
shimoga | ಮಂಗನ ಕಾಯಿಲೆಗೆ ತೀರ್ಥಹಳ್ಳಿ ಬಾಲಕ ಬಲಿ : ತನಿಖೆಗೆ ಶಿವಮೊಗ್ಗ ಡಿಸಿ ಆದೇಶ!
ಶಿವಮೊಗ್ಗ, ಏ.18: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ದತ್ತರಾಜಾಪುರ ಗ್ರಾಮದ 8 ವರ್ಷದ ರಚಿತ್ ಕೆ ಎಂಬ ಬಾಲಕ, ಕೆ ಎಫ್ ಡಿ ಕಾಯಿಲೆಯಿಂದ ಏ. 17 ರಂದು ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಏಪ್ರಿಲ್ 4 ರಂದು ರಚಿತ್ ರವರ ಅಕ್ಕ ರಮ್ಯಾರವರು ಜ್ವರದಿಂದ ಬಳಲುತ್ತಿದ್ದರು. ಅವರು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆ ದಾಖಲಾಗಿ ಕೆಎಫ್ ಡಿ ಪರೀಕ್ಷೆ ಮಾಡಿಸಿದಾಗ, ಕೆಎಫ್ ಡಿ ಪಾಸಿಟಿವ್ ಬಂದಿತ್ತು.
ಬಾಲಕ ರಚಿತ್ ಗೆ ಏಪ್ರಿಲ್ 5 ರಂದು ಸುಸ್ತು ಮತ್ತು ವಾಂತಿ ಕಾಣಿಸಿಕೊಂಡಿತ್ತು. ಜೆಸಿ ಆಸ್ಪತ್ರೆಗೆ ದಾಖಲಾಗಿ ಕೆಎಫ್ ಡಿ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಕಂಡುಬಂದಿತ್ತು. ಅಕ್ಕ ರಮ್ಯಾ ಮತ್ತು ರಚಿತ್ ಇಬ್ಬರನ್ನು ಏ. 6 ರಂದು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಬಿಎಆರ್ ಕೆ ಅಡಿ ಉಚಿತ ಚಿಕಿತ್ಸೆ ನೀಡಲಾಗುತ್ತಿತ್ತು. ರಮ್ಯಾ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು.
ಆದರೆ ರಚಿತ್ ಆರೋಗ್ಯ ಚೇತರಿಸದೇ ಇದ್ದುದರಿಂದ ಆಸ್ಪತ್ರೆಯಲ್ಲಿಯೇ ಇರಿಸಿ ತೀವ್ರ ನಿಘಾ ಘಟಕ ದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಚಿತ್ ಮರಣ ಹೊಂದಿದ್ದಾರೆ.
ತನಿಖೆಗೆ ಸೂಚನೆ : ಸದರಿ ಪ್ರಕರಣದ ಕುರಿತಂತೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸೂಚನೆ ನೀಡಿದ್ದಾರೆ.
Shivamogga, April 18: An 8-year-old boy named Rachit K from Dattarajapura village under Konandur Primary Health Center in Thirthahalli taluk of Shivamogga district died of KFD disease ( monkey fever ) on April 17 at KMC Manipal Hospital.
Instructions for investigation : DC Gurudatta Hegde has instructed the Health Department officials to conduct a proper investigation into the case and submit a report.