
shimoga | ಶಿವಮೊಗ್ಗ | ತುಂಡರಿಸಿ ಬಿದ್ದ ವಿದ್ಯುತ್ ಲೈನ್ : ಹಸು ಸಾವು – ತಪ್ಪಿದ ಭಾರೀ ದುರಂತ!
ಶಿವಮೊಗ್ಗ (shivamogga), ಜು. 25: ಕಂಬದಿಂದ ವಿದ್ಯುತ್ ಲೈನ್ ತುಂಡರಿಸಿ ಬಿದ್ದ ಪರಿಣಾಮ, ರಸ್ತೆ ಬದಿ ಹಸಿರು ಮೇಯುತ್ತಿದ್ದ ಹಸುವೊಂದು ಶಾಕ್ ನಿಂದ ಮೃತಪಟ್ಟ ಘಟನೆ, ಶಿವಮೊಗ್ಗ ನಗರದ ಹೊರವಲಯ ಆಲ್ಕೋಳದಲ್ಲಿ ಜು. 25 ರಂದು ನಡೆದಿದೆ.
ಮಂಗಳ ಮಂದಿರಕ್ಕೆ ಹೋಗುವ ರಸ್ತೆಯಲ್ಲಿ ಘಟನೆ ನಡೆದಿದೆ. ಮಳೆ ಸುರಿಯುತ್ತಿದ್ದ ವೇಳೆ ದಿಢೀರ್ ಆಗಿ ವಿದ್ಯುತ್ ಕಂಬದಿಂದ ಲೈನ್ ತುಂಡರಿಸಿ ರಸ್ತೆಗೆ ಬಿದ್ದಿದೆ.
ಈ ವೇಳೆ ಸಮೀಪದಲ್ಲಿಯೇ ಹಸಿರು ಮೇಯುತ್ತಿದ್ದ ಆಕಳು ಶಾಕ್ ನಿಂದ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗಾಡಿಕೊಪ್ಪದ ನಿವಾಸಿ ಪ್ರಭು ಎಂಬುವರಿಗೆ ಸದರಿ ಆಕಳು ಸೇರಿದ್ದಾಗಿದೆ. ಮೃತಪಟ್ಟ ಆಕಳಿನ ಮೌಲ್ಯ ಸರಿಸುಮಾರು 70 ಸಾವಿರ ರೂ.ಗಳಿಗೂ ಅಧಿಕ ಎಂದು ಮಾಲೀಕ ಪ್ರಭು ಅವರು ಮಾಹಿತಿ ನೀಡಿದ್ದಾರೆ.
ತಪ್ಪಿದ ದುರಂತ : ಮಳೆ ಸುರಿಯುತ್ತಿರುವ ವೇಳೆ ರಸ್ತೆಯ ಮೇಲೆಯೇ ವಿದ್ಯುತ್ ಲೈನ್ ತುಂಡಾಗಿ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಜನ – ವಾಹನ ಸಂಚಾರವಿರಲಿಲ್ಲ. ಒಂದು ವೇಳೆ ಸಾರ್ವಜನಿಕರೇನಾದರೂ ಈ ವೇಳೆ ರಸ್ತೆಯಲ್ಲಿ ಓಡಾಡುತ್ತಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Shivamogga, Jul. 25: A cow grazing on the roadside died of shock after an electric line fell from a pole in Alkola, on the outskirts of Shivamogga city, on Jul. 25. The incident took place on the road leading to Mangal Mandir. When it was raining, the line suddenly broke from the electric pole and fell on the road.