Registration - Stamp duty hike from August 31st: What did Commissioner Mullai Mugilan say? ಬೆಂಗಳೂರು | ಆಗಸ್ಟ್ 31 ರಿಂದ ನೋಂದಣಿ - ಮುದ್ರಾಂಕ ಶುಲ್ಕ ಏರಿಕೆ : ಆಯುಕ್ತ ಮುಲ್ಲೈ ಮುಗಿಲನ್ ಹೇಳಿದ್ದೇನು?

shimoga sub registrar office | ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ : ಎಲ್ಲಿಗೆ? ಯಾವಾಗ?

ಶಿವಮೊಗ್ಗ (shivamogga), ಜೂ. 5: ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿ ಸರ್ಕಲ್ ಸಮೀಪವಿರುವ, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿ ಸ್ಥಳಾಂತರಿಸಲಾಗುತ್ತಿದೆ.

ಈ ಕುರಿತಂತೆ ಸಬ್ ರಿಜಿಸ್ಟ್ರಾರ್ ಕಚೇರಿ ಹಿರಿಯ ಉಪ ನೊಂದಣಾಧಿಕಾರಿಗಳು ಜೂ. 5 ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿರುವ, ಮಳಿಗೆ ಸಂಖ್ಯೆ 108 ಮತ್ತು 109 ಕ್ಕೆ ಕಚೇರಿ ಸ್ಥಳಾಂತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಜೂ. 09 ರಿಂದ ಎಪಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿ ಅಧಿಕೃತವಾಗಿ ನೂತನ ಕಚೇರಿ  ಕಾರ್ಯಾರಂಭ ಮಾಡುತ್ತಿದೆ ಎಂದು ಹಿರಿಯ ಉಪನೋಂದಣಾಧಿಕಾರಿಗಳಾದ ಧನರಾಜ್ ಹಾಗೂ ಸುಬ್ರಹ್ಮಣ್ಯ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

*** ‘ಎಪಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿ ಆರಂಭವಾಗುತ್ತಿರುವ ಉಪ ನೊಂದಣಾಧಿಕಾರಿಗಳ ಕಚೇರಿಯು 5 ಸಾವಿರ ಚದುರಡಿ ವಿಸ್ತೀರ್ಣ ಹೊಂದಿದೆ. ನಾಗರೀಕರಿಗೆ ಅನುಕೂಲವಾಗುವ ಸಕಲ ಸೌಲಭ್ಯ ಹೊಂದಿದೆ. ಅಶಕ್ತರು, ವಿಕಲಚೇತನರು, ವಯೋವೃದ್ದರಿಗೆ ಲಿಫ್ಟ್ ವ್ಯವಸ್ಥೆಯಿದೆ. ಹಾಗೆಯೇ ರ್ಯಾಂಪ್, ವ್ಹೀಲ್ ಚೇರ್ ಸೌಲಭ್ಯವಿರಲಿದೆ. ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಯಿರಲಿದೆ. ಉಳಿದಂತೆ ಕಚೇರಿಗೆ ಆಗಮಿಸುವ ನಾಗರೀಕರು ಕುಳಿತುಕೊಳ್ಳಲು ಆಸನ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ನೂತನ ಕಚೇರಿಯಲ್ಲಿರಲಿದೆ’ ಎಂದು ಹಿರಿಯ ಉಪನೋಂದಣಾಧಿಕಾರಿಗಳಾದ ಧನರಾಜ್ ಹಾಗೂ ಸುಬ್ರಹ್ಮಣ್ಯ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Shivamogga, Jun. 5: The office of the Senior Deputy Registrar, working in the Shivamogga-Bhadravati Urban Development Authority complex, near Vinobanagar Police Chowki Circle in Shivamogga, is being relocated.

It has been informed that the office is being shifted to shop numbers 108 and 109, on the first floor of the APMC Commercial Complex on Sagar Road in Shivamogga city. Senior Deputy Registrars Dhanraj and Subrahmanya have informed in a press release that the new office will officially start functioning at the APMC Commercial Complex from June 09.

shimoga accident | Shivamogga: Horrible accident - Bengaluru resident dies, 10 people injured! shimoga accident | ಶಿವಮೊಗ್ಗ : ಭೀಕರ ಅಪಘಾತ - ಬೆಂಗಳೂರಿನ ನಿವಾಸಿ ಸಾವು, 10 ಜನರಿಗೆ ಗಾಯ! Previous post shimoga accident | ಶಿವಮೊಗ್ಗ : ಭೀಕರ ಅಪಘಾತ – ಬೆಂಗಳೂರಿನ ನಿವಾಸಿ ಸಾವು, 10 ಜನರಿಗೆ ಗಾಯ!
Power outage in various parts of Shivamogga city - taluk on September 27 ಶಿವಮೊಗ್ಗ ನಗರ - ತಾಲೂಕಿನ ವಿವಿಧೆಡೆ ಸೆಪ್ಟೆಂಬರ್ 27 ರಂದು ವಿದ್ಯುತ್ ವ್ಯತ್ಯಯ Next post shimoga | ಶಿವಮೊಗ್ಗ : ಜೂ. 6 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ