ್ವ ಬಲಿಯಾಗಿದ್ದಾನೆ. ವಿವಾಹಿತ ವ್ಯಕ್ತಿಯೋರ್ವ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ, ಶಿವಮೊಗ್ಗದ ಗಾಡಿಕೊಪ್ಪ ಬಡಾವಣೆಯಲ್ಲಿ ಏ. 17 ರಂದು ನಡೆದಿದೆ.

ವಿನೋದ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಎಂದು ಗುರುತಿಸಲಾಗಿದೆ. ಈತ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ತಾಯಿ ಹಾಗೂ ಪತ್ನಿಯ ಜೊತೆ ವಾಸಿಸುತ್ತಿದ್ದ. ಈತನಿಗೆ ಒಂದೂವರೆ ವರ್ಷದ ಮಗುವಿದೆ.

ವಿನೋದ್ ಕುಮಾರ್ ನು ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಬಡ್ಡಿ ವ್ಯವಹಾರ ನಡೆಸುವ ಖಾಸಗಿ ವ್ಯಕ್ತಿಗಳ ಬಳಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಬಡ್ಡಿ ರೂಪದಲ್ಲಿಯೇ ಲಕ್ಷಾಂತರ ರೂ. ಪಾವತಿಸಿದ್ದ.

ದುಬಾರಿ ಬಡ್ಡಿ ಕಟ್ಟಲಾಗದೆ ಕಂಗಲಾಗಿದ್ದ. ಇತ್ತೀಚೆಗೆ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಬಡ್ಡಿ ವ್ಯವಹಾರ ನಡೆಸುವವರ ಕಾಟ ವಿಪರೀತವಾಗಿತ್ತು. ಮೊಬೈಲ್ ಪೋನ್ ಮೂಲಕ ಹಾಗೂ ಮನೆಗೆ ಆಗಮಿಸಿ, ಸಾಲ ಮರು ಪಾವತಿಸುವಂತೆ ಒತ್ತಡ ಹಾಕುವುದರ ಜೊತೆಗೆ ಬೆದರಿಕೆ ಹಾಕಲಾರಂಭಿಸಿದ್ದರು.

ಸಾಲಗಾರರ ಕಾಟದಿಂದ ಬೇಸತ್ತು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ತಾಯಿ ಹಾಗೂ ಪತ್ನಿ ಆರೋಪಿಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖಡಕ್ ಪೊಲೀಸ್ ಅಧಿಕಾರಿ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Shivamogga, Apr. 18: Another person has fallen victim to the harassment of private financial institutions and lenders in Shivamogga. A married man committed suicide by hanging himself at home in Gadikoppa area of ​​Shivamogga on Apr. 17.

Vinod Kumar (35) has been identified as a married man who committed suicide. He worked as a painter and lived with his mother and wife. He has a one-and-a-half-year-old child.

The deceased’s mother and wife have alleged that he committed suicide by hanging himself at home due to the harassment of creditors. A complaint has been filed at the Tunganagar police station in this regard. Inspector K T Gururaj is investigating the case.

Bhadravati: Four arrested for robbing valuables! bhadravati | ಭದ್ರಾವತಿ : ಗುಜುರಿ ವಸ್ತುಗಳ ರಾಬರಿ ಮಾಡಿದ್ದ ನಾಲ್ವರ ಸೆರೆ! Previous post bhadravati | ಭದ್ರಾವತಿ : ಗುಜುರಿ ವಸ್ತುಗಳ ರಾಬರಿ ಮಾಡಿದ್ದ ನಾಲ್ವರ ಸೆರೆ!
shimoga | Thirthahalli boy dies of KFD disease : Shivamogga DC orders investigation! shimoga | ಮಂಗನ ಕಾಯಿಲೆಗೆ ತೀರ್ಥಹಳ್ಳಿ ಬಾಲಕ ಬಲಿ : ತನಿಖೆಗೆ ಶಿವಮೊಗ್ಗ ಡಿಸಿ ಆದೇಶ! Next post shimoga | ಮಂಗನ ಕಾಯಿಲೆಗೆ ತೀರ್ಥಹಳ್ಳಿ ಬಾಲಕ ಬಲಿ : ತನಿಖೆಗೆ ಶಿವಮೊಗ್ಗ ಡಿಸಿ ಆದೇಶ!