shimoga | BREAKING NEWS |ಶಿವಮೊಗ್ಗ : ವ್ಯಕ್ತಿಯ ಭೀಕರ ಕೊ*ಲೆ – ಪರಿಚಯಸ್ಥರಿಂದಲೇ ಕೃತ್ಯ?

ಭದ್ರಾವತಿ : ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಬೆಂಕಿ! ಭದ್ರಾವತಿ, ಫೆಬ್ರವರಿ 20: ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಭದ್ರಾವತಿಯ ನೆಹರು ನಗರದಲ್ಲಿ ಫೆಬ್ರವರಿ 17 ರ ಮುಂಜಾನೆ ನಡೆದಿದೆ. ಆದಿಲ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೆಂಕಿಗಾಹುತಿಯಾದ ಬೈಕ್ ಗಳಾಗಿವೆ. ಸದರಿ ಬೈಕ್ ಗಳು ಆದಿಲ್ ಅವರ ಸಹೋದರರಿಗೆ ಸೇರಿದ್ದಾಗಿವೆ. ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟಾರೆ 1.85 ಲಕ್ಷ ರೂ. ನಷ್ಟವಾಗಿದೆ. ಬೆಂಕಿ ಹಚ್ಚಿದವರು ಯಾರು? ಕಾರಣವೇನು? ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Bhadravati: Three bikes parked in front of a house set on fire! Bhadravati, February 20: In a shocking incident, miscreants set fire to three bikes parked in front of a house in Nehru Nagar, Bhadravati, during the early hours of February 17. The incident occurred near the residence of a man named Adil. The bikes that were burnt include a Bajaj Discover, Pulsar, and Platina. These belonged to Adil’s brothers. All three bikes were completely gutted in the fire, resulting in a total loss estimated at ₹1.85 lakh. The identity of those who set the fire and the motive behind the act remain unknown and are under police investigation. A case has been registered at the Bhadravati Old Town Police Station in connection with the incident.

ಶಿವಮೊಗ್ಗ (shivamogga), ಜೂ. 30: ಮಚ್ಚಿನಿಂದ ಹೊಡೆದು ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊ*ಲೆ ಮಾಡಿದ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಚಿಕ್ಕಮರಸ ಗ್ರಾಮದಲ್ಲಿ ಜೂ. 29 ರ ರಾತ್ರಿ 9 ರಿಂದ 10 ಗಂಟೆ ನಡುವೆ ನಡೆದಿದೆ.

ಕುಂಸಿ ಗ್ರಾಮದ ನಿವಾಸಿಯಾದ ವಸಂತ್ (34) ಕೊ*ಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಘಟನಾ ಸ್ಥಳಕ್ಕೆ ಇನ್ಸ್’ಪೆಕ್ಟರ್ ದೀಪಕ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ವಸಂತ್ ಕೊಲೆಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಆದರೆ ಕುಂಸಿ ಗ್ರಾಮದ ಇಬ್ಬರು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ಘಟನೆಯ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ಧಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Shivamogga, June 30: A man was brutally murdered by being beaten with a machete in Chikkamarasa village near Kusi in Shivamogga taluk on June 29 between 9 and 10 pm.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →